ದೇವೇಗೌಡರು ಪ್ರಧಾನಿಯಾಗಲು ಪ್ರಮುಖ ಕಾರಣರಾಗಿದ್ದ ರಾಜಕಾರಣಿ ಕರುಣಾನಿಧಿ: ಸಿಎಂ


ಬೆಂಗಳೂರು,ಆ.08 ಕಿರುವಾಗಲೇ ದಂತ ಕಥೆಯಂತಿದ್ದ ದಕ್ಷಿಣ ಭಾರತ ಪ್ರಮುಖ ಮುತ್ಸದ್ಧಿ ರಾಜಕಾರಣಿ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವಾತಾವಧಿ ಪೂರ್ಣ ತಮಿಳುನಾಡು ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸದೃಢಗೊಳಿಸುವಲ್ಲಿ ಪ್ರದಶರ್ಿಸಿದ ಮುತ್ಸದ್ದಿತನ ವೈಶಿಷ್ಠಪೂರ್ಣ. ದೀನ ದಲಿತರ ಪರವಾಗಿ ಜನಪರ ಕಾರ್ಯಗಳನ್ನು ಜಾರಿಗೆ ತಂದ ಕರುಣಾನಿಧಿ ಐದು ಬಾರಿ ಮುಖ್ಯಮಂತ್ರಿ ತಮಿಳುನಾಡಿನ ಅಭಿವೃದ್ದಿಗೆ ದೊಡ್ಡಮಟ್ಟದ ಕೊಡುಗೆ ನೀಡಿದ್ದಾರೆ.

ಹಲವು ಕರುಣಾನಿಧಿ ಅವರನ್ನು ನಾವು ಭೇಟಿ ಮಾಡಿದ್ದು, ಆ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಹಿಂದುಳಿದ ವರ್ಗ ಹಾಗೂ ತುಳಿತಕ್ಕೆ ಒಳಗಾದವರ ಬಗ್ಗೆ ಅವರು ಜಾರಿಗೆ ತಂದ ಜನಪ್ರಿಯ ಯೋಜನೆಗಳನ್ನು ದೇಶದ ವಿವಿಧ ರಾಜ್ಯಗಳು ಅನುಸರಿಸುತ್ತಿವೆ. ಕನ್ನಡಿಗ ಎಚ್.ಡಿ.ದೆವೇಗೌಡರು ಪ್ರಧಾನಿಯಾಗಲು ಕರುಣಾನಿಧಿ ಅವರ ಪಾತ್ರ ಪ್ರಮುಖವಾಗಿತ್ತು ಎಂದು ಸ್ಮರಿಸಿದ್ದಾರೆ. 

ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದ ಅವರು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿ ದನಿಯಾಗಿದ್ದರು. ಅವರ ರಾಜಕೀಯ ಸಿದ್ದಾಂತ ನಮ್ಮೆಲ್ಲರಿಗೂ ಮಾದರಿಯಾಗಿದೆ. ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಠಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದ್ದು, ತಮಿಳುನಾಡು ಒಬ್ಬ ದಾರ್ಶನಿಕನನ್ನು ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.