ವೆಂಕಟೇಶರಾವ್ ಕುಲಕರ್ಣಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಕೊಪ್ಪಳ 14:  ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಬೆಂಗಳೂರು ಹಾಗೂ ಸುವರ್ೆ ಕಲ್ಚರಲ್ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಕರುನಾಡ ಕಣ್ಮಣಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ರಂಗಮಂದಿರದಲ್ಲಿ ವಾತರ್ಾಲೋಕ ದಿನಪತ್ರಿಕೆ ಸಂಪಾದಕ ವೆಂಕಟೇಶರಾವ್ ಆರ್ ಕುಲಕರ್ಣಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

64ನೇ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ, ಬೆಂಗಳೂರಿನ ನಯನ ರಂಗಮಂದಿರದಲ್ಲಿ  ಡಿ. 12 ಮತ್ತು 13ರಂದು ಹಮ್ಮಿಕೊಂಡ 5ನೇ ರಾಷ್ಟ್ರೀಯ ನೃತ್ಯ ಕಲಾ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಕಾರ್ಯಕ್ರಮದಲ್ಲಿ, ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ರಮೇಶ ಸುವರ್ೆ, ಗೌರವ ಅಧ್ಯಕ್ಷ ಹಾಗೂ ಹಿರಿಯ ತಂತ್ರಜ್ಞ ಡಾ. ಸುರೇಶ ಎಲ್. ಶರ್ಮಾ, ಉತ್ತರ ಕನರ್ಾಟಕ ವಿಭಾಗದ ಸಂಚಾಲಕ ಬಿ.ಎಚ್.ಹೊಂಗಲ್, ಸುವರ್ೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ದೇವೆಂದ್ರ ಕುಮಾರ ನಿಗಡೆ, ಪ್ರಧಾನ ಕಾರ್ಯದರ್ಶಿ  ಕಿಶನ್ ಸುರ್ವೇ  ಇದ್ದರು. 

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರಚಂದ್ರಶೇಖರನಾಥ ಸ್ವಾಮೀಜಿ ವಹಿಸಿದ್ದರು. ಉದ್ಘಾಟಕರಾಗಿ ಚೆಳ್ಳಕೆರೆ ಶಾಸಕ ಟಿ.ರಘುಮೂತರ್ಿ, ಅಧ್ಯಕ್ಷರಾಗಿ ಸಾಹಿತಿ ಹಾಗೂ ಕೃಷಿ ತಜ್ಞ ಡಾ. ಶರಶ್ಚಂದ್ರ ರಾನಡೆ, ಮುಖ್ಯ ಅತಿಥಿಗಳಾಗಿ ಹಿರಿಯ ಚಲನಚಿತ್ರ ಕಲಾವಿದ ಬ್ಯಾಂಕ್ ಜನಾರ್ಧನ್, ಚಿಕ್ಕಹೆಜ್ಜಾಜಿ ಮಹದೇವ, ಚಲನಚಿತ್ರ ನಟಿಯರಾದ ಮೀನಾ, ಡಿ.ವಿ.ಸೌಜನ್ಯ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಅಂಬರೀಷ್ ಜಿ. ಭಾಗವಹಿಸಿದ್ದರು.  ಮಾಜಿ ಸಚಿವರಾದ ರಾಮಚಂದ್ರಗೌಡರು, ಶಶಿಕಾಂತ ಅ. ನಾಯಕ ಹಾಗೂ ಮಾಜಿ ಶಾಸಕ, ಕಲಾವಿದ ನೆ.ಲ.ನರೇಂದ್ರಬಾಬು ಅವರು ಸಾಧಕರಿಗೆ ಪ್ರಶಸ್ತಿ ವಿತರಿಸಿದರು.