ಮುಂಬೈ, ಜ 29 ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮ್ಮ ಮುಂಬರುವ ಚಿತ್ರಕ್ಕಾಗಿ ಎಂಟು ಕೆಜಿ ತೂಕ ಇಳಿಕೆ ಮಾಡಿಕೊಂಡಿದ್ದಾರೆ.ಇಮ್ತೀಯಾಜ್ ಅಲಿ ನಿರ್ದೇಶನದ ಲವ್ ಆಜ್ ಕಲ್ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ಈ ಚಿತ್ರದಲ್ಲಿ ನಟಿ ಸಾರಾ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ಇದೇ ಮೊದಲ ಬಾರಿಗೆ ತೆರೆಹಂಚಿಕೊಂಡಿದ್ದಾರೆ.ಈ ಇಬ್ಬರ ಜೋಡಿಗೆ ಪ್ರೇಕ್ಷಕ ವರ್ಗದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಕಾರ್ತಿಕ್, ಚಿತ್ರ ಪ್ರಚಾರ ದಲ್ಲಿ ತೊಡಗಿದ್ದಾರೆ.
ಈ ಚಿತ್ರದಲ್ಲಿ ಕಾರ್ತಿಕ್, ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1990ರಲ್ಲಿ ರಘು ಆಗಿದ್ದ ಅವರು ಕಾಣಿಸಿಕೊಂಡಿದ್ದರೆ 2020ರಲ್ಲಿ ವೀರ್ ಆಗಿಯೂ ಮಿಂಚಲಿದ್ದಾರೆ.ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೊಂದನ್ನು ಶೇರ್ ಮಾಡಿ, 90ರ ದಶಕದ ಹಾಟ್ ಹುಡುಗನ -8 ಕೆಜಿ # ಲವ್ ಆಜ್ ಕಲ್ ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ.ಈ ಭಾವ ಚಿತ್ರದಲ್ಲಿ ರಘು ಪಾತ್ರದಲ್ಲಿ ಕಾರ್ತಿಕ್ ಕಾಣಿಸಿಕೊಂಡಿದ್ದು, ಶಾಲಾ ಸಮವಸ್ತ್ರ ಧರಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಕಾರ್ತಿಕ್ ಭಾರಿ ಕಸರತ್ತು ಮಾಡಿದ್ದಾರಂತೆ. ಈ ಚಿತ್ರ ಫೆ.14ರಂದು ತೆರೆ ಕಾಣಲಿದೆ.