ಕರೋನ್ ವೈರಸ್: ಒಲಿಂಪಿಕ್ಸ್ ಮುಂದೂಡುವ ಪ್ರಶ್ನೆಯೇ ಇಲ್ಲ: ಯೋಶಿರೋ ಮೋರಿ

ಟೋಕಿಯೊ, ಫೆ.13 :  ಕರೋನ್ ವೈರಸ್ ಭಿತಿ ಹಿನ್ನಲೆ 2020 ರ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದುಗೊಳಿಸುವ ಅಥವಾ ಮುಂದೂಡುವುದಿಲ್ಲ ಎಂದು ಎಂದು ಟೋಕಿಯೊ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಂಘಟನಾ ಸಮಿತಿ ಮುಖ್ಯಸ್ಥ ಯೋಶಿರೋ ಮೋರಿ ಗುರುವಾರ ಹೇಳಿದ್ದಾರೆ. 

2020ರ ಬೇಸಿಗೆ ಒಲಿಂಪಿಕ್ಸ್ ಟೋಕಿಯೋದಲ್ಲಿ ಜುಲೈ 24 ರಿಂದ ಅಗಸ್ಟ್ 9ರ ವರೆಗೆ ನಡೆಯಲಿದೆ. 

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸಭೆಯಲ್ಲಿ ಯೋಶಿರೋ ಮೋರಿ, ಕ್ರೀಡಾಕೂಟವನ್ನು ರದ್ದು ಮಾಡುವ ಅಥವಾ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  

ಸರ್ಕಾರ ಈ ಬಗ್ಗೆ ಕ್ರಮಗಳನ್ನು ಕೈಗೊಳಲಿದ್ದು, ಸಾಂಕ್ರಾಮಿಕ ರೋಗ ಸಂಬಂಧಿಸಿದ ರೋಗದ ಭೀತಿ ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಡಿಸೆಂಬರ್ ನಲ್ಲಿ ಕರೋನ್ ವೈರಸ್ ಚೀನಾದ ವುಹಾನ್ ನಲ್ಲಿ ಪತ್ತೆಯಾಗಿತ್ತು. ಅಲ್ಲದೆ 25 ದೇಶಗಳಲ್ಲಿ ವ್ಯಾಪಿಸಿದೆ. ಈ ಮಾರಕ ರೋಗಕ್ಕೆ 1300 ಜನ ಸಾವನ್ನಪ್ಪಿದ್ದಾರೆ. ಚೀನಾ ಹಾಗೂ ಜಪಾನ್ ನಲ್ಲಿ 200 ಕರೋನ್ ವೈರಸ್ ಪಿಡೀತರು ಹೊಸದಾಗಿ ಪತ್ತೆಯಾಗಿದೆ.