ಜುಲೈ 21ರವರೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ ಸ್ಥಗಿತ

ಬೆಂಗಳೂರು, ಜು 13: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಜು 21ರವರೆಗೆ ಸ್ಥಗಿತಗೊಳ್ಳಲಿದೆ. 

ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೆಎಟಿ, ನ್ಯಾಯಾಧಿಕರಣದ ಹಲವು ಸಿಬ್ಬಂದಿ ಕೋವಿಡ್ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅದರ ಕಲಾಪವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. 

ಜುಲೈ 13ರಿಂದ 21ರವರೆಗೆ ನಿಗದಿಯಾಗಿರುವ ಪ್ರಕರಣಗಳ ವಿಚಾರಣೆಯನ್ನು ಜು.22ರಂದು ನಡೆಸಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.