ಲೋಕದರ್ಶನ ವರದಿ
ಮುಧೋಳ: ಸಹಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕೊಡಮಾಡುವ ಕನರ್ಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಸಮೀಪದ ಹೆಬ್ಬಾಳ ಗ್ರಾಮದಲ್ಲಿರುವ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ವಿಲಾಸ ಎಣ್ಣಿ ಇವರಿಗೆ ಲಭಿಸಿದೆ. ಬೆಂಗಳೂರಿನ ಕನ್ನಡ ಭವನದ ನಯನ ರಂಗಮಂದಿರದಲ್ಲಿ ನವೆಂಬರ 29ರಂದು ಹಮ್ಮಿಕೊಂಡ 63ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ರಾಷ್ಟ್ರೀಯ ನೃತ್ಯ ಕಲಾ ಮೇಳ-4ರಲ್ಲಿ ಪ್ರತಿಷ್ಟಿತ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಸಮೃದ್ಧ ಕನರ್ಾಟಕದ, ಪವಿತ್ರವಾದ ನೆಲ, ಜಲ,ಭಾಷೆ, ಸಂಸ್ಕೃತಿ ಮತ್ತು ಕನ್ನಡ ನಾಡಿನ ಜನ ಜೀವನಗಳ ಬಗ್ಗೆ ಕಾಳಜಿ ಇಟ್ಟು,ನಿಸ್ವಾರ್ಥದಿಂದ ಸಲ್ಲಿಸಿದ ಅಮೂಲ್ಯ ಸೇವೆ ಮತ್ತು ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಅಭಿನಂದನೆ:-
ಪ್ರಶಸ್ತಿ ಪಡೆದ ವಿಲಾಸ ಎಣ್ಣಿ ಇವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಿ.ಬಿ.ಬಾರಕೇರ, ಪ್ರಾಚಾರ್ಯ ಎಮ್.ಆರ್. ಮೈದರಗಿ, ವೆಂಕಟೇಶ ಕುಲಕಣರ್ಿ, ಗೀತಾ ಪಾಟೀಲ, ಎಚ್.ಎ.ಸರಕಾವಸ, ಬಿ,ಡಿ ಬೂದಿಹಾಳ, ಬಿ.ಕೆ.ಡೊಳ್ಳಿನ, ಎಮ್.ಜೆ.ಆಲಗೂರ, ಆರ್.ಎಸ್.ಕಲಹಾಳ, ಬಿ.ಡಿ.ಸಂತಿ ಅಭಿನಂದಿಸಿದರು.