ಲೋಕದರ್ಶನ ವರದಿ
ವಿಜಯಪುರ,3: ನಗರದ ಸಿಕ್ಯಾಬ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನೀಯರಿಂಗ್ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಜಿ. ಅವರ್ಿಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ಉಪಪ್ರಾಂಶುಪಾಲರು ಹಾಗೂ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನೂರುಲ್ಲಾ ಶರೀಫ ಮತ್ತು ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ. ಅಬ್ಬಾಸ್ ಅಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ. ಅಬ್ಬಾಸ್ ಅಲಿ ಅವರು ತಮ್ಮ ಭಾಷಣದಲ್ಲಿ ಕನ್ನಡ ನಾಡನ್ನು ಕಟ್ಟಿಬೆಳೆಸಿದ ಸಾಹಿತಿಗಳನ್ನು ನೆನೆದು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಎಲ್ಲ ಸ್ಥರಗಳಲ್ಲಿ ಕನರ್ಾಟಕವು ದೇಶದ ಅತ್ಯಂತ ಸುಧಾರಿತ ರಾಜ್ಯ ಎಂಬುದು ನಮಗೆಲ್ಲರಿಗೂ ಹೆಮ್ಮೆ, ಇದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು. ಕನ್ನಡ ಭಾಷೆ, ಕನ್ನಡ ನೆಲದ ಬಗೆಗಿನ ಅಭಿಮಾನ ರಾಜ್ಯೋತ್ಸವ ದಿನದಂದಷ್ಟೇ ಸೀಮಿತವಾಗಬಾರದು ಎಂದು ಹೇಳಿದರು. ಸಿವಿಲ್ ವಿಭಾಗದ ಪ್ರಾಧ್ಯಾಪಕರಾದ ಜಿ.ವಿ. ನಂದಿಯವರು ಮಾತನಾಡಿ, ಬೆಂಗಳೂರಿನಂತಹ ನಗರಗಳಲ್ಲಿ ಮತ್ತು ಎಂಜಿನೀಯರಿಂಗ್ನಂತಹ ಶಿಕ್ಷಣ ಪಡೆಯುತ್ತಿರುವವರಲ್ಲಿ ಕನ್ನಡ ಭಾಷೆಯ ಬಳಕೆ ಅತ್ಯಂತ ಕಡಿಮೆಯಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿ, ಕನ್ನಡ ರಾಜ್ಯೋತ್ಸವ ಆಚರಣೆಯ ಮಹತ್ವವನ್ನು ಮನಮುಟ್ಟುವಂತೆ ತಿಳಿಸಿದರು. ಈ ಕಾರ್ಯಕ್ರಮದಂತೆ ವಿಭಾಗದಿಂದ ನಡೆಸಲಾಗುವ ಹಲವಾರು ಕಾರ್ಯಕ್ರಮಗಳು ಯಶಸ್ವಿಯಾಗಲು ಸಿಕ್ಯಾಬ ಸಂಸ್ಥೆಯ ಅಧ್ಯಕ್ಷರಾಗಿರುವ ಎಸ್.ಎ.ಪುಣೇಕರ್ ಅವರ ಪ್ರೋತ್ಸಾಹ, ಸತತ ಬೆಂಬಲವೇ ಕಾರಣ ಎಂದು ಹೇಳಿದರು.
ವಿಭಾಗದ ಹಿರಿಯ ಪ್ರಾಧ್ಯಾಪಕರಾದ ವಿ. ಎಸ್. ಡೊಳ್ಳಿ ಅವರು ದ. ರಾ. ಬೇಂದ್ರೆಯವರು ಬರೆದ 'ಮೂಡಲ ಮನೆಯ ಮುತ್ತಿನ ನೀರಿನ' ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದರು. ವಿದ್ಯಾಥರ್ಿನಿಯರಾದ ಅನುಷಾ, ಪಂಕಜಾ ಮತ್ತು ಸಹಪಾಠಿಗಳು ನಾಡಗೀತೆಯನ್ನು ಹಾಡಿದರು. ವಿಭಾಗದ ಮುಖ್ಯಸ್ಥರಾದ ಪ್ರೋ. ಎಮ್.ಎಚ್.ಕೊಲ್ಹಾರ್, ಶ್ರೀಮತಿ ಸುಪ್ರಿಯಾ ವಿ.ಕೆ., ಪ್ರೋ. ಎ.ಎ. ಜಹಗೀರದಾರ್, ಪ್ರೋ. ಪಿ. ಶಾಬಾಷಾ ಮತ್ತು ವಿಭಾಗದ ಎಲ್ಲ ಸಹ ಪ್ರಾದ್ಯಾಪಕರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ವಿಭಾಗದ ಪ್ರಾಧ್ಯಾಪಕರಾದ ನೂರುದ್ದಿನ್ ಜಂಗಿ ಖಾದ್ರಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾಥರ್ಿ ಮಲ್ಲಿಕಾಜರ್ುನ್ ಆಸಂಗಿಹಾಳ ಕಾರ್ಯಕ್ರಮವನ್ನು ನಿರೂಪಿಸಿದರು.