ಮಾತೃಭಾಷೆ ಆಧಾರದ ಮೇಲೆ ಕರ್ನಾಟಕವನ್ನು ರಚಿಸಲಾಗಿದೆ: ಕುಂಠೆ

ಬ್ಯಾಡಗಿ: ಮಾತೃಭಾಷೆ ಆಧಾರದ ಮೇಲೆ ಕರ್ನಾಟಕ ವನ್ನು ರಚಿಸಲಾಗಿದೆ, ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಡಳಿತಾರೂಢ ಸಕರ್ಾರಗಳು ಕಠಿಣ ನಿರ್ಧಾರ ರಗಳನ್ನು ತೆಗೆದುಕೊಳ್ಳದಿದ್ದರೇ ರಾಜ್ಯದ ನುಡಿ ಹಾಗೂ ಗಡಿ ಎರಡೂ ಕರಗಲಿವೆ ಎಂದು ಅಧ್ಯಕ್ಷ ದತ್ತಾತ್ರೇಯ ಕುಂಠೆ ಆತಂಕ ವ್ಯಕ್ತಪಡಿಸಿದರು.

 ತಾಲೂಕಿನ ಮೋಟೆಬೆನ್ನೂರ ನವೋದಯ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ 64 ನೇ  ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಭಾಷಾಭಿಮಾನದ ಕೊರತೆ ಎದುರಿಸುತ್ತಿರುವ  ಕರ್ನಾಟಕದಲ್ಲಿ ಪರಭಾಷಿಕರ ದಬ್ಬಾಳಿಕೆ ತೀವ್ರವಾಗಿದೆ, ರಾಜಧಾನಿಯಂತಹ ಬೆಂಗಳೂರಿನಲ್ಲಿಯೇ ಕನ್ನಡ ಭಾಷೆಗೆ ಪೆಟ್ಟು ಬೀಳುವಂತಹ ಕೆಲಸಗಳು ನಡೆಯುತ್ತಿದ್ದರೂ, ಓಲೈಕೆ ರಾಜಕಾರಣದ ಕಟ್ಟಿಗೆ ಬಿದ್ದ ಜನಪ್ರತಿನಿಧಿಗಳು ಧ್ವನಿ ಎತ್ತಲು ಸಿದ್ಧರಿಲ್ಲ, ಒಂದು ವೇಳೆ ಕನ್ನಡಭಾಷೆಯ ಪರಧ್ವನಿ ಎತ್ತಿದರೇ ಅಂತಹವರನ್ನು ಹಾಗೂ ಅವರ ಸಂಘಟನೆಗಳನ್ನು ಕುಬ್ಜ ಮನೋಭಾವನೆಯಿಂದ ನೋಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದರು.

   ಸ್ವಾಭಿಮಾನದ ಸಂಕೇತವಾಗಬೇಕು: ಮಾತೃಭಾಷೆ ಎಂಬುದು ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರಿಗೂ ಸ್ವಾಭಿಮಾನದ ಸಂಕೇತವಾಗಬೇಕು, ಇಲ್ಲದೇ ಹೋದರೆ ಇಡೀ ರಾಜ್ಯವೇ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂದೇಹವಿಲ್ಲ, ಆದರೆ ಶಾಲೆ, ಕಾಲೇಜು ಸೇರಿದಂತೆ ಬೃಹತ್ ನಗರಗಳಲ್ಲಿ ಇದಕ್ಕೆ ಪೂರಕವಾದ ವಾತವರಣ ಸೃಷ್ಟಿಯಾಗದೇ ಇರುವುದು ವಿಪರ್ಯಾಸದ ಸಂಗತಿ ಎಂದರು.

ಬಿಟ್ಟರೆ ನಮ್ಮನ್ನಾಳಲಿವೆ ಪರಭಾಷೆಗಳು: 

 ನಿವೃತ್ತ ಪ್ರಾಧ್ಯಾಪಕ ಡಾ.ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಭಾಷೆಗಳ ದಬ್ಬಾಳಿಕೆ ಅತಿಯಾಗುತ್ತಿದೆ, ಹೀಗಾಗಿ ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿ ನೆಲೆಸಿರುವ ಹೊರನಾಡ ಕನ್ನಡಿಗರ ಮಕ್ಕಳು, ಮಾತೃಭಾಷೆಯೊಂದಿಗೆ ಎರಡನೇ ಭಾಷೆಯಾಗಿ ಕನ್ನಡ ಕಲಿಯವುದನ್ನು ಕಡ್ಡಾಯಗೊಳಿ ಸಬೇಕಾಗಿದೆ, ಇದನ್ನು ಮತ್ತೇನೋ ಮಾಡಲು ಹೋದರೆ ಪರಭಾಷಿಕರು ಖಂಡಿತವಾಗಿಯೂ ನಮ್ಮನ್ನಾಳಲಿದ್ಧಾರೆ ಎಂದರು.

 ಪ್ರಾಚಾರ್ಯ ಮಲ್ಲಿಕಾಜರ್ುನ ಅಧ್ಯಕ್ಷತೆ ವಹಸಿದ್ದರು, ವೇದಿಕೆಯಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಮಲ್ಲಿಕಾಜರ್ುನ ಬಳ್ಳಾರಿ, ಅಶೋಕ ಬಣಕಾರ, ಪಿ.ಸಿ.ಅತ್ತಿಗೇರಿ, ಎನ್.ಡಿ.ಹುಚ್ಚಣ್ಣನವರ, ಎಂ.ಎಫ್.ಮೋರೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಘವೇಂದ್ರ ಎಲಿ ಸ್ವಾಗತಿಸಿದರು, ವಿಜಯಾ ಹಾವನೂರ ನಿರೂಪಿಸಿದರು, ಹೇಮಾ ವಡವಿ ವಂದಿಸಿದರು.