ಚೆನ್ನೈ, ಅ.6:
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಹೊಸ ಅಣೆಕಟ್ಟು ನಿರ್ಮಿಸಲು ಪರಿಸರ ಅನುಮತಿ ಕೋರಿರುವ
ಕರ್ನಾಟಕ ಸರ್ಕಾರದ ಕ್ರಮ ಹಾಗೂ ಅನುಮತಿಗೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದು ಹೇಳಿರುವುದನ್ನು
ಪಿಎಂಕೆ ಸ್ಥಾಪಕ ಡಾ ಎಸ್. ರಾಮದಾಸ್ ಇಂದು ಖಂಡಿಸಿದ್ದಾರೆ.
ಕರ್ನಾಟಕವು ಈ ಸಂಬಂಧ
ಕೇಂದ್ರಕ್ಕೆ ಪತ್ರ ಬರೆಯುವುದು 'ವಿನಾಷಕಾರಿ' ಮತ್ತು ಇದು ರಾಷ್ಟ್ರೀಯ ಸಮಗ್ರತೆಗೆ ಅಪಾಯವನ್ನುಂಟು
ಮಾಡುತ್ತದೆ. ಉಭಯ ರಾಜ್ಯಗಳ ನಡುವಿನ ಸಂಬಂಧಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ
ಅವರು, ಯೋಜನೆಗೆ ಯಾವುದೇ ಪರಿಸರ ಅನುಮತಿ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ
ಆದೇಶದಂತೆ ಕರ್ನಾಟಕವು ರಾಜ್ಯಕ್ಕೆ ನೀರನ್ನು ಬಿಡುಗಡೆ ಮಾಡುತ್ತಿಲ್ಲ, ಆದರೆ ಮೇಕೆದಾಟವಿನಲ್ಲಿ ಅಣೆಕಟ್ಟು
ನಿರ್ಮಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ ಅವರು, ಕೇಂದ್ರ ಪರಿಸರ ಸಚಿವಾಲಯದ ತಜ್ಞರ ಸಮಿತಿ
ಜುಲೈ 19 ರಂದು ಕರ್ನಾಟಕದ ಹಿಂದಿನ ಮನವಿಯನ್ನು ತಿರಸ್ಕರಿಸಿತ್ತು ಎಂದೂ ನೆನಪಿಸಿದ್ದಾರೆ.
ಈ ಸನ್ನಿವೇಶದಲ್ಲಿ
ಕರ್ನಾಟಕವು ಅಣೆಕಟ್ಟು ನಿರ್ಮಿಸಲು ಪರಿಸರ ಅನುಮತಿ ಕೋರಿ ಪತ್ರ ಬರೆದಿದೆ. ಮಾತ್ರವಲ್ಲ ಈ ಅನುಮತಿಗೆ
ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದೂ ಹೇಳಿಕೆ ಎಂದು ರಾಮದಾಸ್ ತಿಳಿಸಿದ್ದಾರೆ.
ಕರ್ನಾಟಕದ ವಾದ ತಪ್ಪು.
ತಮಿಳುನಾಡಿನ ಪೂರ್ವಾನುಮತಿ ಇಲ್ಲದೆ ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಅಣೆಕಟ್ಟುಗಳನ್ನು
ನಿರ್ಮಿಸಬಾರದು ಎಂದು ಸುಪ್ರೀಂ ಕೋರ್ಟ್ ಹಲವಾರು ಬಾರಿ ತೀರ್ಪು ನೀಡಿದೆ ಎಂದು ಎಂದು ಡಾ.ರಾಮದಾಸ್
ಹೇಳಿದ್ದಾರೆ.
ಕರ್ನಾಟಕವು ತನ್ನ
ಎಲ್ಲಾ ಅಣೆಕಟ್ಟುಗಳು ತುಂಬಿದ ನಂತರವೇ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ ಎಂದು
ಅವರು ದೂರಿದರು.
70 ಟಿಎಂಸಿ ಅಡಿ ಸಾಮರ್ಥ್ಯದ
ಮೇಕೆದಾಟು ಅಣೆಕಟ್ಟು ನಿರ್ಮಿಸಲು ಅವಕಾಶ ನೀಡಿದರೆ ತಮಿಳುನಾಡಿಗೆ ಒಂದು ಹನಿ ನೀರು ಕೂಡ ಸಿಗುವುದಿಲ್ಲ
ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಯೋಜನೆಗೆ ಯಾವುದೇ ಪರಿಸರ ಅನುಮತಿ ನೀಡಬಾರದು.
ಮತ್ತು ಕರ್ನಾಟಕದ
ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸಿದರು.