ನ.1 ಕನ್ನಡ ರಾಜ್ಯೋತ್ಸವಕ್ಕೆ ಕಡ್ಡಾಯ ಹಾಜರಾತಿ: ಜಿಲ್ಲಾಧಿಕಾರಿ ನಕುಲ್ ಸೂಚನೆ

ಲೋಕದರ್ಶನ ವರದಿ

 ಕಾರವಾರ 16 :ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕಾರವಾರದ ಎಲ್ಲ ಸಕರ್ಾರಿ ನೌಕರರೂ ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

            ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ 63ನೇ ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಅವರು, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಕರ್ಾರಿ ಅಧಿಕಾರಿಗಳು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು. ಭಾಗವಹಿಸಿದ ಬಗ್ಗೆ ಅಂದು ಸಂಜೆ ತಮಗೆ ಹಾಜರಾತಿ ಸಲ್ಲಿಸಬೇಕು ಎಂದು ಕಡಕ್ ಸೂಚನೆ ನೀಡಿದರು.

            ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಜಿಲ್ಲಾಡಳಿತದಿಂದ ನಡೆಯುವ ಶಿಷ್ಟಾಚಾರದ ಪ್ರಮುಖ ಕಾರ್ಯಕ್ರಮಗಳು. ಕಾರ್ಯಕ್ರಮಗಳಿಗೇ ಅಧಿಕಾರಿ ಸಿಬ್ಬಂದಿ ಗೈರು ಹಾರಾಗುವುದು ಸರಿಯಲ್ಲ. ಕೊನೆ ಕ್ಷಣದಲ್ಲಿ ನೋಟಿಸ್ ಪಡೆಯುವಂತೆ ಮಾಡಿಕೊಂಡು ತಮ್ಮನ್ನು ಮುಜುಗರಪಡಿಸಬೇಡಿ ಎಂದು ಹೇಳಿದರು.

            ಬೆಳಿಗ್ಗೆ 8ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡಾಂಬೆ ರಥ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ ನಗರಾದ್ಯಂತ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅದರೊಂದಿಗೆ ಸಕರ್ಾರದ ವಿವಿಧ ಇಲಾಖೆಗಳು ತಮ್ಮ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಸ್ತಬ್ಧಚಿತ್ರಗಳನ್ನು ಕೇವಲ ಫ್ಲೆಕ್ಸ್ಗಳ ಮೂಲಕ ಮಾತ್ರ ಅಲಂಕರಿಸದೆ ವಿಶೇಷವಾಗಿ ವಿಭಿನ್ನವಾಗಿ ರೂಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

            ಅಲ್ಲದೆ ನಗರಾದ್ಯಂತ ಎಲ್ಲ ಸಕರ್ಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ, ನಗರದ ವೃತ್ತಗಳಿಗೆ ದೀಪಾಲಂಕಾರ ಮಾಡಬೇಕು. ಪೊಲೀಸ್ ಕವಾಯತು ಮೈದಾದಲ್ಲಿ ಸರಿಯಾಗಿ 9ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜಾರೋಹಣ ಮಾಡುವುದು, ಪಥಸಂಚನೆ, ಸಚಿವರಿಂದ ರಾಜ್ಯೋತ್ಸವದ ಸಂದೇಶ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಣ್ಯರ ಆಹ್ವಾನ ಶಿಷ್ಠಾಚಾರದಂತೆ ನಡೆಯಲಿವೆ ಎಂದು ಅವರು ತಿಳಿಸಿದರು.

            ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮೊಹಮ್ಮದ್ ರೋಷನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಉಪಸ್ಥಿತರಿದ್ದರು.