ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ

Karnataka State Farmers Association and Green Army Sugarcane Growers Union

ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ  


ವಿಜಯಪುರ 3 : ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ತಾಲೂಕಾ ಘಟಕ ಕೋಲ್ಹಾರ ವತಿಯಿಂದ ಕೋಲ್ಹಾರ ತಾಲೂಕಿನಲ್ಲಿ ಬರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ರೋಣಿಹಾಳ ಗ್ರಾಮದಲ್ಲಿ ಕೋಲ್ಹಾರ ಪಟ್ಟಣ ಪಂಚಾಯತಿಯ ಕಸ ವಿಲೇವಾರಿ ಘಟಕವನ್ನು ಬೇರೆ ತಡೆ ಸ್ಥಳಾಂತರ ಮಾಡಲು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ತಾಲೂಕಾ ಘಟಕ ಕೋಲ್ಹಾರ ಘಟಕದ ಅಧ್ಯಕ್ಷರಾದ ಸೋಮು ಬಿರಾದಾರ ಮಾತನಾಡಿ ರೋಣಿಹಾಳ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರೋಣಿಹಾಳ ಗ್ರಾಮದಲ್ಲಿ ಸ.ನಂ.258 ಕ್ಷೇತ್ರ 31 ಎಕರೆ 32 ಗುಂಟೆ ಗಾಯರಾಣ ಜಾಗವಿದ್ದು ಸರಕಾರಿ ನಿಯಮಾವಳಿ ಪ್ರಕಾರ ರೋಣಿಹಾಳ ಗ್ರಾವ ಪ್ರಾಚಾಯತಿಗೆ ಬರದೆ ಇರುವ ಕಾರಣದಿಂದ ಕಸ ವಿಳಂಬಣೆಯಿಂದ ಕಸ ವಿಲೇವಾರಿಗೆ ತುಂಬಾ ತೊಂದರೆಯಾಗುತ್ತಿದ್ದು ರೋಣಿಗಳ ಗ್ರಾಮದಲ್ಲಿ ಸುಮಾರು 1250 ಮನೆಗಳಿದ್ದು ಕಸವನ್ನು ತಂದು ಅಲ್ಲಿ ಹಾಕುವುದರಿಂದ ಅಲ್ಲಿ  ವಾಸವಿರುವ ಜನರಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕಾರಣ ತಾವು ಸದರಿ ಮನೆಗಳ ಜಾಗದಿಂದ 200 ರಿಂದ 300 ಮೀಟದ ಅಂತರದಲ್ಲಿ ಇರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಕಾರಣ ಬೇರೆ ಕಡೆ ತಾವು ಕಸ ವಿಲೇವಾರಿ ಮಾಡಬೇಕು. ಸದರಿ ಜಾಗದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಅಟದ ಮೈದಾನ ಗಾರ್ಡನ್ ಅಥವಾ ಇನ್ನಿತರ ಸರಕಾರಿ ಕಛೇರಿಗಳನ್ನು ನಿರ್ಮಿಸಬಹುದು. ಅಂತಾ ತಾವು ಬೇರೆ ಕಡೆಗೆ ಕಸ ವಿಲೇವಾರಿ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ಅದೇ ಇದನ್ನು ಕಸವಿಲೆವಾರಿ ಮಾಡಿದರೆ ನಮ್ಮ ಸಂಘದ ಮಯಿಂದ ಮತ್ತು ಸಾರ್ವಜನಿಕರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸುತ್ತೇವೆ. ಆದ ಕಾರಣ ತಾವು ನಮ್ಮ ಗ್ರಾಮದಲ್ಲಿ ಪಟ್ಟಣ ಕೋಲ್ಹಾರ ಪಟ್ಟಣ ಪಂಚಾಯತಿಯಲ್ಲಿ ಕಸ ವಿಲೇವಾರಿಯನ್ನು ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲಿ ಸರಕಾರಿ ಕಛೇರಿ ಮಾಡಲು ಯಾವುದೇ ತೊಂದರೆಇರುದಿಲ್ಲ. ಈಗಾಗಲೆ ಸುಮಾರು ಬಾರಿ ನಾವು ಮೇಽಽ ಕಾರ್ಯನಿರ್ವಾಹಕ ಅಧಿಕಾರಿಗಳು ಕೋಲ್ಹಾರ 02/11/2021 ಜಿಲ್ಲಾ ಅಧಿಕಾರಿಗಳಿಗೆ 02/02/2022 ತಾಲೂಕ ದಂಡಾಧಿಕಾರಿಗಳಿಗೆ 03/02/2023 ಉಪವಿಭಾಗಧಿಕಾರಿಗಳು ವಿಜಯಪುರ ಮನವಿ ಸಲ್ಲಿಸಲಾಗಿತ್ತು. ಆದ ಕಾರಣ ಜಿಲ್ಲಾಧಿಕಾರಿಗಳು ಸಮಕ್ಷಮ ಸ್ಥಳಕ್ಕೆ ಸ್ಥಾನಿಕ ಚೌಕಾಶಿ ಮಾಡಿ ಸಾರ್ವಜನಿಕರ ಹಾಗೂ ರೈತರೊಂದಿಗೆ ಸಮಕ್ಷಮವಾಗಿ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ 15/04/2025 ರೋಣಿಹಾಳ ಗ್ರಾಮಸ್ಥರಿಂದ ಹಾಗೂ ಸುತ್ತಮುತ್ತಲಿನ ರೈತರಿಂದ ರಾಜ್ಯದಾರಿಗೆ ಇಳಿಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಬಸು ನ್ಯಾಮಗೊಂಡ ಪಡೆಪ್ಪ ಕೋಲಕಾರ ಈರಣ್ಣ ಗೊಳಸಂಗಿ ಮಲ್ಲಿಕಾರ್ಜುನ ರೆಡ್ಡೆರ ಕಲ್ಲು ಬಾಡಗಿ ಜಿಲ್ಲಾ ಕಾರ್ಯದರ್ಶಿ ಪ್ರಕಾಶ ತೇಲಿ  ಸಿಕಂದರ ತೊನಶ್ಯಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.