ರವೀಂದ್ರ ಬಾನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ರವೀಂದ್ರ ಬಾನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ   Karnataka Rajyotsava Award for Ravindra Bani

ಬೈಲಹೊಂಗಲ 16: ಬೆಂಗಳೂರಿನ ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಹಿಂದುಳಿದ ವರ್ಗಗಳ ಇಲಾಖೆಯ ನಿವೃತ್ತ ಕಲ್ಯಾಣಾಧಿಕಾರಿ ರವೀಂದ್ರ ಬಾನಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಬೀದರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಗಡಿ ಕನ್ನಡಿಗರ ಉತ್ಸವ 70 ನೇ ಕರ್ನಾಟಕ ರಾಜ್ಯೋತ್ಸವ ಪದ್ಮಶ್ರೀ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ ಮೂಲಕ ರಾಜ್ಯ ಮಟ್ಟದ ಗಡಿ ಕನ್ನಡಿಗರ ಉತ್ಸವ 70 ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ, ಸಾಹಿತ್ಯ ಸಾಂಸ್ಕೃತಿಕ ಕನ್ನಡ ಹಾಡುಗಳ ಪ್ರಸಾರ, ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ, ಡಾ. ಚನ್ನಬಸವ ಪಟ್ಟದೇವರ ಜೀವನ ಹೋರಾಟ, ಡಾ. ಜಯದೇವಿ ತಾಯಿ ಲಿಗಾಡೆ ಬದುಕು ಬರಹ ವಿಚಾರ ಸಂಕಿರಣ ಹಾಗೂ ಕರ್ನಾಟಕ ಕಾಯಕ ರತ್ನ ರಾಷ್ಟಿಯ ಸದ್ಬಾವನಾ ರಾಷ್ಟ್ರೀಯ ಪ್ರಶಸ್ತಿ  ಕರ್ನಾಟಕ ರಾಜ್ಯೋತ್ಸವ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಕಳೆದ 30 ವರ್ಷಗಳಿಂದ ಸರಕಾರಿ ಸೇವೆ ಸಲ್ಲಿಸುತ್ತಾ  ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಾ, ಹಿಂದುಳಿದ ವರ್ಗ ಗಳ ಇಲಾಖೆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆ ತನ್ನದೇ ಕೊಡುಗೆ ನೀಡಿ ಇಂದು ಅನೇಕ ಹುದ್ದೆಗೆ ತೊಡಗುವಲ್ಲಿ ಇವರ ಪಾತ್ರ ಅಪಾರವಾಗಿದೆ. ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯ ಮಟ್ಟದ ಉತ್ತಮ ಮೇಲ್ವಿಚಾರಕ ಪ್ರಶಸ್ತಿ ಯು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ.ಬೀದರ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಉಪಾಧ್ಯಕ್ಷ ಪ್ರಕಾಶ  ಪ್ರಧಾನ ಕಾರ್ಯದರ್ಶಿ ಪ್ರೀಯಾಂಕ ಖಜಾಂಚಿ ಶಾರದ ಹಿರಿಯ ಉಪಾಧ್ಯಕ್ಷರಾದ ತೇಜಮ್ಮಾ ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟೀಲ್, ಸಿರನೂರು ರಾಜ್ಯ ಸಂಘಟನ ಕಾರ್ಯದರ್ಶಿ ಚಂದ್ರಕಾಂತ ದೇವಕೆ ,  ಜಿಲ್ಲಾಧ್ಯಕ್ಷ ಮುಖೇಶ ಶಾಹಗಂಜ್, ಉಪಾಧ್ಯಕ್ಷ ಬಸವರಾಜ ಜಡಗೆ, ಪ್ರಧಾನ ಕಾರ್ಯದರ್ಶಿ ಅಂಬಾದಾಸ ಸೈನೆ ಸಂದೀಪ ಚಾಂಬೋಳ, ನಗರ ಅಧ್ಯಕ್ಷ ಭಗವಾನ ಯಾದವ, ಸಮಾಜ ಸೇವಕ ಬಸವರಾಜ ಬಡಿಗೇರ, ಪತ್ರಕರ್ತ ಸಿ.ವೈ.ಮೆಣಸಿನಕಾಯಿ ಉಪಸ್ಥಿತರಿದ್ದರು.