ಕನರ್ಾಟಕ ಹಾಲು ಮಹಾಮಂಡಳಿಯಿಂದ ಮೆಕ್ಕೆಜೋಳ ಖರೀದಿ

ಬಾಗಲಕೋಟೆ 09 : ಸರಕಾರದ ಆದೇಶದನ್ವಯ ಕೋವಿಡ್-19 ಲಾಕ್ಡೌನ್ ಪರಿಸ್ಥಿತಿ ಹಿನ್ನಲೆ ಮೆಕ್ಕೆ ಜೋಳ ಬೆಳೆದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕನರ್ಾಟಕ ಹಾಲು ಮಹಾಮಂಡಳಿಯ ಮೂಲಕ ರೈತರಿಂದ ನೇರವಾಗಿ ಪ್ರತಿ ಕ್ವಿಂಟಲ್ಗೆ 1760 ರೂ.ಗಳ ಬೆಂಬಲ ಬೆಲೆ ದರದಲ್ಲಿ ಮೆಕ್ಕೆಜೋಳ ಖರೀದಿಸಲು ತಿಮರ್ಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಉತ್ತರ ಕನರ್ಾಟಕದ ಕನರ್ಾಟಕ ಹಾಲು ಮಹಾಮಂಡಳಿ ವ್ಯಾಪ್ತಿಯ ಧಾರವಾಡ ಪಶು ಆಹಾರ ಘಟಕಕ್ಕೆ ಸೇರಿದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರೈತರಿಂದ ನೇರವಾಗಿ ಮೇ 9 ರಿಂದ ಖರೀದಿಸಲು ಪ್ರಾರಂಬಿಸಲು ಆಯೋಜಿಸಲಾಗಿದೆ. ಮೆಕ್ಕೆ ಜೊಳವನ್ನು ಪಶು ಆಹಾರ ತಯಾರಿಕೆಗೆ ಬಳಸಲಿರುವ ಕಾರಣ ಅರ್ಹವಿರುವ ಗುಣಮಟ್ಟದ ಮೆಕ್ಕೆಜೋಳವನ್ನೇ ಪೂರೈಸಲು ರೈತರಲ್ಲಿ ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ಮೊದನೇ ಹಂತದಲ್ಲಿ ಆಸಕ್ತ ರೈತರು ಕೋವಿಡ್-19ರ ಪ್ರಯುಕ್ತ ಸಕರ್ಾರದ ಮಾರ್ಗಸೂಚಿಯಂತೆ ಜನಸಂದಣಿಯನ್ನು ತಪ್ಪಿಸಲು ಮೇ 9 ರಿಂದ ತಮ್ಮ ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದಶರ್ಿಗಳನ್ನು ಭೇಟಿ ನೀಡಿ ಫ್ರೂಟ್ಸ್ ತಂತ್ರಾಂಶದ ಬಳಕೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿ ಮೆಕ್ಕೆಜೋಳದ ಮಾದರಿಯನ್ನು (1ಕೆ.ಜಿ) ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದಶರ್ಿಗೆ ನೋಂದಣಿ ಸಂಖ್ಯೆ ಜೊತೆ ನೀಡಬೇಕು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಇಲ್ಲದೇ ಇದ್ದ ಪಕ್ಷದಲ್ಲಿ ಸಮೀಪದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ತಿಳಿಸಲಾಗಿದೆ.

ಎರಡನೇ ಹಂತದಲ್ಲಿ ಸಂಘದ ಕಾರ್ಯದಶರ್ಿಗಳು ಸ್ವೀಕರಿಸಿದ ಮೆಕ್ಕೆಜೋಳದ ಮಾದರಿಯನ್ನು ಆಯಾ ಒಕ್ಕೂಟದ ಶಿಬಿರ ಕಚೇರಿಗಳಿಗೆ ತಲುಪಿಸುತ್ತಾರೆ. ಈ ರೀತಿ ಸ್ವೀಕರಿಸಿದ ಮಾದರಿಗಳು ಧಾರವಾಡದಲ್ಲಿರುವ ಪಶು ಆಹಾರ ಘಟಕಕ್ಕೆ ತಲುಪಿಸಲಾಗುವುದು. ಮೂರನೇ ಹಂತದಲ್ಲಿ ಸ್ವೀಕೃತ ಮೆಕ್ಕೆಜೋಳದ ಮಾದರಿ ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಲ್ಲಿ, ರೈತರ ಮೊಬೈಲ್ಗೆ ಎಸ್ಎಮ್ಎಸ್ ಮೂಲಕ ಮಾಹಿತಿಯನ್ನು ತಲುಪಿಸಲಾಗುವುದು. ನಂತರ ರೈತರು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ನಿಗದಿ ಪಡಿಸಿದ ದಿನದಂದು ಕೆಎಂಎಫ್ ಪಶು ಆಹಾರ ಘಟಕ ಧಾರವಾಡಕ್ಕೆ ತಮ್ಮ ಸ್ವಂತ ಖಚರ್ಿನಲ್ಲಿ ಸಾಗಾಣಿಕೆ ಮಾಡುವಂತೆ ಸೂಚಿಸಲಾಗಿದೆ. 

ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ಬಾಗಲಕೋಟೆ ವಿಭಾಗಕ್ಕೆ ಡಾ||ಬಿ.ಕೆ.ಮಠ, ಉಪ ವ್ಯವಸ್ಥಾಪಕರು ಕೆಎಂಎಪ್ (9591999466) ಹಾಗೂ ಜಮಖಂಡಿ ವಿಭಾಗಕ್ಕೆ ವಿ.ಆರ್.ಯಡಹಳ್ಳಿ, ಉಪ ವ್ಯವಸ್ಥಾಪಕರು ಕೆಎಂಎಫ್ ಜಮಖಂಡಿ (9591999470) ಇವರನ್ನು ಸಂಪಕರ್ಿಸಬಹುದಾಗಿದೆ. ಜಿಲ್ಲೆಯ ಸಮಸ್ತ ರೈತರು ಈ ಯೋಜನೆಯ ಪ್ರಯೋಜನೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.