ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಪದಾಧಿಕಾರಿಗಳ ಸಮಿತಿ ಪುನರ್ ರಚನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿವತಿಯಿಂದ ಪದಾಧಿಕಾರಿಗಳ ಸಮಿತಿ ಪುನರ್ ರಚನೆ Karnataka Dalit Sangharsh Samiti reconstitutes its committee of office bearers

           ಹೊಸಪೇಟೆ 31:  ವಿದಿನಾಂಕ: 30.12.2025 ರಂದು ಸಂಜೆ : 05:00 ಗಂಟೆಗೆ ಹೊಸಪೇಟೆ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಪ್ರೋ.ಬಿ.ಕೃಷ್ಣಪ್ಪ ರವರು ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) 47/74-75. ಈ ಸಂಘಟನೆ ವತಿಯಿಂದ ಹೊಸಪೇಟೆ ತಾಲೂಕು ಪದಾಧಿಕಾರಿಗಳ ಸಮಿತಿಯನ್ನು ಪುನರ್ ರಚಿಸಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್‌.ದುರುಗೇಶ್, ಸಂಘಟನಾ ಸಂಚಾಲಕರಾದ ಹೆಚ್‌.ಬಿ.ಶ್ರೀನಿವಾಸ್ ಮರಿಯಮ್ಮನಹಳ್ಳಿ, ಕಂದಗಲ್ ಪರಶುರಾಮ್, ತುಂಬಾರಗುದ್ದಿ ದುರುಗೇಶ್, ಹಿರಿಯ ದಲಿತ ನಾಯಕರಾದ ಗೋವಿಂದರಾಜ್, ಶಾಮ್‌ರಾಜ್, ಬಿ.ಎಡ್‌.ಹನುಮಂತಪ್ಪ, ಉದಯಕುಮಾರ, ಇವರ ಉಪಸ್ಥಿತಿಯಲ್ಲಿ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಯಿತು.  

           ಹೊಸಪೇಟೆ ತಾಲೂಕು ಸಂಚಾಲಕರಾಗಿ ಎಂ.ವಿರುಪಾಕ್ಷಿ, ಸಂಘಟನಾ ಸಂಚಾಲಕರಾಗಿ ಹೆಚ್‌.ಈರಣ್ಣ, ಗಾದಿಗನೂರು ನಾಗರಾಜ್, ಹಾರುವನಹಳ್ಳಿ ನಾಗರಾಜ, ಪಕ್ಕೀರ​‍್ಪ, ಹನುಮನಹಳ್ಳಿ ಮಂಜುನಾಥ, ಶ್ರೀನಿವಾಸ ನಂದಿಬಂಡೆ, ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಸಂಚಾಲಕರಾಗಿ ಡಾಕ್ಟರ್ ಆನಂದ್ ಮತ್ತು ಸಂಘಟನಾ ಸಂಚಾಲಕರಾಗಿ ಹೆಚ್‌.ಕೆ.ಈಶ್ವರ್ ನೇಮಕಗೊಂಡಿರುತ್ತಾರೆ. ಎಲ್ಲರಿಗೆ ಆದೇಶ ಪತ್ರಗಳನ್ನು ವಿತರಿಸುವುದರ ಜೊತೆಗೆ ಶುಭ ಹಾರೈಸಿ ಸಂಘಟನೆ ಬಲಗೊಳಿಸಿ, ಗ್ರಾಮ ಶಾಖೆಗಳನ್ನು ಪುನರ್ ರಚನೆ ಮಾಡುವ ಮೂಲಕ ಹೊಸಪೇಟೆ ತಾಲೂಕಿನಲ್ಲಿ ಸಂಘಟನೆಯನ್ನು ಬಲಪಡಿಸಬೇಕೆಂದು ಈ ಮೂಲಕ ಎಲ್ಲಾರು ಶುಭಹಾರೈಸಿದರು.