ಹುಬ್ಬಳ್ಳಿ,
ಡಿ.19 ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಪ್ರವಾಸಿ ಉತ್ತರ ಪ್ರದೇಶ
ತಂಡಗಳು ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ಹೋರಾಟ ನಡೆಸಿದ್ದು, ಮೂರನೇ ದಿನದಾಟದ ಭೋಜನ ವಿರಾಮದ ವೇಳೆ
ಆತಿಥೇಯ ತಂಡ 7 ವಿಕೆಟ್ ನಷ್ಟಕ್ಕೆ 229 ರನ್ ಕಲೆ ಹಾಕಿ, 52 ರನ್ ಹಿನ್ನಡೆ ಅನುಭವಿಸುತ್ತಿದೆ. ಗುರುವಾರ 4 ವಿಕೆಟ್ ಗೆ 168 ರನ್ ಗಳಿಂದ ಆಟ ಮುಂದುವರಿಸಿದ
ಕರ್ನಾಟಕ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಗೋಪಾಲ್ ಜೊತೆಗೆ ಇನ್ನಿಂಗ್ಸ್
ಬೆಳೆಸುವ ಕನಸಿನೊಂದಿಗೆ ಅಂಗಳಕ್ಕೆ ಇಳಿದ ಅಭಿಷೇಕ್ ರೆಡ್ಡಿ, ತಮ್ಮ ಮೊತ್ತಕ್ಕೆ ಒಂಬತ್ತು ರನ್ ಸೇರಿಸಿ
ಔಟ್ ಆದರು. ವಿಕೆಟ್ ಕೀಪರ್ ಬಿ.ಆರ್.ಶರತ್ ಒಂದು
ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 16 ರನ್ ಬಾರಿಸಿ ಔಟ್ ಆದರು. ಡೇವಿಡ್ ಮಥಾಯಿಸ್ (4) ಬೇಗನೆ ವಿಕೆಟ್
ಒಪ್ಪಿಸಿದರು. ಎಂಟನೇ ವಿಕೆಟ್ ಗೆ ಶ್ರೇಯಸ್ ಗೋಪಾಲ್
(36) ಹಾಗೂ ಆಲ್ ರೌಂಡರ್ ಜೆ.ಸುಚಿತ್ (3) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.