ಕರ್ನಾಟಕ ಬಂದ ಪ್ರಯುಕ್ತ ಎಮ್‌.ಇ.ಎಸ್‌. ಸಂಘಟನೆಯನ್ನು ರಾಜ್ಯದಿಂದ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ

Karnataka: Demand to ban M.E.S. organization from the state

ಕರ್ನಾಟಕ ಬಂದ ಪ್ರಯುಕ್ತ ಎಮ್‌.ಇ.ಎಸ್‌. ಸಂಘಟನೆಯನ್ನು ರಾಜ್ಯದಿಂದ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ 

ಶಿಗ್ಗಾವಿ 22: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಶಿಗ್ಗಾವಿ ತಾಲೂಕ ಸಮಿತಿಯ ಪದಾಧಿಕಾರಿಗಳು ಕರ್ನಾಟಕ ಬಂದ ಪ್ರಯುಕ್ತ ಎಮ್‌.ಇ.ಎಸ್‌. ಸಂಘಟನೆಯನ್ನು ರಾಜ್ಯದಿಂದ ನಿಷೇಧಿಸುವಂತೆ ಒತ್ತಾಯಿಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.  

ಸಂಘಟನೆಯ ತಾಲೂಕ ಸಮಿತಿಯ ಅಧ್ಯಕ್ಷರಾದ ಸುರೇಶ ವನಹಳ್ಳಿ ಮಾತನಾಡಿ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎಮ್‌.ಇ.ಎಸ್ ಸಂಘಟನೆಗಳು ಅನಾವಶ್ಯಕವಾಗಿ ಕನ್ನಡಿಗರೊಂದಿಗೆ ತಂಟೇ ತಕರಾರು ಮಾಡುತ್ತಾ ಕನ್ನಡ ಹಾಗೂ ಮಾರಾಠಿ ಭಾಷಿಕರ ನಡುವೆ ದೇಶ ಮನೋಭಾವನೆ ಉಂಟುಮಾಡುತ್ತಿದ್ದಾರೆ. ಇದರಿಂದಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ನಡುವೆ ಕಂದಕುಂಟಾಗಿ ದ್ವೇಷ ಮನೋಭಾವನೆ ಹೆಚ್ಚಾಗಲು ಕಾರಣವಾಗುತ್ತದೆ. ಕಾರಣ ರಾಜ್ಯ ಸರ್ಕಾರ ಎಮ್‌.ಇ.ಎಸ್‌. ಸಂಘಟನೆಯನ್ನು ರಾಜ್ಯದಿಂದ ಕೂಡಲೇ ನಿಷೇಧಿಸಬೇಕೆಂದು ಅವರು ಒತ್ತಾಯಿಸಿದರು.  

ತಾಲೂಕ ಸಮಿತಿಯ ಉಪಾಧ್ಯಕ್ಷರಾದ ರಮೇಶ ಹರಿಜನ ಮಾತನಾಡಿ ಎಮ್‌.ಇ.ಎಸ್ ಸಂಘಟನೆಯು ಗಡಿಭಾಗದ ಕನ್ನಡಿಗರಲ್ಲಿ ಅರಾಜುಕತೆ ವಾತಾವರಣವನ್ನು ಸೃಷ್ಟಿಮಾಡಿ ಮರಾಠಿ ಭಾಷಿಗರನ್ನು ಕನ್ನಡಿಗರ ಮೇಲೆ ಎತ್ತಿಕಟ್ಟಲು ಸದಾ ಹವಾಣಿಸಿರುತ್ತದೆ. ಕಾರಣ ಇಂತಹ ಸಂಘಟನೆಯಿಂದ ಮರಾಠಿ ಹಾಗೂ ಕನ್ನಡ ಭಾಷಿಕರು ಸದಾಕಾಲ ಎಚ್ಚರದಿಂದ ಇರಬೇಕು. ಇತ್ತಿಚೀಗೆ ಬೆಳಗಾವಿ ನಗರ ಸಾರಿಗೆಯ ಬಸ್ ಒಂದರ ನಿರ್ವಾಹಕರ ಮೇಲಿನ ಹಲ್ಲೆಯು ವಿಷಾನಿಯ ರಾಜ್ಯ ಸರ್ಕಾರ ಇಂತಹ ದುಷ್ಟಕೃತ್ಯ ನಡೆಸುವವರ ಮೇಲೆ ಗುಂಡಾಕಾಯ್ದೆ ಅಡಿ ರಾಜ್ಯದಿಂದ ಗಡಿಪಾರು ಮಾಡಲು ಅವರು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಭರಮಪ್ಪ ದೊಡ್ಡಮನಿ, ಜಿಲ್ಲಾ ಸಂಚಾಲಕ ರಮೇಶ ಈಟಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಖಾಸಿಂಸಾಬ ಮುಲ್ಲಾ, ಸಂಚಾಲಕರಾದ ದಾವಲಸಾಬ ಸಿಂಪಿಗೇರ, ಶಿಗ್ಗಾವಿ ನಗರದ ಶಂಕರನಾಗ ಆಟೋ ಚಾಲಕರ ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು.