ರೈಲ್ವೇಸ್ ತಂಡಕ್ಕೆ ಕಾಟ ನೀಡಿದ ಕರ್ನಾಟಕದ ವೇಗಿಗಳು

ನವದೆಹಲಿ, ಜ.27:           ರಣಜಿ ಟೂರ್ನಿಯ ಎಲೈಟ್ ಎ ಗುಂಪಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ತಂಡದ ರೈಲ್ವೇಸ್ ತಂಡಕ್ಕೆ ಕಾಟ ನೀಡಿದೆ.  

ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ಮುಂದಾದ ಕರುಣ್ ನಾಯರ್ ನಿರ್ಧಾರವನ್ನು ಬೌಲರ್ ಗಳು ಸಮರ್ಥಿಸಿಕೊಂಡರು. ಅನುಭವಿ ವೇಗಿ ಅಭಿಮನ್ಯು ಮಿಥುನ್ ಹಾಗೂ ಪ್ರತೀಕ್ ಜೈನ್ ಅವರ ಮಾರಕ ದಾಳಿಗೆ ಎದುರಾಳಿ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಎಡವಿದರು. ಮೃನಾಲ್ ದೇವಧರ್ 12 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್ ಮನ್ ಗಳು ಒಂದಂಕಿಯಲ್ಲಿ ಆಟ ಮುಗಿಸಿದರು.

ಆರಂಭದಲ್ಲಿ ವೇಗಿಗಳು ಸರಿಯಾದ ಲೈನ್ ಹಾಗೂ ಲೆಂಥ್ ನಲ್ಲಿ ದಾಳಿ ನಡೆಸಿ ರೈಲ್ವೇಸ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕಿದರು. ಮಿಥುನ್ 2 ಹಾಗೂ ಪ್ರತೀಕ್ 4 ವಿಕೆಟ್ ಕಬಳಿಸಿದರು.