ಲೋಕದರ್ಶನ ವರದಿ
ವಿಜಯಪುರ 27: ನಗರದ ಪ್ರತಿಷ್ಠಿತ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾಗರ್ಿಲ್ ವಿಜಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸಪೇಕ್ಟರ್ ಶ್ರೀ ಮಲ್ಲಿಕಾಜರ್ುನ ಬಿರಾದಾರರವರು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡುತ್ತ ನಾನು ಒಂದು ಸಣ್ಣ ಹಿಂದುಳಿದ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದೆ ಪ್ರೌಢ ಶಿಕ್ಷಣವನ್ನು ಈ ಶಾಲೆಯಲ್ಲಿ ಕಲಿತು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಈ ಎಲ್ಲ ನನ್ನ ಏಳಿಗೆಗೆ ಈ ಶಾಲೆ ಮತ್ತು ಶಿಕ್ಷಕರು ಕಾರಣ. ನಾನು ಕಲಿತ ಶಾಲೆಯ ಬಗ್ಗೆ ನನಗೆ ಹೆಮ್ಮ ಇದೆ ಈ ಶಾಲೆಯು ನಾಯಕತ್ವ ಗುಣವನ್ನು ಬೆಳೆಸುತ್ತದೆ ಮತ್ತು ಯಾವಾಗಲೂ ಅಂತಹ ವೇದಿಕೆಯನ್ನು ನೀಡುತ್ತಾ ಬಂದಿದೆ ಅದನ್ನು ಎಲ್ಲ ವಿದ್ಯಾಥರ್ಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಇಂದು ಐಐಟಿ, ನೀಟ್ ಮತ್ತು ಜೆಇಇ ಮುಂತಾದವುಗಳಿಗೆ ವಿದ್ಯಾಥರ್ಿಗಳು ಹೆಚ್ಚಿನ ಪ್ರಾಧ್ಯಾನ್ಯತೆಯನ್ನು ನೀಡುತ್ತಿದ್ದಾರೆ ಅದರ ಜೊತೆಗೆ ಕೆ.ಎ.ಎಸ್., ಐ.ಎ.ಎಸ್. ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಪ್ರಾಮುಖ್ಯತೆ ನೀಡಬೇಕು ಅದರಲ್ಲಿ ಯಶಸ್ಸು ಸಾಧಿಸಬೇಕೆಂದು ನುಡಿದರು.
ಸಂಸ್ಥೆಯ ಕಾರ್ಯದಶರ್ಿಗಳಾದ ಡಾ.ಸುರೇಶ ಬಿರಾದಾರವರು ಮಾತನಾಡುತ್ತಾ ವಿದ್ಯಾಥರ್ಿ ಜೀವನದಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತವಾದ ಸ್ಥಾನಮಾನ ಗಳಿಸಲು ಸಾಧ್ಯ. ಇದಕ್ಕೆ ಉತ್ತಮವಾದ ಉದಾಹರಣೆ ಎಂದರೆ ನಮ್ಮ ಶಾಲೆಯಲ್ಲಿ ಕಲಿತ ಮಲ್ಲಿಕಾಜರ್ುನ ಬಿರಾದಾರ. ವಿದ್ಯಾಥರ್ಿಯು ಸಾಧನೆ ಮಾಡಿದರೆ ಮೊದಲು ಸಂತೋಷ ಪಡುವವರು ಪಾಲಕರು ಮತ್ತು ಕಲಿತ ಶಾಲೆ, ಶಿಕ್ಷಕರು ಈ ಮಟ್ಟಕ್ಕೆ ಬೆಳೆದ ಮಲ್ಲಿಕಾಜರ್ುನ ಬಿರಾದಾರವರ ಬಗ್ಗೆ ನಮಗೆ ಮತ್ತು ನಮ್ಮ ಶಾಲೆ, ಶಿಕ್ಷಕರಿಗೆ ಹೆಮ್ಮೆ ಮತ್ತು ಸಂತೋಷ ಇದೆ. ವಿದ್ಯಾಥರ್ಿಗೆ ನಿಜವಾದ ಸಾರ್ಥಕತೆ ಉಂಟಾಗುವುದು ತಾವು ಕಲಿತ ಶಾಲೆಗೆ ಮುಖ್ಯ ಅತಿಥಿಯಾಗಿ ಬಂದಾಗ ಮಾತ್ರ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಮುಂದುವರೆದು ಕಾಗರ್ಿಲ್ ಯುದ್ಧದಲ್ಲಿ ಹೀರೂ ಆದ ಕರ್ನಲ್ ರವೀಂದ್ರನಾಥ ಒಮ್ಮೆ ನಮ್ಮ ಶಾಲೆಗೆ ಭೇಟಿ ನೀಡಿ ವಿದ್ಯಾಥರ್ಿಗಳಿಗೆ ಸ್ಪೋತರ್ಿಯನ್ನು ನೀಡಿದ್ದರು. ಇಂದು ಅವರು ನಮ್ಮನ್ನು ಅಗಲಿ ಹೋಗಿದ್ದಾರೆ ಅದು ನಮಗೆ ಮತ್ತು ನಮ್ಮ ದೇಶಕ್ಕೆ ಆದ ನಷ್ಟ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಗರ್ಿಲ್ ಯುದ್ಧದಲ್ಲಿ ಭಾರತದ ಸೈನಿಕರ ಎದೆಗೆ ಹೊಕ್ಕ ಗುಂಡು ನೂರು ಬಾರಿ ಅತ್ತಿರಬಹುದು ಎಂದು ಕಾಗರ್ಿಲ್ ಯುದ್ಧದಲ್ಲಿ ತ್ಯಾಗ, ಬಲಿದಾನ ನೀಡಿದ ಸೈನಿಕರ ಕುರಿತು ಕುಮಾರಿ ಅಭಿಶ್ರೀ ಜಿ.ಜಿ. ಮಾತನಾಡಿದಳು.
ಶಾಲಾ ನಾಯಕಿಯಾಗಿ ಕುಮಾರಿ ಪವಿತ್ರಾ ಬಾಗೇವಾಡಿ, ಉಪ ನಾಯಕನಾಗಿ ಕುಮಾರ ಗುರುದತ್ತ ಜೋಶಿ, ಕ್ರೀಡಾ ನಾಯಕನಾಗಿ ಕುಮಾರ ಶಿವರಾಜ ಕರಡಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಗರ್ಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. ಪಾಕಿಸ್ತಾನ ಸೈನಿಕರ ವಿರುದ್ಧ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಲಾಯಿತು. ನಂತರ ಮಕ್ಕಳಿಂದ ದೇಶ ಭಕ್ತಿಗೀತೆ, ವೇಶಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಶೀಲಾ ಎಸ್.ಬಿರಾದಾರ ಉಪಸ್ಥಿತರಿದ್ದರು. ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ ಸ್ವಾಗತ ಕೋರಿದರು, ಶಿಕ್ಷಕ ಆನಂದ ಹೂಗಾರ ನಿರೂಪಿಸಿದರು, ಸವಿತಾ ಪಾಟೀಲ ವಂದಿಸಿದರು. ಎ.ಎಚ್. ಸಗರ, ಪ್ರವೀಣಕುಮಾರ ಗೆಣ್ಣೂರ, ಭಾರತಿ ಪಾಟೀಲ, ಉಮಾ ಮೂಡಲಗಿ, ಮೀನಾಕ್ಷಿ, ಅನಿತಾ, ಇಲಿಯಾಸ, ಶೋಭಾ, ನಿಕಿತಾ, ಇಂಧುಮತಿ, ಶ್ರೀದೇವಿ, ಸುರೇಖಾ, ಮೇಘಾ, ಎಸ್.ಆರ್.ಕಟ್ಟಿಮನಿ, ಸೀಮಾ, ಹಫೀಜ್, ಮತ್ತಿತರರು ಉಪಸ್ಥಿತರಿದ್ದರು.