ಕಾರ್ಗಿಲ್ ವಿಜಯ್ ದಿನ: ವೀರ ಯೋಧರಿಗೆ ರಾಷ್ಟ್ರಪತಿ ಗೌರವ

ಶ್ರೀನಗರ, ಜುಲೈ 26  ಕಾರ್ಗಿಲ್ ಯುದ್ಧದಲ್ಲಿ  ಹುತಾತ್ಮರಾದ ಯೋಧರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ಇಲ್ಲಿನ  ಕಂಟೋನ್ಮೆಂಟ್ನಲ್ಲಿರುವ ಯುದ್ಧ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದರು. 

ವಿಜಯ್ ದಿನದ ಅಂಗವಾಗಿ  ಲಡಾಖ್ ಪ್ರದೇಶದ ಕಾರ್ಗಿಲ್ ಜಿಲ್ಲೆಯ ಡ್ರಾಸ್ನಲ್ಲಿರುವ ಯುದ್ಧ ಸ್ಮಾರಕಕ್ಕೆ  ತೆರಳಿ ಯೋಧರಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದರೂ ಪ್ರತಿಕೂಲ  ಹವಾಮಾನದ ಕಾರಣ ಅವರು  ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. 

ಕಾರ್ಗಿಲ್ ವಿಜಯ ದಿನದ ಅಂಗವಾಗಿ " ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಸಾಸಹವನ್ನು ದೇಶವೇ ಕೊಂಡಾಡಲಿದೆ"  ಎಂದು ಅವರು ಬ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ.  

ಸಮಾರಂಭದಲ್ಲಿ ರಾಜ್ಯದ ರಾಜ್ಯಪಾಲ ಸತ್ಯ ಪಾಲ್ ಮಲಿಕ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾಗವಹಿಸಿದ್ದರು.  ನಂತರ ರಾಷ್ಟ್ರಪತಿ ಅವರು   ಕೇಂದ್ರ ಕಚೇರಿಯಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು