ಲೋಕದರ್ಶನ ವರದಿ
ಬೈಲಹೊಂಗಲ 22: ಮನುಷ್ಯನ ಬದುಕಿಗೆ ಸಂಭಂದಿಸಿದ ಜಾತ್ರೆಗಳು ಭಾವೈಕ್ಯತೆಯ ಪ್ರತಿರೂಪಗಳಾಗಿವೆ ಎಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ.ನಾಯಕ್ ಹೇಳಿದರು.
ಅವರು ಸೋಮವಾರ ಸಂಜೆ ಕೋರ್ಟ ಆವರಣದಲ್ಲಿರುವ ಕರೇಮ್ಮಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಜಾತ್ರೆಗಳು ಭಾವೈಕ್ಯತೆಯ ಪ್ರತಿರೂಪಗಳಾಗಿವೆ. ಒತ್ತಡದ ಜೀವನದಲ್ಲಿ ಬದುಕು ಸಾರ್ಥಕವಾಗಬೇಕು. ಅದಕ್ಕಾಗಿ ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಜಾತ್ರೆ, ಹಬ್ಬ-ಹರಿದಿನಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.
ಎಲ್ಲ ರಾಜ್ಯಗಳ ನ್ಯಾಯಾಲಯಗಳಲ್ಲಿ ವಕೀಲರ ಭವನಗಳಿವೆ. ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಲ್ಲ. ಭವನ ಸಲುವಾಗಿ ರಾಜ್ಯ ಮುಖ್ಯ ನ್ಯಾಯಾಧೀಶರ ಹತ್ತಿರ ಬೇಡಿಕೆ ಇಟ್ಟಾಗ ಭವನ ನೀಡಿದ್ದರು. ಈಗ ಸರಕಾರ ಆ ಭವನವನ್ನು ಕಸಿದುಕೊಳ್ಳುತ್ತಿದೆ ಇದರ ವಿರುದ್ದ ನಾವೇಲ್ಲ ಹೋರಾಟ ಮಾಡಬೇಕಾಗಿದೆ. ವಕಾಲತ್ತಿಗೆ ಈ ಮೊದಲು ವೆಲಫೆರ ಟಿಕೆಟ ಹಚ್ಚುತ್ತಿದ್ದರಿಂದ ಅದಕ್ಕೆ ನಂಬರ ಇರುತ್ತಿರಲಿಲ್ಲ ಗೋಲಮಾಲ್ ಆಗುವ ಸಾಧ್ಯತೆ ಬಹಳ ಇತ್ತು. ಈಗ ವೇಲಫೇರ ಟಿಕೆಟಿಗೆ ನಂಬರ ಹಚ್ಚುವದರಿಂದ ಎಲ್ಲವೂ ಪಾರದರ್ಶಕವಾಗಿದೆ ಎಂದರು.
ರಾಜ್ಯದ ಯಾವ ನ್ಯಾಯಾಲಯದಲ್ಲಿ ಈ ತರಹ ಜಾತ್ರೆ ನಡೆಯುವುದಿಲ್ಲ. ಸುಮಾರು ವರ್ಷಗಳಿಂದ ಕರೇಮ್ಮದೇವಿಯ ಜಾತ್ರೆ ಮಾಡುತ್ತಿರುವ ಬೈಲಹೊಂಗಲ ನ್ಯಾಯವಾದಿಗಳ ಸಂಘದ ಸದಸ್ಯರ ಕಾರ್ಯ ಮೆಚ್ಚುವಂತದಾಗಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿದರು.
ವೇದಿಕೆ ಮೇಲೆ ರಾಜ್ಯ ವಕೀಲರ ಪರಿಷತ ಸದಸ್ಯರಾದ ಎ.ಎ.ಮಗುದಮ್, ವಿನಯ ಮಂಗಳೇಕರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಕಾಯದರ್ಶಿ ದುಂಡೇಶ ಗರಗದ, ಕೆ.ಎಸ್.ಕುಲಕರ್ಣಿ ಇದ್ದರು.
ವಿ.ಆರ್.ಪತ್ತಾರ, ಎಸ್.ಬಿ.ಆನಿಗೋಳ, ಅನಿಲ ಕರಬನ್ನವರ, ಸಿ.ಎ.ವನ್ನೂರ, ವಿ.ಸಿ.ಪೂಜೇರ, ಎಮ್.ಆರ್.ಸೋಮನ್ನವರ, ಬಿ.ಆರ್.ಹರಿದಾಸ, ಎಸ್.ಬಿ.ಚಿಕ್ಕಮಠ, ಎ.ಎಂ. ಸಿದ್ರಾಮನಿ ಹಾಗೂ ನೂರಾರು ವಕೀಲರು ಇದ್ದರು.
ಕರೇಮ್ಮ ದೇವಿಗೆ ವಿಶೇಷ ಪೂಜೆ ಪುನಸ್ಕಾರ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆದವು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಇದೇ ಸಂದರ್ಭದಲ್ಲಿ ಮಹಾಪ್ರಸಾದ ಜರುಗಿತು.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ.ಎಸ್.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಎಫ್.ಎಸ್.ಸಿದ್ದನಗೌಡ್ರ ನಿರೂಪಿಸಿದರು. ಎಸ್.ಸಿ.ಕರೀಕಟ್ಟಿ ಸ್ವಾಗತಿಸಿದರು. ಎ.ವಿ.ಎಲಿಗಾರ ವಂದಿಸಿದರು.