ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಬೃಹತ್ತ ಪ್ರತಿಭಟನೆ

Karave Swabhimani faction holds massive protest against private educational institutions charging hi

ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಬೃಹತ್ತ ಪ್ರತಿಭಟನೆ  

ಹಾವೇರಿ  15: ಈ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಯಲ್ಲಪ್ಪ ಮರಾಠೆ ಮಾತನಾಡಿ ಹಾವೇರಿ ಜಿಲ್ಲಾದ್ಯಂತ ಕೆಲವಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರ ನಿಗಧಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವದರಿಂದ ಸರಕಾರ ನಿಗದಿ ಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಬಹಳ ಕಷ್ಟಕರವಾಗಿದೆ. ಆದ್ದರಿಂದ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಂದ ಹೆಚ್ಚಿನ ಪ್ರವೇಶ ಶುಲ್ಕ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮತ್ತು ತಾವು ಲಿಖಿತವಾದ ಆದೇಶವನ್ನು ಪತ್ರಿಕೆಗಳಲ್ಲಿ ಹೊರಡಿಸಿ, ತರಗತಿವಾರು ಅಂದರೆ ಎಲ್‌.ಕೆ.ಜಿ. ಯು.ಕೆ.ಜಿ. ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಶುಲ್ಕವನ್ನು ಪ್ರಕಟಣೆಯಲ್ಲಿ ಪ್ರಕಟಿಸಿ ನಿಮ್ಮ ವ್ಯಾಪ್ತಿಗೆ ಬರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆದೇಶವನ್ನು ಹೊರಡಿಸಬೇಕು ಎಂದು ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಶಾಕ್ಷರತ ಇಲಾಖೆ ಅಧಿಕಾರಿಗಳಾದ ಸುರೇಶ ಹುಗ್ಗಿ ಹಾಗೂ ಮಾನ್ಯ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಸವರಾಜ ಇಟ್ಟಿಗುಡಿರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾವೇರಿ ಜಿಲ್ಲಾದ್ಯಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಪಾಲಕರು ಲಿಖಿತವಾಗಿ ದೂರ ನೀಡಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಮತ್ತು ಆಯಾ ತಾಲೂಕು ಶಿಕ್ಷಣ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ತಮ್ಮ ತಾಲೂಕಿನ ವ್ಯಾಪ್ತಿಗೆ ಬರುವ ಖಾಸಗಿ ಶಿಕ್ಷಣ ಸಂಸ್ಥೆಯ ಯಾವುದಾದರೂ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕವನ್ನು ಪಡೆಯುತ್ತಿರುವುದು ಕಂಡು ಬಂದರೆ ಅಂತಹ ಸಂಸ್ಥೆಯ ಮೇಲೆ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.  

ಈ ಸಂದರ್ಬದಲ್ಲಿ ಯಲ್ಲಪ್ಪ ಮರಾಠೆ ಜಿಲ್ಲಾಧ್ಯಕ್ಷರು, ಗೀತಾಬಾಯಿ ಲಮಾಣಿ ಜಿಲ್ಲಾ ಮಹಿಳಾ ಅಧ್ಯಕ್ಷರು, ಪ್ರಕಾಶ ಪರ​‍್ಪಗೌಡ್ರ ಜಿಲ್ಲಾ ಪ್ರಧಾನಕಾರ್ಯದರ್ಶಿ, ಖಲಂದರ ಯಲೆದಹಳ್ಳಿ ಜಿಲ್ಲಾ ಯುವ ಘಟಕದ ಅಧ್ಯಕ್ಷರು, ರಾಜೇಸಾಬ ಮಾನೇಗಾರ, ಗಂಗಾಧರಯ್ಯ ಪಾಟೀಲ. ಪ್ರಕಾಶ ಡೊಂಬರ, ಮಾಲತೇಶ ಬಣಕಾರ, ಯುಸೂಫ ಸೈಕಲಗಾರ, ಶಂಕರ ಬಡಿಗೇರ, ಬಸವರಾಜ ಪಟ್ಟಣಶೆಟ್ಟಿ, ದಾದಾಪೀರ ಮಲ್ಲಾಡದ, ಸನಾವುಲ್ಲಾ ಪುರದಗೇರಿ, ಜ್ಯೋತಿ ಅರ್ಕಸಾಲಿ. ರೇಷ್ಮಾ ಬೀರಬ್ಬಿ, ಚನ್ನವೀರೇಶ ಯುವರಾಜ ಕರಾಠೆ, ಮಹಾವೀರ ಹಳ್ಳಿಯವರ ಮೇಘನಾ ಎಣ್ಣಿಯವರ, ಶ್ರೀಕಾಂತ ಚೂರಿ, ಅನೀಲ ಬಾರವಕರ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.