ಕರಾಟೆ ಪಟುಗಳು ಬಂಗಾರ ಪದಕದೊಂದಿಗೆ ಸಾಧನೆ

ಅಥಣಿ 23:  ಕರಾಟೆ ವಿದೇಶದಾದರರು ಭಾರತೀಯರು ಇದನ್ನು ಅಧ್ಯಯನ ಮಾಡಿ ಸಾಧನೆಯಲ್ಲಿ ಮೆರೆಯುತ್ತಿದ್ದಾರೆ. ಈಗ ತಾಲೂಕು ಹಳ್ಳಿಗಳಲ್ಲಿಯೂ ಸಹ ಇದರ ರುಚಿ ತಗುಲಿದ್ದು, ಅಬುತ್ವಪೂರ್ವ ಸಾಧನೆಗೈಯುತ್ತಿದ್ದಾರೆ. ಎಂದು ಕರಾಟೆ ಶಿಕ್ಷಕ ಪ್ರೀತಮ ಹೊನಖಾಂಡೆ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತ ಅಭಿಮಾನ ಪಟ್ಟು ಹೇಳುತ್ತೆನೆ ಎಂದರು. 

          ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜಪಾನ ಶೋಟೊಕಾನ ಕರಾಟೆ ಡೂ ಇಂಡಿಯಾ, ಕರಾಟೆ ಅಸೋಶೊಯೇಶ ಆಫ್ ಇಂಡಿಯಾ, ಒಲಂಪಿಕ ಅಸೋಶಿಯೇಶನ್, ವಿಶ್ವ ಕರಾಟೆ ಫೇಡರೇಶನ್, ಯುವ ಹಾಗೂ ಆಟೋಟದ ಫೇಡರೇಶನ ವತಿಯಿಂದ ನಡೆದ ಕರಟೆ ಚಾಂಪಿಯನಶಿಪ್-2019 ರ ಸ್ಪರ್ದೇಯಲ್ಲಿ ಅಥಣಿ ಶೋಟೋಕಾನ ಕರಾಟೆ ತಂಡದ ಆಟಗಾರರು ಕುಮಿಟಿ ಹಾಗೂ ಕಟಾ ಸ್ಪರ್ದೇಯಲ್ಲಿ ಸುಹಾನ ಬಿಸ್ತೆ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ, ಜತೀನ ಮಾನಕರ್ ಕುಮೀಟಿ ಸ್ಪರ್ದೇಯಲ್ಲಿ ಪ್ರಥಮ ಕಟಾ ಸ್ಪರ್ದೇಯಲ್ಲಿ ದ್ವಿತೀಯ, ನಿಖೀಲ ಬೆಳ್ಳಂಕಿ ಕುಮೀಟಿ ಸ್ಪರ್ದೇಯಲ್ಲಿ ತೃತೀಯ ಹಾಗೂ ಕಟಾ ಸ್ಪರ್ದೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ ಎಂದರು.

        ಮುಂದುವರೆದು  ಪೂಜಾ ಶಿಂಧೆ ಕುಮೀಟಿ ಹಾಗೂ ಕಟಾ ಸ್ಪರ್ದೇಯಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ, ಸ್ವಪ್ನಾ ಅವತಾಡೆ ಕುಮಿಟಿಯಲ್ಲಿ ದ್ವಿತೀಯ ಸ್ಥಾನ ಕಟಾ ಸ್ಪರ್ದೇಯಲ್ಲಿ ತೃತೀಯ ಸ್ಥಾನ, ಸಮೃದ್ದಿ ಚವ್ಹಾಣ ಕುಮೀಟಿಯಲ್ಲಿ ದ್ವಿತೀಯ ಕಟಾ ಸ್ಪರ್ದೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ, ಎನ್ನುತ್ತಾ ಸ್ತ್ರೀ, ಪುರುಷರು ಬೇಧಭಾವವಿಲ್ಲದೆ ಈ ವಿದ್ಯೆಯನ್ನು ಕಲಿತು ತಮ್ಮ ಸೌಂರಕ್ಷಣೆ ಮಾಡಿಕೊಳ್ಳುವುದು ಎಂದರು. ಸಾಧನೆಗೈದ ಈ ಎಲ್ಲ ವಿಧ್ಯಾಥರ್ಿಗಳಿಗೆ ಶಿಕ್ಷಕ ಪ್ರೀತಮ ಹೊನಖಾಂಡೆ ಮಾರ್ಗದರ್ಶನ ಮಾಡಿದ್ದಾರೆ.