ಬೆಂಗಳೂರು, ಜ 24 : ಬೆಂಗಳೂರು ಕರಾಟೆ ಚಾಂಪಿಯನ್‌ಶಿಪ್ ನಾಳೆ ಹಾಗೂ ರಾಷ್ಟ್ರೀಯ ಶಿಟಾರೊ ಕರಾಟೆ ಚಾಂಪಿಯನ್‌ಶಿಪ್ 26 ರಂದು ನಗರದ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಬಿಲ್ಡರ್ಸ್ ಕ್ಲಬ್‌ನಲ್ಲಿ ನಡೆಯಲಿದೆ.
ಅಖಿಲ ಭಾರತ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಯುರ್ ಕರಾಟೆ ಸ್ಕೂಲ್ ಆಫ್ ಇಂಡಿಯಾ ಆತಿಥ್ಯದಲ್ಲಿ ಕರಾಟೆ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಬೆಂಗಳೂರಿನ 40 ಶಾಲೆಗಳು ಹಾಗೂ 18 ರಾಜ್ಯಗಳ 700ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ. ಐದು ವರ್ಷಕ್ಕಿಂತ ಕಡಿಮೆ ವಯಸಿನ ವಿಭಾಗದ ಸ್ಪರ್ಧೆಗಳಲ್ಲಿ ಸುಮಾರು 91 ಮಂದಿ ಭಾಗವಹಿಸುವ ನಿರೀಕ್ಷೆೆ ಇದೆ. 21 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.
ಬೆಂಗಳೂರು ಕರಾಟೆ ಚಾಂಪಿಯನ್‌ಶಿಪ್ ಅನ್ನು ಸಂಘದ ಪ್ರಧಾನ ಕಾರ್ಯದರ್ಶಿ ರೆನ್ಷಿ ಆರ್ ಗಣೇಶ್, ವಿಶ್ವ ಕರಾಟೆ ಒಕ್ಕೂಟದ ನ್ಯಾಯಾಧೀಶರು ನಾಳೆ ಬೆಳಗ್ಗೆೆ 10.30 ಕ್ಕೆೆ ಉದ್ಘಾಟಿಸಲಿದ್ದಾರೆ. 26 ರಂದು ನಡೆಯುವ ರಾಷ್ಟ್ರೀಯ ಶಿಟೊ ಯುರ್ ಕರಾಟೆ ಚಾಂಪಿಯನ್‌ಶಿಪ್ ಅನ್ನು ಅಖಿಲ ಭಾರತ ಕರಾಟೆ ದೋ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕ್ಯೋಶಿ ಪಿ.ಆರ್ ರಮೇಶ್ ಉದ್ಘಾಟಿಸಲಿದ್ದಾರೆ.