ಲೋಕದರ್ಶನವರದಿ
ರಾಣೇಬೆನ್ನೂರು-ಫೆ.28: ನಗರದ ಹೊರವಲಯದ ಹುಣಸಿಕಟ್ಟಿ ರಸ್ತೆಯಲ್ಲಿ ಇರುವ ಖನ್ನೂರ ವಿದ್ಯಾನಿಕೇತನ ಸ್ಕೂಲ್ ಆವರಣದಲ್ಲಿ ಮಾ. 1 ರಂದು ಸಂಜೆ 6 ಗಂಟೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಾಷರ್ಿಕ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೆಸರಾಂತ ಯುವ ವಿಜ್ಞಾನಿ, ಭಾರತದ ಹೆಮ್ಮೆಯ ಡ್ರೋಣ್ ಸಂಶೋಧಕ ಪ್ರತಾಪ ಎನ್ಎಂ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಸಂಸ್ಥೆಯ ಅಧ್ಯಕ್ಷ ಎಮ್.ಎಮ್.ಖನ್ನೂರ, ಉಪಾಧ್ಯಕ್ಷೆ ಸುಲೋಚನಾ ಎಮ್ ಖನ್ನೂರ, ಕಾರ್ಯದಶರ್ಿ ಡಾ.ಪ್ರವೀಣ ಎಮ್ ಖನ್ನೂರ, ಡಾ.ಶೈಲಶ್ರೀ ಪಿ ಖನ್ನೂರ ಹಾಗೂ ಪ್ರಾಚಾರ್ಯ ಡಾ. ಮಹಾಂತೇಶ ಆರ್ ಕಮ್ಮಾರ, ಲೀಲಾವತಿ ಸೇರಿದಂತೆ ಶಾಲಾ ಮಕ್ಕಳು ಫೋಷಕರು ಮತ್ತಿತರರು ಆಗಮಿಸುವರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.