ಲೋಕದರ್ಶನ ವರದಿ
ಕೊಪ್ಪಳ 04: ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಳ ಗ್ರಾಮದ ಸವರ್ೇ ನಂ:67 ರ ವಿಸ್ತೀರ್ಣ 2-20 ಎಕರೆಯಲ್ಲಿ ಇರುವ ಸರಕಾರಿ ಜಾಗದಲ್ಲಿ ವಾಲ್ಮೀಕಿ ಭವನ ನಿಮರ್ಾಣಕ್ಕೆ ಕೆಲವರು ದೌರ್ಜನ್ಯವೆಸಗುತ್ತ ಅಡ್ಡಿಪಡಿಸುತ್ತಿದ್ದು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ದೌರ್ಜನ್ಯವೆಸಗುವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಾವರಗೇರಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಹೇಶ ಪಾಟೀಲ್ ಒತ್ತಾಯಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಈಗಾಗಲೇ ಹಲವಾರು ವರ್ಷಗಳಿಂದ ಆ ಜಾಗದಲ್ಲಿ ದ್ಯಾಮಮ್ಮದೇವಿ ದೇವಸ್ಥಾನ ಹಾಗೂ ಕುಡಿಯುವ ನೀರಿನ ಕೈಪಂಪ್ ಕೂಡ ಇದೆ ಆದರೆ ಆ ಸರಕಾರಿ ಜಮೀನನ್ನು ಸಂಗನಾಳ ಗ್ರಾಮದ ಡಿ.ಶಂಕ್ರಪ್ಪ ದಾಸರ, ವಿಠೋಬ ದಾಸರ, ನಿರುಪಾದಿ ದಾಸರ, ಹನುಮಂತ ದಾಸರ ಎಂಬುವರು ಒತ್ತುವರಿ ಮಾಡಿಕೊಂಡು ವಾಲ್ಮೀಕಿ ಭವನ ನಿಮರ್ಾಣ ಮಾಡಲು ಹೋದರೆ ದೌರ್ಜನ್ಯವೆಸಗುತ್ತಿದ್ದು ಆ ಜಾಗ ನಮ್ಮದು ಅದನ್ನು ಯಾರಿಗೂ ಕೊಡುವುದಿಲ್ಲ ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯತ್, ತಹಶೀಲ್ದಾರ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಮನವಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಹೀಗಾಗಿ ಕನ್ನಾಳ ಗ್ರಾಮದಲ್ಲಿ ವಾಲ್ಮೀಕಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ವಾಲ್ಮೀಕಿ ಭವನ ನಿಮರ್ಾಣ ಅನಿವಾರ್ಯವಿದೆ, ಒತ್ತುವರಿ ಸಾಗುವಳಿ ಮಾಡುತ್ತಿರುವ ಆ ಭೂಮಿಯನ್ನು ಬಿಡಿಸಿ ವಾಲ್ಮೀಕಿ ಭವನದ ಕಟ್ಟಡ ನಿಮರ್ಾಣಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೇ ಕನ್ನಾಳ ಗ್ರಾಮದ ವಾಲ್ಮೀಕಿ ಜನಾಂಗದ ಎಲ್ಲಾ ಜನತೆ ಉಗ್ರ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಅನಿವಾರ್ಯವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಾಳ ಗ್ರಾಮದ ಬಾಲನಗೌಡ ಗೌಡ್ರರು, ಸಗರಪ್ಪ ಮ್ಯಾಗಳಢಕ್ಕಿ, ಮುದುಕಪ್ಪ ಉಪಸ್ಥಿತರಿದ್ದರು.