ಗಡಿಭಾಗದಲ್ಲಿ ಕನ್ನಡ ಶಾಲೆಗಳು ಉಳಿಯಬೇಕು

ಲೋಕದರ್ಶನ ವರದಿ

ಚಮಕೇರಿ 03: ಗಡಿಭಾಗದಲ್ಲಿ ಕನ್ನಡ ಶಾಲೆಗಳು ಇವತ್ತು ಅಪಾಯದ ಅಂಚಿನಲ್ಲಿವೆ. ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡ ಶಾಲೆಗಳಲ್ಲಿ ವ್ಯವಸ್ಥಿತವಾದ ಶಿಕ್ಷಣ ಲಭಿಸಬೇಕು, ಈ ನಿಟ್ಟಿನಲ್ಲಿ ಸರಕಾರ ಶ್ರಮವಹಿಸುತ್ತಿದೆ. ಅದನ್ನು ಸಾರ್ವಜನಿಕರು ಸದ್ಭಳಿಕೆ  ಮಾಡಿಕೊಳ್ಳಬೇಕು ಎಂದು ಕೆ.ಎಂ.ಎಫ್ ನಿರ್ಧೆಶಕ ಅಪ್ಪಾಸಾಬ ಅವತಾಡೆ ಅವರು ಇಂದಿಲ್ಲಿ ಹೇಳಿದರು. 

ಚಮಕೇರಿಯಲ್ಲಿ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಟ್ರಸ್ಟ್ ಹಾಗೂ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಕನ್ನಡೋತ್ಸವ ಹಾಗೂ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪದೇಪದೇ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಹೆಚ್ಚು ಮಹತ್ವವನ್ನು ಕೊಡಬೇಕಾಗಿರುವ ಅವಶ್ಯಕತೆ ಇದೆ. ಕನ್ನಡ ಶಾಲೆಗಳು ಅಪಾಯದ ಅಂಚಿನಲ್ಲಿವೆ. ನಮಗೆಲ್ಲ ಮಾರ್ಗದರ್ಶನ ಮಾಡುವುದರೊಂದಿಗೆ ಇವತ್ತು ಎಲ್ಲಾ ಕಡೆ ಕನ್ನಡದ ಶಾಲೆಗೆ ಉಳಿವಿಗಾಗಿ ಶ್ರಮಿಸಬೇಕು  ಎಂದು ಆದೇಶ ನೀಡಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ತಮ್ಮ ಮಾತೃಭಾಷೆಗೆ,  ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಮಾತೃಭಾಷೆಗೆ ಹೆಚ್ಚು ಮಹತ್ವವನ್ನು ಕೊಡುತ್ತಾ, ವಿಶೇಷವಾಗಿರುವ ಅನುದಾನವನ್ನು ಸರ್ಕಾರಗಳು ನೀಡುತ್ತ ಬಂದಿವೆ. ಕರ್ನಾಟಕ ಸರಕಾರವು ಕೂಡ ವಿಶೇಷವಾಗಿರುವಂತ ನೆರವನ್ನು  ನೀಡಿದೆ. ಆದರೆ ಎಕೊ  ಗೊತ್ತಿಲ್ಲ ನಮ್ಮಜನ  ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವಲ್ಲಿ ಹಿಂದೆಟು ಹಾಕುತ್ತಿರುವುದು ನಿಜಕ್ಕೂ ಕೂಡ ಯೋಗ್ಯವಲ್ಲ. ನಾವೆಲ್ಲ ಕನ್ನಡವನ್ನು ಉಳಿಸಿ ಬೆಳೆಸಲು ಕನ್ನಡ ಶಾಲೆಗಳ ಉಳಿವಿನಿಂದ ಮಾತ್ರಸಾಧ್ಯ ಎಂದು ನುಡಿದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಪಂಚಾಯತ ಮಾಜಿ ಸದಸ್ಯ ಬಸವರಾಜ ಬುಟಾಳಿ ಅವರು ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಉಡಿತುಂಬುವ ಸಮಾರಂಭ ಮತ್ತು ಗಡಿಭಾಗದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವಂತಹ ಇಂತಹ ವಿನೂತನ ಸಮಾರಂಭ ಅದ್ಬುತವಾದುದು ಎಂದರು.  

ಸಾನಿದ್ಯ ವಹಿಸಿದ್ಧ ಅಡಹಳಟ್ಟಿ ದುರದುಂಡೇಶ್ವರ ಶಾಖಾಮಠದ  ಶಿವ ಪಂಚಾಕ್ಷರಿ ಮಹಾಸ್ವಾಮಿಗಳು,  ಹೊನವಾಡದ ಖ್ಯಾತ ಪ್ರವಚನಕಾರ ಬಾಬು ಮಹಾರಾಜರು ಮಾತನಾಡಿ, ಕನ್ನಡ ರಾಜ್ಯೋತ್ಸವ ಇದು ಕನ್ನಡಾಂಬೆಯ ಮಹೋತ್ಸವ. ಕನ್ನಡ ನಾಡು ನುಡಿಯ ವೈಭವವು ವೈಶಿಷ್ಠ್ಯಪೂರ್ಣವಾದುದೆಂದರು. ಎಸ್.ಡಿ.ಎಂ.ಸಿ ಅದ್ಯಕ್ಷ ಮಹಾದೇವ ಬಿರಾದಾರ ಅದ್ಯಕ್ಷತೆ ವಹಿಸಿದ್ದರು. ಗ್ರಾಪಂ ಅದ್ಯಕ್ಷ ಶ್ರೀಮತಿ ರೇಖಾ ಭಜಂತ್ರಿ, ಪಿಡಿಓ ಎ ಎಸ್ ಕುಲಕರ್ಣಿ, ತಾಪಂ ಸದಸ್ಯ ಶಿವಾಜಿ ಖೋಖಳೆ,   ಪ್ರಶಾಂತ ಪೂಜಾರಿ, ಪುಂಡಲೀಕ ಸೂರ್ಯವಂಶಿ, ಅಶೋಕ ಸೂರ್ಯವಂಶಿ ಅತಿಥಿಗಳಾಗಿ ಆಗಮಿಸಿದ್ದರು. ಎಸ್.ಡಿ.ಎಂ.ಸಿ ಸರ್ವ ಸದಸ್ಯರು, ಶಿಕ್ಷಕವೃಂದ, ಸಾರ್ವಜನಿಕರು ಉಪಸ್ಥಿತರಿದ್ದರು. 

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಜಿ ಎಮ್ ಹಿರೇಮಠ, ಅರುಣಕುಮಾರ ರಾಜಮಾನೆ, ಮಲ್ಲಿಕಾರ್ಜುನ ಕಕಮರಿ, ಅಣಪ್ಪ ದರೂರ, ಶ್ರೀಶೈಲ ಸಗಮ, ಮಹಾಂತೇಶ ಡೆಂಗಿ, ಸುವರ್ಣ ನಾಯಿಕ, ಘೂಳಪ್ಪ ಹಿಪ್ಪರಗಿ, ಗೀತಾ ಕುಲಕರ್ಣಿ, ಡಾ. ಮಾರುತಿ ಭಂಡಾರೆ ಸಾಧಕರಿಗೆ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಇಪ್ಪತೈದು ಜನ ಶಾಲಾ ಶಿಕ್ಷಕಿಯರು, ಅಂಗನವಾಡಿ ಶಿಕ್ಷಕಿಯರಿಗೆ ಉಡಿ ತುಂಬಲಾಯಿತು. ಶಿಕ್ಷಕ ಎಂ ಎನ್ ಧನಗರ ನಿರೂಪಿಸಿದರು. ಪ್ರದಾನ ಶಿಕ್ಷಕ ಜಿ ಎಸ್ ಶಿವಪುರ ಸ್ವಾಗತಿಸಿದರು. ಶಿಕ್ಷಕಿ ಎನ್ ಎಂ ನದಾಫ ವಂದಿಸಿದರು.