ಕನ್ನಡ ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆ!!! ಸರ್ಕಾರದ ನಿಧರ್ಾರ ತಡೆಹಿಡಿಯಲು ಆಗ್ರಹಿಸಿ ಸಕರ್ಾರಕ್ಕೆ ಮನವಿ

ರಾಣೇಬೆನ್ನೂರ 05- ರಾಜ್ಯದ  ಸರಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಹೊರಟಿರುವ ಕ್ರಮವನ್ನು ಖಂಡಿಸಿರುವ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟಿಸಿ ತಹಶೀಲ್ದಾರ ಕಚೇರಿಗೆ ತೆರಳಿ ಸಕರ್ಾರ ಇದಕ್ಕೆ ತಡೆಯಿಡಿಯಬೇಕೆಂದು ಆಗ್ರಹಿಸಿ ತಹಶೀಲ್ದಾರ ಮೂಲಕ ತಮ್ಮ ಮನವಿ ಸಲ್ಲಿಸಿ ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಗೌರವ ಕಾರ್ಯದಶರ್ಿ ವಿ.ವಿ.ಹರಪನಹಳ್ಳಿ ಅವರು ಬರುವ ಶೈಕ್ಷಣಿಕ ವರ್ಷವಾದ ಜೂನ್ ತಿಂಗಳಲ್ಲಿ ರಾಜ್ಯದಲ್ಲಿರುವ ಒಂದು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವತರ್ಿಸಲು ಕನರ್ಾಟಕ ಸಕರ್ಾರವು ನಿರ್ದರಿಸಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮುಂದಾಗಬಾರದು. ಸಕರ್ಾರ ಈ ಕುರಿತು ಸಂಪೂರ್ಣ ಚಿಂತನೆ ನಡೆಸಬೇಕು. ಮತ್ತು ಇದರಿಂದಾಗುವ ಸಾಧಕ, ಭಾದಕಗಳನ್ನು ಪರಮಶರ್ಿಸಬೇಕು ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. 

ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಇಂಗ್ಲೀಷ್ ಮಾಧ್ಯಮದಲ್ಲಿ ಪದವಿ, ವಿ.ಡಿ.ಶಿಕ್ಷಣ ಪೂರೈಸಿದವರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ಇದರ ಪರಿಣಾಮ ಈಗಾಗಲೇ ನೇಮಕಾತಿ ಹೊಂದಿದ ಕನ್ನಡ ಮಾಧ್ಯಮ ಶಿಕ್ಷಕರು ಅಥವಾ ಹೊಸದಾಗಿ ನೇಮಕಾತಿ ನಿರೀಕ್ಷೆಯಲ್ಲಿರುವ ಭಾವಿ ಶಿಕ್ಷಕರು ನಿರುಧ್ಯೋಗಿಗಳಾಗುತ್ತಾರೆ. ಇದರಿಂದ ಮತ್ತೆ ಸಮಸ್ಯೆ ಹುಟ್ಟಿಹಾಕಿದಂತಾಗುತ್ತದೆ ಎಂದು ವಿವರಿಸಿದ್ದಾರೆ. 

ಸಕರ್ಾರ ನಿರ್ಧರಿಸಿರುವ ಕ್ರಮವನ್ನು ಹಿಂಪಡೆದು ಆಂಗ್ಲ ಮಾಧ್ಯಮದ ಸಕರ್ಾರಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ವಿಚಾರವನ್ನು ಕೈಬಿಟ್ಟು ಯಥಾಸ್ಥಿತಿ ಮುಂದುವರಿಸಲು ಆಗ್ರಹಪೂರಕವಾಗಿ ಕೋರಿದ್ದಾರೆ. 

ಸಕರ್ಾರಿ, ಅನುದಾನಿತ ಖಾಸಗಿ ಸಂಸ್ಥೆಗಳ ನೇಮಕಾತಿಗಳಲ್ಲಿ ಹೆಚ್ಚು ಸ್ಥಳ ಕಾಯ್ದರಿಸಬೇಕು. ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಮಕ್ಕಳಿಗೆ ಶಾಲಾ ಹಂತದಿಂದ ರಾಜ್ಯ ಮಟ್ಟದ ವರೆಗೆ ಪ್ರತಿವರ್ಷ ಪ್ರೋತ್ಸಾಹ ಬಹುಮಾನ ಮತ್ತು ವಿದ್ಯಾಥರ್ಿ ವೇತನ ಘೋಷಿಸಬೇಕು. ಪ್ರಾಮಾಣಿಕ, ನಿಸ್ವಾರ್ಥ ಸೇವಾ ಶಿಕ್ಷಕರಿಗೆ ಸಕರ್ಾರವೇ ಹೆಚ್ಚಿನ ಬಡ್ತಿ ಮತ್ತಿತರ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವಂತೆ ಆಗ್ರಹಿಸಿರುವ ಹರಪನಹಳ್ಳಿ ಅವರು ಈ ಕುರಿತು ಸಕರ್ಾರಕ್ಕೆ ಸುಧಿರ್ಘ ಪತ್ರ ಬರೆದು ಒತ್ತಾಯಿಸಿದ್ದಾರೆ. 

ತಾಲೂಕಾಧ್ಯಕ್ಷೆ ಎ.ಬಿ.ರತ್ನಮ್ಮ, ಮಾಜಿ ಅಧ್ಯಕ್ಷ ಡಾ|| ಕೆ.ಹೆಚ್.ಮುಕ್ಕಣ್ಣನವರ, ಕನರ್ಾಟಕ ಸಂಘದ ಅಧ್ಯಕ್ಷ ಸಂಜೀವ್ ಶಿರಹಟ್ಟಿ, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಸೀತಾರಾಮ್ ಕಡೇಕಲ್ಲ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಇಂದಿರಾ ಬಾರಂಗಿ, ಗಂಗಮ್ಮ ಹಾವನೂರು, ಹನುಮಂತಪ್ಪ ಚಳಗೇರಿ, ಶೇಖಪ್ಪ ನಾಡರ, ಅ.ಸಿ.ಹಿರೇಮಠ,ಸ್ವಾಕರವೇ ಸಂಘಟಕಾ ಕಾರ್ಯದಶರ್ಿ ಕೋಟ್ರೆಶಪ್ಪ ಎಮ್ಮಿ, ಪ್ರಭಾಕರ ಶಿಗ್ಲಿ ಸೇರಿದಂತೆ ಮತ್ತಿತರೆ ಪದಾಧಿಕಾರಿಗಳು, ಮತ್ತಿತರೆ ಸಂಘಟನೆಗಳ ಮುಖಂಡರು ಗಣ್ಯರು ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.