ಲೋಕದರ್ಶನ ವರದಿ
ಬೆಳಗಾವಿ 21: ರಾಷ್ಟ್ರಕವಿ ಕುವೆಂಪುರವರು, ರಾಮಾಯಣ ದರ್ಶನಮ್ ಮಹಾ ಕಾವ್ಯಕ್ಕೆ ಗೌರವಯುತವಾದ ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗರಾಗಿದ್ದು ಅವರ ಜೀವಿತಾವಧಿಯಲ್ಲಿಯೇ, ಹೆಸರಿನ ಕುವೆಂಪು ವಿಶ್ವ ವಿದ್ಯಾಲಯ ಸ್ಥಾಪಿಸಲ್ಪಟ್ಟಿದ್ದು ಅವರಿಗೆ ಸಂದ ಗೌರವವಾಗಿದೆಯೆಂದರು. ಬರೆದ ಕವಿತೆಗಳ ಸಂಗೀತ ಕಾರ್ಯಕ್ರಮವನ್ನು ಉಮಾ ಸಂಗೀತ ಪ್ರತಿಷ್ಠಾನ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಗುರುದೇವ ರಾನಡೆ ಮಂದಿರದ ಕಾರ್ಯದಶರ್ಿ ಮಾರುತಿ ಜಿರಲೆ ಹೇಳಿದರು.
ನಗರದ ಗುರುದೇವ ರಾನಡೆ ಮಂದಿರದಲ್ಲಿ ಸೋಮವಾರ 20 ರಂದು ಹಿಂದವಾಡಿಯ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿಣಾಚರಣೆ ನಿಮಿತ್ಯ ಆಯೋಜಿಸಿದ ಕುವೆಂಪುರವರ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉಮಾ ಸಂಗೀತ ಪ್ರತಿಷ್ಠಾನದ ಕಾರ್ಯದಶರ್ಿ ಡಾ. ರಾಜೇಂದ್ರ ಮಠ ಪ್ರಾಸ್ತಾವಿಕವಾಗಿ ಮಾತನಾಡಿ, ರವಿ ಕಾಣದ್ದನ್ನು ಕವಿ ಕಾಣುವನು ಅನ್ನುವಂತೆ ಕವಿಯ ಕಲ್ಪನಾ ಶಕ್ತಿ ಅದ್ಭುತ. ಒಂದೊಂದು ಕವನ ಆತನ ಒಂದೊಂದು ಸಂಶೋಧನೆ. ರಾಗ ತಾಳಗಳ ಜೊತೆಗೆ ಸಂಗೀತದೊಂದಿಗೆ ಮಿಂದೆದ್ದು ಜನರ ಮನದಾಳದಲ್ಲಿ ಕವನವು ಇಳಿದಾಗ ಕವಿಯು ಕವನದ ಸಾರ್ಥಕತೆಯನ್ನು ಕಾಣುತ್ತಾನೆ. ಕುವೆಂಪುರವರ ಕಲ್ಪನಾ ಶಕ್ತಿ, ತಾಕರ್ಿಕತೆ, ಶಬ್ಧಗುಚ್ಛಗಳು, ಊಹಾಶಕ್ತಿಗಳು ಅದ್ಭುತ. ಅವರು ಬರೆದ ಐವತ್ತು ಕೃತಿಗಳು ಪ್ರತಿಯೊಂದು ವಿಭಿನ್ನ ಲೋಕಕ್ಕೆಳೆದುಕೊಂಡು ಹೋಗುತ್ತವೆ. ಈ ದಿನ ಕುವೆಂಪರವರ ಸ್ಮರಣಾರ್ಥಕವಾಗಿ ಅವರ ಕವಿತೆಗಳ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಲಾ ಮಠದ ಸ್ವಾಗತಿಸಿದರು. ರಾಜೇಂದ್ರ ಮಠದ, ಎಲ್ಲ ವಿದ್ಯಾಥರ್ಿಗಳು ತಮ್ಮ ಸುಮಧುರ ಕಂಠದಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗೀತಾ ಎಮ್ಮಿ ನಿರೂಪಿಸಿದರು. ರತ್ನಶ್ರೀ ಗುಡೇರ ವಂದಿಸಿದರು. ಅಶೋಕ ಕಟ್ಟಿ ಹಾಮರ್ೋನಿಯಮ್ ಹಾಗೂ ಜಿತೇಂದ್ರ ಸಾಬನ್ನವರ ತಬಲಾಸಾತ್ ನೀಡಿದರು. ಹಾಗೂ ಇತರರು ಇದ್ದರು.