ಬಾಗಲಕೋಟೆ: ಅಭಿನಯಿಸುವ ಪಾತ್ರಕ್ಕೆ ಜೀವ ನೀಡಿ ಆ ಪಾತ್ರದಲ್ಲಿ ತಾನೇ ತಾನಾಗಿ ಅಭಿನಯಿಸಿ ಅಭಿಮಾನಿಗಳ ಹೃದಯದಲ್ಲಿ ನೆಲೆ ನಿಂತವರು ಡಾ.ರಾಜ್ಕುಮಾರ್ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿಂದು ಹಮ್ಮಿಕೊಂಡ 91ನೇ ಡಾ.ರಾಜ್ಕುಮಾರ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅಪರ್ಿಸಿ ಗೌರವ ಸಲ್ಲಿಸಿ ಮಾತನಾಡಿದ ಅವರು ರಾಜ್ಕುಮಾರ ಕೇವಲ ನಟನಾಗಿರದೇ ಆದ್ಯಾತ್ಮ ಚಿಂತನೆಗಳುಳ್ಳ ಹಾಗೂ ಉತ್ತಮ ಯೋಗ ಪಟುವಾಗಿದ್ದರು. ಇಂತಹ ಸಾಧನೆಗಳಿಂದಲೇ ಅವರು ನಟನೆ ಮಾಡುವದರ ಜೊತೆಗೆ ಗಾಯಕರಾಗಿ ಮನತುಂಬಿ, ಹೃದಯತುಂಬಿ ಅನುಭವಿಸಿ ಹಾಡುತ್ತಿದ್ದರು ಎಂದರು.
ಅವರು ಹಾಡಿದ ಹಾಡುಗಳಲ್ಲಿ ಅದರಲ್ಲೂ ಆದ್ಯಾತ್ಮಿಕ ಹಿನ್ನಲೆಯುಳ್ಳ ಹಾಡು ನಾದಮಯ ಈ ಲೋಕವೆಲ್ಲ ಎಂಬ ಹಾಡಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ಡಾ.ರಾಜ್ ಸ್ವಲ್ಪವೇ ವಿದ್ಯಾವಂತರಾಗಿದ್ದರೂ ಕೂಡಾ ಗೌರ ಡಾಕ್ಟರೇಟ್ ಪದವಿ ಪಡೆಯುವದರೊಂದಿಗೆ ಅತ್ಯುನ್ನತ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಪಡೆದು ಮಾಡುವ ಕಾರ್ಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ದಕ್ಷೆ, ನಿಷ್ಠೆಯಿಂದ ಮಾಡಿದ್ದಾದರೆ ಸಾಧನೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟವರು ಡಾ.ರಾಜ್ಕುಮಾರ ಎಂದರು.
ರಾಜ್ಕುಮಾರ ಕೇವಲ ನಟನಾಗಿರದೇ ಕನ್ನಡ ನಾಡು ನುಡಿಗಾಗಿ ರಸ್ತೆಗೀಳಿದು ಹೋರಾಟ ಮಾಡಿದವರು. ಅವರು ಹೋರಾಟ ಮಾಡಿದ ಸಾಲಿನಲ್ಲಿ ಗೋಕಾಕ ಚಳುವಳಿ, ಕನ್ನಡದ ಕಾವೇರಿ ಹೋರಾಟಗಳು ನಾಡಿನ ಜನತೆಯಲ್ಲಿ ಹೋರಾಟದ ಮನೋಭಾವನೆ ಉತ್ಪತ್ತಿ ಮಾಡಿದವರು. ರಾಜ್ಕುಮಾರ ಇಂತಹ ಹೋರಾಟದಲ್ಲಿ ಸ್ವತಃ ಮುಂದಾಳತ್ವ ವಹಿಸುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿ ಕನ್ನಡ ನುಡಿಗಾಗಿ ಹಾಗೂ ಕನ್ನಡ ನಾಡು ರಕ್ಷಣೆಗಾಗಿ ಕನ್ನಡ ಭಾಷೆಯೊಂದನ್ನು ಹೊರತುಪಡಿಸಿ ಅನ್ಯ ಭಾಷೆಗಳಲ್ಲಿ ಅವರು ನಟಿಸಿಲ್ಲವೆಂದರು.
ಬೇರೆ ಭಾಷೆಗಳ ಚಿತ್ರಗಳು ಅವರನ್ನು ಹುಡಿಕಿಕೊಂಡು ಬಂದರೂ ಕನ್ನಡ ಭಾಷೆಯ ಮೇಲಿರುವ ಅಭಿಮಾನದಿಂದಾಗಿ ನಯವಾಗಿ ನಿರಾಕರಿಸಿದ್ದರು ಎಂದರು.
ಡಾ.ರಾಜ್ಕುಮಾರ ಅಭಿಮಾನಿ ಹಾಗೂ ಅವರನ್ನು ಸಮೀಪದಿಂದ ಕಂಡ ಸ್ಥಳೀಯರಾದ 93 ವರ್ಷದ ವಯೋವೃದ್ದೆ ಪಾರ್ವತಿಬಾಯಿ ಕಾಟವಾ ಅವರು ರಾಜ್ಕುಮಾರ ಅವರನ್ನು ಭೇಟಿ ಮಾಡಿ ಅತೀ ಸಮೀಪದಿಂದ ಕಂಡ ಅನುಭವಗಳನ್ನು ಹಂಚಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶೀಕಲಾ ಹುಡೇದ ಮಾತನಾಡಿ ಬಾಗಲಕೋಟೆಗೂ ಹಾಗೂ ಡಾ.ರಾಜ್ಕುಮಾರ ಅವರಿಗ ಅಭಿನಾಭಾವ ಸಂಬಂಧವಿದ್ದು, ಇದೇ ಜಿಲ್ಲೆಯ ಬೀಳಗಿಯ ಸನಾದಿ ಅಪ್ಪಣ್ಣ ಚಿತ್ರವನ್ನು ಅಭಿನಯಿಸಿ ಮತ್ತು ಜಿಲ್ಲೆಯ ಹೆಸರಾಂತ ನಾಟಕಕಾರ ಪಿ.ಬಿ.ದುತ್ತರಗಿಯವರ ಸಂಪತ್ತಿಗ ಸವಾಲ್ ಚಿತ್ರಗಳಲ್ಲಿ ನಟಿಸಿ ಬಾಗಲಕೋಟೆಗೂ ತಮ್ಮ ಕಲಾ ಕುಸುಮಗಳನ್ನು ಅಪರ್ಿಸಿದ್ದಾರೆ ಎಂದರು.
ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದರ್ೇಶಕ ಮಂಜುನಾಥ ಸುಳ್ಳೊಳ್ಳಿ ಪ್ರಾರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಖಜಾನೆ ಇಲಾಖೆಯ ಬನ್ನಿದಿನ್ನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.