ಬಾಗಲಕೋಟೆ: ಸರ್ವಜ್ಞರು ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಾಮಾನ್ಯನಿಂದ ಹಿಡಿದು ಎಲ್ಲರಿಗೂ ಮಾರ್ಗದರ್ಶನ ಹಾಗೂ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ಮೋನಚಾದ ಶಬ್ದಗಳಲ್ಲಿ ರಚಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ರಚಿಸದ ತ್ರಿಪದಿಗಳಿಲ್ಲ ಎಂಬ ಗಾದೆ ಪ್ರಚಲಿತವಾಗಿದೆ ಎಂದರು.
ತಮಿಳುನಾಡಿನಲ್ಲಿ ತಿಳುವರನ್ ಆಗಿಹೊದರೆ, ಆಂದ್ರಪ್ರದೇಶದಲ್ಲಿ ವೇಮನನಾಗಿ ಹೊಗಿದ್ದು ಆದರೆ ಕನ್ನಡಕ್ಕೆ ಒಬ್ಬನೆ ಸರ್ವಜ್ಞ ಎಂದರು. ಸರ್ವಜ್ಞ ರಚಿಸಿದ್ದು 7070 ತ್ರಿಪದಿಗಳು ಆದರೆ ನಮಗೆ ದೊರೆತಿದ್ದು ಕೆವಲ 1000 ತ್ರಿಪದಿಗಳು. ಇಂತಹ ಮಹಾನ ಕವಿಯ ಜಯಂತಿ ಆಚರಣೆ ಅಂಗವಾಗಿ ವಿದ್ಯಾಥರ್ಿಗಳ ಪಠ್ಯದಲ್ಲಿ ಸರ್ವಜ್ಞನ ವಚನಗಳನ್ನು ಅಳವಡಿಸಿಕೊಂಡು ಜಯಂತಿ ಸಂದರ್ಭದಲ್ಲಿ ಸ್ಪಧರ್ೆ ಏರ್ಪಡಿಸಿ ಬಹುಮಾನ ವಿತರಿಸುವ ಮೂಲಕ ವಿದ್ಯಾಥರ್ಿಗಳಿಗೆ ಸರ್ವಜ್ಞನ ಕುರಿತು ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಎಸ್.ಡಿ .ಕೆಂಗಲಗುತ್ತಿ ಮಾತನಾಡಿ ಕನ್ನಡ ಸಾಹಿತ್ಯದ ಜನ ಮನ ಧ್ವನಿ ಎಂದರೆ ಸರ್ವಜ್ಞನಾಗಿದ್ದು, ನಮ್ಮ ದೇಶದ ಚರಿತ್ರೆ ಪುಟಗಳಲ್ಲಿ ಅನೇಕ ಮಹಾನ ಕವಿಗಳು, ದಾರ್ಶನಿಕರು ಹಾಗೂ ಸಂತರನ್ನು ನಾವು ಕಾಣುತ್ತಿದ್ದೇವೆ. ಆದರೆ ತನಗಾಗಿ ಕೆಲಸ ಮಾಡಿದವರನ್ನು ಲೋಕ ಮರೆಯುತ್ತದೆ ಆದರೆ ಲೋಕದ ಉದ್ದಾರಕ್ಕೆ ಕೆಲಸ ಮಾಡಿದವನ್ನು ಲೋಕ ಕೊಂಡಾಡುತ್ತದೆ ಎನ್ನಲು ಸಾಕ್ಷಿಯೇ ಸರ್ವಜ್ಞನ ವಚನಗಳು ಎಂದರು.
ಮನುಷ್ಯನ ಜೀವನಕ್ಕೆ ಅವಶ್ಯಕವಾದ ಅನ್ನ ಮತ್ತು ಮಾತುಗಳು ಇದರ ಮಹತ್ವವನ್ನು ಜನರಿಗೆ ತಿಳಿಸಿ ಅನ್ನಕ್ಕಿಂತ ಇನ್ನೊಂದು ದೇವರಿಲ್ಲ ಎಂದು ಅನ್ನದ ಶ್ರೇಷ್ಟತೆ ತಿಳಿಸಿದ್ದಾರೆ.
ಸಮುದಾಯದ ಬದುಕಿಗೆ ಉತ್ತರವಾಗಿ, ತ್ರಿಕಾಲಜ್ಞಾನಿಯಾದ ಸಂತ ಕವಿ ಸರ್ವಜ್ಞನ ವಚನಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಮುಖಂಡರಾದ ಸಂಗಮ ಮಾತನಾಡಿ ಸರ್ವಜ್ಞ ಕವಿ ಸರ್ವಜ್ಞಾನಿ ಅವರ ವಚನಗಳು ಸರಳವಾಗಿ ಜನರನ್ನು ತಲುಪುವಂತವುಗಳು ಅವರ ತತ್ವಾದರ್ಶಗಳು ಇಂದಿನ ಯುವಕರಿಗೆ ಮಾರ್ಗ ಸೂಚಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ಜಿಲ್ಲಾ ಪಂಚಾಯತ ಉಪಕಾರ್ಯದಶರ್ಿ ಎ.ಜಿ.ತೋಟದ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರ ಬಸವರಾಜ ಶಿರೂರ ಸ್ವಾಗತಿಸಿ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.