ಲೋಕದರ್ಶನವರದಿ
ರಾಣೇಬೆನ್ನೂರು22: ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಸಾಹಿತ್ಯಕ್ಕೆ 1600 ವರ್ಷಗಳ ಪರಂಪರೆ ಇದೆ. ಕನ್ನಡ ವ್ಯಾಕಾರಣ ಪರಂಪರೆಗೆ 1000 ವರ್ಷಗಳ ಸುಧೀರ್ಘ ಇತಿಹಾಸವಿದ್ದು ಕವಿರಾಜ ಮಾರ್ಗದಿಂದ ಡಾ|| ಡಿ.ಎನ್.ಶಂಕರಭಟ್ಟರ ವರೆಗೂ ವ್ಯಾಕರಣ ಪರಂಪರೆ ಶ್ರೀಮಂತವಾಗಿ ಬೆಳೆದು ಬಂದಿದೆ ಎಂದು ಹಾವೇರಿ ಹುಕ್ಕೇರಿಮಠ ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ|| ಪುಷ್ಪಾವತಿ ಶಲವಡಿಮಠ ಹೇಳಿದರು.
ಅವರು ಶನಿವಾರ ನಗರದ ಎಸ್ಜೆಎಂವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ ನಡೆದ ವಿಶೇಷ ಉಪನ್ಯಾಸ ಹಾಗೂ ಸ್ವರಚಿತ ಕಾವ್ಯವಾಚನ ಸ್ಪಧರ್ೆ, ಪ್ರಥಮ ವರ್ಷದ ಐಚ್ಛಿಕ ಕನ್ನಡ ವಿಷಯದ ವಿದ್ಯಾಥರ್ಿನಿಯರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಚಾರ್ಯ ಡಾ| ಜಿ.ಇ.ವಿಜಯಕುಮಾರ ಅವರು ಮಾತನಾಡಿ, ಮಾತೃಭಾಷೆಗೆ ಹೆಚ್ಚು ಮಹತ್ವವನ್ನು ಕೊಡುವುದರ ಜೊತೆಗೆ ಮನೆ, ಮನಸ್ಸುಗಳಲ್ಲಿ ಕನ್ನಡ ದೀಪ ಹಚ್ಚುವ ಕಾರ್ಯ ಕೈಗೊಳ್ಳಬೇಕು.
ಇತರೆ ಭಾಷೆಗಳನ್ನು ಉಪಜೀವನಕ್ಕಾಗಿ ಬಳಸಿಕೊಂಡರೂ ಕನ್ನಡತನವನ್ನು ಮರೆಯಬಾರದು, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದರು.
ಅತೀವೃಷ್ಠಿ ಕುರಿತು ಸ್ವರಚಿತ ಕಾವ್ಯವಾಚನ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನವನ್ನು ಕಾವೇರಿ ಅಣ್ಣಪ್ಪ ಬಾಕರ್ಿ, ದ್ವಿತೀಯ ಸ್ಥಾನವನ್ನು ತನುಜಾ ನೀಲಮ್ಮನವರ್, ತೃತಿಯ ಸ್ಥಾನವನ್ನು ಭವಾನಿ ಬ್ಯಾಳಿ ಪಡೆದುಕೊಂಡರು. ನಿಂಬೆ ಹಣ್ಣಿನ ಓಟದ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನವನ್ನು ನೇತ್ರಾವತಿ ಹಲಗೇರಿ ದ್ವಿತೀಯ ಸ್ಥಾನವನ್ನು ಜ್ಯೋತಿ ಯಲಮಣ್ಣನವರ, ಕಲ್ಪನಾ ಕಡೆಮನಿ ತೃತಿಯ ಸ್ಥಾನವನ್ನು ಪಡೆದುಕೊಂಡರು.
ಡಾ.ಕೆ.ಜಿ.ಚವಾಣ, ತಿಪ್ಪವ್ವ ರಾಮಣ್ಣನವರ, ತಿರಕವ್ವ ಕೋಡಿಹಳ್ಳಿ, ತನುಜಾ ಜಿ.ಎನ್, ರೇಖಾ ಕೆಂಚನಗೌಡರ್, ಚೇತನಾ ಕೂನಬೇವು, ಮಾಲತೇಶ ಪೂಜಾರ, ಪ್ರೊ.ಜಿ.ವ್ಹಿ.ಕೋರಿ ಸೇರಿದಂತೆ ಮತ್ತಿತರರು ಇದ್ದರು.