ಕನ್ನಡ ಜನರ ಜೀವನದ ಭಾಷೆ: ಹುಳಿಯಾರ

ವಿಜಯಪುರ 02:  ಕನ್ನಡ ಭಾಷೆ ಸಹಸ್ರಾರು ವರ್ಷಗಳಿಂದ ಹಲವಾರು ಕನ್ನಡಗಳನ್ನು ಸೃಷ್ಠಿಸಿದೆ. ಕನ್ನಡ ಕೇವಲ ಕಾವ್ಯ ಭಾಷೆ ಅಲ್ಲ, ಜನರ ಜೀವನದ ಭಾಷೆಯಾಗಿ ಬೆಳೆಯುತ್ತಾ ಬಂದಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ  ನಿದರ್ೇಶಕ ಪ್ರೊ.ನಟರಾಜ ಹುಳಿಯಾರ ಅಭಿಪ್ರಾಯಪಟ್ಟರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದೈಹಿಕ ಶಿಕ್ಷಣ ನಿದರ್ೇಶನಾಲಯದ ವತಿಯಿಂದ 63ನೇ ಕನರ್ಾಟಕ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಏನನ್ನಾದರೂ ನುಡಿಸಬಹುದು, ಕನ್ನಡ ಭಾಷೆ ಕೇವಲ ಕಾವ್ಯ ಭಾಷೆಯಲ್ಲ. ಇದು ಜ್ಞಾನದ ಭಾಷೆ, ಜನಪದ ಸಾಹಿತ್ಯದ ಭಾಷೆ, ಸಂಪ್ರದಾಯಗಳ ಭಾಷೆ, ಸ್ನೇಹ ಸಾಮರಸ್ಯದ ಭಾಷೆಯಾಗಿದೆ ಎಂದು ಹೇಳಿದರು.

ಕನ್ನಡ ಮಾಧ್ಯಮದ ವಿದ್ಯಾಥರ್ಿಗಳು ಇಂಗ್ಲಿಷ್ ಭಾಷೆಯನ್ನು ಬಳಸುತ್ತಾರೆ. ಆದರೆ ಇಂಗ್ಲಿಷ್ ಮಾಧ್ಯಮದ ವಿದ್ಯಾಥರ್ಿಗಳು ಕನ್ನಡವನ್ನು ಹೆಚ್ಚಾಗಿ ಬಳಸದಿರುವುದರಿಂದ ಕನ್ನಡ ಭಾಷೆ ಬಡವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕನ್ನಡ ಏಕೀಕರಣ ಎನ್ನುವುದು ಸಾಮಾನ್ಯ ವಲಯದಿಂದ ಬಂದಿದ್ದರೂ ರಾಜಕೀಯ ಮೂಲದಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ಕನ್ನಡದ ಬಗ್ಗೆ ನಮ್ಮ ಆಲೋಚನೆ, ಬದುಕು, ಬರಹಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಬಳಸುವ ಬದಲು ಉಸಿರಾಟದ ಹಾಗೆ ಪ್ರತಿಕ್ಷಣ ಕನ್ನಡವನ್ನು ಬಳಸಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್. ಸುನಂದಮ್ಮ, ಆಥರ್ಿಕ ಅಧಿಕಾರಿ ಪ್ರೊ.ಪಿ.ಜಿ.ತಡಸದ ವೇದಿಕೆ ಮೇಲಿದ್ದರು. 

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಭಾಗವಹಿಸಿದ್ದರು. 

ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು. ದೈಹಿಕ ಶಿಕ್ಷಣ ನಿದರ್ೇಶನಾಲಯದ ನಿದರ್ೇಶಕ ಪ್ರೊ.ಎನ್.ಚಂದ್ರಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಪಿ.ಮಾಟರ್ಿನ್ ಪರಿಚಯಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಡಾ.ಜ್ಯೋತಿ ಉಪಾಧ್ಯೆ ವಂದಿಸಿದರು. 

ಧ್ವಜಾರೋಹಣ :

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದಲ್ಲಿ ದೈಹಿಕ ಶಿಕ್ಷಣ ನಿದರ್ೇಶನಾಲಯದ ವತಿಯಿಂದ ಹ್ಮಮಿಕೊಂಡಿದ್ದ 63ನೇ ಕನರ್ಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ವಿವಿ ಕುಲಪತಿ ಪ್ರೊಸಬಿಹಾ ಧ್ವಜಾರೋಹಣ ನೆರವೇರಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಗೀತ ವಿಭಾಗದ ವಿದ್ಯಾಥರ್ಿನಿಯರು ನಾಡಗೀತೆ ಹಾಡಿದರು. 

ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.