ಲೋಕದರ್ಶನ ವರದಿ
ಶಿರಹಟ್ಟಿ 24: ದ್ರಾವಿಡ ಭಾಷೆಗಳಲ್ಲಿ ಕನ್ನಡ ಕನ್ನಡ ಭಾಷೆಯು ಅತಿ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ಸಿ.ಸಿ.ಎನ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಿ.ಸಿ.ನೂರಶೆಟ್ಟರ ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತ ತಾಲೂಕ ಘಟಕದ ವತಿಯಿಂದ ಪಟ್ಟಣದ ಮ್ಯಾಗೇರಿ ಓಣಿಯ ಸರಕಾರಿ ಪ್ರೌಢ ಶಾಲೆಯಲ್ಲಿ, ಎಚ್.ಎಮ್.ದೇವಗಿರಿ ಕೊಡಮಾಡಿದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷಾ ಪ್ರೇಮವನ್ನು ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೆ ಬಿತ್ತುವದು ಅವಶ್ಯವಾಗಿದೆ. ಕನ್ನಡ ನಾಡಲ್ಲಿ ಕನ್ನಡದ ಉಳಿವಿಗಾಗಿ ಹೋರಾಟ ಮಾಡಬೇಕಾಗಿರುವದು ನಮ್ಮೇಲ್ಲರ ದುದರ್ೈವದ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದರು.
ನಂತರ ಮಾತನಾಡಿದ ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಸಾಹಿತ್ಯ ಕ್ಷೇತ್ರಕ್ಕೆ ಕವಿಗಳ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆಯಲ್ಲಿ ಸಾಹಿತ್ಯಿಕವಾಗಿ ಕೃಷಿಯಾದಷ್ಟು ಜಗತ್ತಿನ ಬೇರೆ ಯಾವೂದೆ ಭಾಷೆಯಲ್ಲಿಯು ಆಗಿಲ್ಲ ಎಂದರೆ ಅತೀಶೋಯುಕ್ತಿ ಆಗಲಾರದು. ಆದಿ ಕವಿ ಪಂಪ, ರನ್ನರಿಂದ ಇಂದಿನ ಯುವ ಕವಿಗಳ ವರೆಗೂ ಕನ್ನಡ ಭಾಷೆಗೆ ಅಪಾರವಾದ ಕೊಡುಗೆಯಿದೆ. ಹಾಗೂ 12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ನಮಗೆ ಬೆರೆ ಭಾಷೆಗಳಲ್ಲಿ ಕಾಣುವದಿಲ್ಲ ಎಂದು ಹೇಳಿದರು.
ಕಸಾಪ ತಾಲೂಕ ಅಧ್ಯಕ್ಷ ಎಮ್.ಕೆ.ಲಮಾಣಿ, ಕೆ.ಎ.ಬಳಿಗಾರ, ಎಚ್.ಎಮ್.ದೇವಗಿರಿ, ಆರ್.ಬಿ.ಕಮತ, ಎಮ್.ಎ.ಮಕಾಂದಾರ, ಗುರಪ್ಪ ಲಿಂಬಿಕಾಯಿ, ವೇಂಕಟೇಶ ಅರ್ಕಸಾಲಿ, ಎಲ್.ಟಿ.ಪಾಟೀಲ, ಪಿ.ಎಮ್.ದಾಮೋದರ ಮುಂತಾದವರು ಇದ್ದರು. ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ನಾಡು ನುಡಿ ಚಿಂತನೆಯ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಈರಣ್ಣ ರಿತ್ತಿ ಕಾರ್ಯಕ್ರಮ ನಿರೂಪಿಸಿದರು.