ಲೋಕದರ್ಶನ ವರದಿ
ಧಾರವಾಡ 31: ಕನ್ನಡ ಭಾಷೆ ವಿಶ್ವದಲ್ಲಿಯೆ ಉತ್ಕೃಷ್ಠ ಮತ್ತು ಅದ್ಭುತವಾದ ಭಾಷೆಯಾಗಿದೆ. ಕನ್ನಡ ಎಂಬುದು ಬರೀ ಭಾಷೆಯಲ್ಲ. ಕನ್ನಡ ಕನ್ನಡಿಗರ ಜೀವನಕ್ರಮವಾಗಿದೆ. ಕನ್ನಡಿಗರ ಜೀವನಾಡಿಯಾಗಿರುವ ಕನ್ನಡ ಭಾಷೆಯ ಅಸ್ಮಿತೆ ನಾವೆಂದೂ ಮರೆಯಬಾರದು ಎಂದು ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘದ 129 ನೇ ಸಂಸ್ಥಾಪನಾ ದಿನಾಚರಣೆಯ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ``ಮೆ. ಝಿಗ್ಲರ್ (ಸಾಹೇಬರು) ವೇದಿಕೆ'' ಯಿಂದ ಮಾತನಾಡಿದ ಅವರು, ಹಿರಿಯರು ಕಟ್ಟಿದ ಕನರ್ಾಟಕ ವಿದ್ಯಾವರ್ಧಕ ಸಂಘಕ್ಕೆ ತನ್ನದೇ ಆದ ಐತಿಹಾಸಿಕ ಶಕ್ತಿ ಹಾಗೂ ಭವ್ಯವಾದ ಇತಿಹಾಸವಿದೆ. ಕನ್ನಡ ಭಾಷೆಯಲ್ಲಿ ಇರುವ ಶಕ್ತಿಯಿಂದಲೇ ಉಳಿದ ಭಾಷೆಗಳಿಗಿಂತ ಕನ್ನಡಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಒಲಿದಿವೆ. ಇದು ಸಾವಿಲ್ಲದ ಭಾಷೆಯಾಗಿದೆ. ಕನ್ನಡ ಭಾರತದ ಎಲ್ಲ ಭಾಷೆಗಳಿಗಿಂತ ಸಮೃದ್ಧ, ಸಿಹಿಯಾದ ಹಾಗೂ ಮೃದುವಾದ ಭಾಷೆಯಾಗಿದೆ. ಕನ್ನಡ ಭಾಷೆ ಆಲಿಸಲು ಕೂಡ ಇಂಪಾಗಿದೆ. ಕನರ್ಾಟಕದ ವಿಸ್ತಾರ ಮೊದಲು ಕಾವೇರಿಯಿಂದ ಗೋದಾವರಿಯವರೆಗೆ ಇತ್ತು. ಅದು ಈಗ ಭೀಮಾ ನದಿಯ ತಟದವರೆಗೆ ಎಂಬಂತಾಗಿದೆ. ಈ ರೀತಿ ವಿಸ್ತಾರ ಕಡಿಮೆಯಾಗಲು ಕನ್ನಡಿಗರ ಔದಾರ್ಯವೆ ಕಾರಣ. ಕನ್ನಡಕ್ಕೆ, ಕನರ್ಾಟಕಕ್ಕೆ ಸಿಗಬೇಕಾದಷ್ಟು ಸ್ಥಾನಮಾನ, ಗೌರವ ಸಿಕ್ಕಿಲ್ಲ. ಇನ್ನೂ ಕನ್ನಡದ ಕೆಲಸ ಆಗುವುದು ಬಹಳವಿದೆ. ಆದ್ದರಿಂದ ಕನ್ನಡಿಗರು ಇನ್ನಾದರೂ ಎಚ್ಚೆತ್ತು ಕನ್ನಡದ ಕೈಂಕರ್ಯಕ್ಕೆ ಕೈ ಜೋಡಿಸಲಿ. ಈ ದಿಶೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಕನ್ನಡ ಕಟ್ಟುತ್ತಾ, ಬೆಳೆಸುತ್ತಾ, ಕನರ್ಾಟಕ ವಿದ್ಯಾವರ್ಧಕ ಸಂಘವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿದ ಶ್ರೇಯಸ್ಸು, ಕೀತರ್ಿ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರಿಗೆ ಸಲ್ಲುತ್ತದೆ. ನಿಜವಾಗಿ ಅವರು ಕನ್ನಡದ ಭೀಷ್ಮಾಚಾರ್ಯರು. ಯಾವುದೇ ಸರಕಾರ ಇರಲಿ ಡಾ. ಪಾಪುರವರ ಮಾತಿಗೆ ಬೆಲೆ ಕೊಡುತ್ತದೆ, ಅಷ್ಟೇ ಅಲ್ಲ ಹೆದರುತ್ತದೆ ಕೂಡಾ ಎಂದು ಮುಂದುವರೆದು ಮಾತನಾಡುತ್ತಾ ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಪ್ರೊ. ಸಿ. ವ್ಹಿ. ಕೆರಿಮನಿ ಅವರು ಮಾತನಾಡಿ, ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಕನರ್ಾಟಕ ವಿದ್ಯಾವರ್ಧಕ ಸಂಘವು ಕೈ ಎತ್ತಿ ಹೋರಾಟ, ಚಳುವಳಿಗಳನ್ನು ಹುಟ್ಟುಹಾಕಿ ಕನ್ನಡಿಗರನ್ನು ಬಡಿದೆಬ್ಬಿಸಿ ಜಾಗೃತಿಗೊಳಿಸುತ್ತಾ, ನಾಡು-ನುಡಿ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ಎಂದ ಅವರು ಸಂಘದ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡು, ಕನ್ನಡ ಕಟ್ಟುವ ಕಾಯದಲ್ಲಿ ಡಾ. ಪಾಪು ನಮಗೆ ಸ್ಥೂತರ್ಿಯ ಸೆಲೆಯಾಗಿದ್ದಾರೆ ಎಂದರು.
ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಗೌರವ ಉಪಸ್ಥಿತಿ ವಹಿಸಿದ್ದರು. ಸಂಘದ ಹಿರಿಯ ಸದಸ್ಯರಾದ ಶಿವಶಂಕರ ಹಿರೇಮಠ, ಎಂ.ಸಿ. ಬಂಡಿ, ಎಂ.ಆರ್. ಸತ್ಯನಾರಾಯಣ, ಡಾ. ಸುಲೋಚನಾ ಮಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಪ್ರಿ. ಶಿವಶಂಕರ ಹಿರೇಮಠ ಮತ್ತು ಎಂ. ಸಿ. ಬಂಡಿ ವಕೀಲರು, ಸಂಘವು ನಮ್ಮನ್ನು ಗುರುತಿಸಿ ಗೌರವ ಸೂಚಿಸಿದ್ದು ನಮ್ಮ ಜೀವಮಾನದ ಅವಿಸ್ಮರಣಿಯ ಘಳಿಗೆಯಾಗಿದೆ ಮತ್ತು ಸಂಘಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಹೇಳಿದರು.
ಹಾಸ್ಯ ಕಲಾವಿದರಾದ ಮಹದೇವ ಸತ್ತಿಗೇರಿ, ಮಲ್ಲಪ್ಪ ಹೊಂಗಲ ಹಾಗೂ ಡಾ. ರಾಜಶೇಖರ ಬಶೆಟ್ಟಿ ಹಾಸ್ಯ ಸಂಜೆ ನಡೆಸಿಕೊಟ್ಟು ಸಭೀಕರನ್ನು ನಗೆಗಡಲಲ್ಲಿ ತೇಲಿಸಿದರು.
ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಸ್ವಾಗತಿಸಿದರು. ಕಾ.ಕಾ. ಸಮಿತಿ ಸದಸ್ಯರಾದ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ಸನ್ಮಾನಿತರನ್ನು ಪರಿಚಯಿಸಿ, ವಂದಿಸಿದರು. ಡಾ. ಸ್ನೇಹಾ ಜೋಶಿ ಪ್ರಾಥರ್ಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ), ಕೋಶಾಧ್ಯಕ್ಷರಾದ ಕೃಷ್ಣ ಜೋಶಿ, ಪ್ರಧಾನ ಕಾರ್ಯದಶರ್ಿಗಳಾದ ಪ್ರಕಾಶ ಎಸ್. ಉಡಿಕೇರಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಮೋಹನ ನಾಗಮ್ಮನವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಗೌರವ ಉಪಾಧ್ಯಕ್ಷರಾದ ಎಂ. ಬಿ. ಕಟ್ಟಿ, ವಾಯ್. ಸಿ. ಬಿಜಾಪುರ, ಮಹೇಶ ಕುಲಕಣರ್ಿ, ಚಂದ್ರಶೇಖರ ಅಮಿನಗಡ, ಭರತ ಜಾಧವ, ಕೋರಿಶೆಟ್ಟರ, ಪ್ರಭು ಹಂಚಿನಾಳ, ಯಕ್ಕೇರಪ್ಪ ನಡುವಿನಮನಿ, ಡಾ. ವೀಣಾ ಸಂಕನಗೌಡರ, ಡಾ. ಶರಣಮ್ಮ ಗೋರೆಬಾಳ ಮತ್ತು ಶ್ರೀಮತಿ ಶಶಿಕಲಾ ಶಾಸ್ತ್ರಿಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.