ಕನ್ನಡ ಸಾಹಿತ್ಯ ಸಮ್ಮೇಳನ: ಪುಸ್ತಕ ಮಳಿಗೆಗಳ ಸ್ಥಳ ಪರಿಶೀಲನೆ

ಧಾರವಾಡ 27:  ಜನವರಿ 4, 5 ಹಾಗೂ 6 ರಂದು ನಡೆಯುವ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಾಪಿಸಲಾಗುತ್ತಿರುವ ಪುಸ್ತಕ ಮಳಿಗೆಗಳ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಸಮಿತಿ ಅಧ್ಯಕ್ಷ  ಎಸ್.ವಿ. ಸಂಕನೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕೃಷಿ ವಿಶ್ವವಿದ್ಯಾಲಯ ಆವರಣದ ಸಮ್ಮೇಳನದ ಮುಖ್ಯ ವೇದಿಕೆಯಿಂದ ಭೋಜನಾಂಗಣಕ್ಕೆ ತೆರಳುವ ಮಾರ್ಗ ಮತ್ತು ತಾಂತ್ರಿಕ ಘಟಕದ ಕಟ್ಟಡಗಳಲ್ಲಿ ನಿಮರ್ಿಸಲಾಗುತ್ತಿರುವ 480 ಮಳಿಗೆಗಳನ್ನು ವೀಕ್ಷಿಸಿದ ಶಾಸಕ ಎಸ್.ವಿ. ಸಂಕನೂರ ಅವರು, ಸಮ್ಮೇಳನಾಧ್ಯಕ್ಷರಾಗಿರುವ ಡಾ. ಚಂದ್ರಶೇಖರ ಕಂಬಾರ ಅವರ ಸಾಹಿತ್ಯ ಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೊದಲ ಎರಡು ಮಳಿಗೆಗಳನ್ನು ಮೀಸಲಿಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಿಗೆ 20 ಮಳಿಗೆಗಳನ್ನು ಒದಗಿಸಲಾಗುತ್ತಿದೆ. ವಿವಿಧ ಮಾಧ್ಯಮ ಸಂಸ್ಥೆಗಳು ಪ್ರಸಿದ್ಧ ಪ್ರಕಾಶಕರು ಅಜರ್ಿ ಸಲ್ಲಿಸಿದ್ದಾರೆ. ಆದ್ಯತೆಯಡಿ ಅವರಿಗೆ ಅವಕಾಶ ಕಲ್ಪಿಸಲಾಗುವುದು. ವಿದ್ಯುತ್, ನೀರು, ಶೌಚಾಲಯ, ಸ್ವಚ್ಚತೆ, ಕಸದ ಬುಟ್ಟಿ ಸೌಲಭ್ಯಗಳಿಗೆ ಒತ್ತು ನೀಡಲಾಗಿದೆ. ಆರೋಗ್ಯ ಸೇವೆ, ಸ್ವಯಂ ಸೇವಕರನ್ನು ಒದಗಿಸಲಾಗುವುದು ಎಂದು ಶಾಸಕ ಎಸ್.ವಿ. ಸಂಕನೂರ ತಿಳಿಸಿದರು.

    ಭೇಟಿಯ ಬಳಿಕ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದ ಅವರು, ಸಮಿತಿ ಸದಸ್ಯರು ಮತ್ತು ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು. ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕಿಮ್ಸ್ ಆಡಳಿತಾಧಿಕಾರಿ ಬಸವರಾಜ ಸೋಮಣ್ಣವರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಪಿ.ನಾಗೇಶ, ಉಪನಿದರ್ೇಶಕ ಮೋಹನ್ ಭರಮಕ್ಕನವರ, ಸಹಾಯಕ ನಿದರ್ೇಶಕ ಎನ್.ಎಂ. ಭೀಮಪ್ಪ,  ಕವಿವಿ ಪ್ರಸಾರಾಂಗದ ನಿದರ್ೇಶಕ ಡಾ.ಪವಾರ್, ಕನರ್ಾಟಕ ಕಾಲೇಜು ಪ್ರಾಧ್ಯಾಪಕ ಡಾ.ಡಿ.ಬಿ. ಕರಡೋಣಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಖ್ಯ ಗ್ರಂಥಾಲಯಾಧಿಕಾರಿ ಕರಿಗಾರ್ ಮತ್ತಿತರರು ಇದ್ದರು.