ಕಾಗವಾಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಆಧ್ಯಕ್ಷರಾಗಿ ಡಾ. ಭಾರತಿ ಸವದತ್ತಿ ಆಯ್ಕೆ

ಕಾಗವಾಡ 27: ಬರುವ ಜನೆವರಿ 19 ರಂದು ಕಾಗವಾಡ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಡಾ. ಭಾರತಿ ಸವದತ್ತಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ ತಿಳಿಸಿದರು.

ಬುಧವಾರ ರಂದು ಉಗಾರ ಖುರ್ದ ವಿಹಾರ ಸಭಾ ಭವನದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ತಿಳಿಸಿದರು.ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಪೂರ್ವಭಾವಿ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಅಥಣಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಡಾ. ಮಹಾನತೇಶ ಉಕಲಿ, ಮತ್ತು ನಿಕಟಪೂರ್ವ ಸಮ್ಮೇಳನ ಆಧ್ಯಕ್ಷೆ ಶಾಲಿನಿತಾಯಿ ದೊಡ್ಮನಿ ಇವರ ಮುಖ್ಯ ಉಪಸ್ಥಿತಿಯಲ್ಲಿ ಸಮ್ಮೇಳನ ಯಶಸ್ವಿಗೊಳಿಸಲು ಚಚರ್ಿಸಲಾಯಿತು.

ಸಭೆಯಲ್ಲಿ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಕವಿಗೋಷ್ಟಿ, ಚಿಂತನಗೋಷ್ಟಿ, ಆಶೆಯ ಭಾಷಣ, ಉದ್ಘಾಟನೆ, ಧ್ವಜಾರೋಹಣ, ಎಲ್ಲ ಸಂಗತಿಗಳ ಕುರಿತು ವಿವರವಾದ ಚಚರ್ೆ ಜರುಗಿತು.

ಕವಿಗೋಷ್ಟಿ:

ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿ ನಡೆಯಲಿದ್ದು. ಕಾಗವಾಡ ತಾಲೂಕಿನ ಕವಿಮಹೋದಯರು ತಮ್ಮ ಅಪ್ರಕಟಿತ ಕವನವನ್ನು ಕಸಾಪ ಕಾಗವಾಡ ಘಟಕದ ಸಮೀತಿ ಸದಸ್ಯ ಸಂಜೀವ ಕೋಳಿ(9980145170)ಗೆ ಸಂಪಕರ್ಿಸಿ ಕವಿತೆಗಳನ್ನು ವ್ಯಾಟ್ಸಆ್ಯಪ್ ಮೂಲಕ ಕಳುಹಿಸಲು ಕೋರಿದ್ದಾರೆ. ಅಲ್ಲದೇ, ಅಂಚೆ ಮೂಲಕವು ತಮ್ಮ ಫೊನ್ ನಂಬರ್ಗಳ ಸಹಿತ ಕಸಾಪ ಆಧ್ಯಕ್ಷರು, ಸೋನಾ ಕಾಂಪ್ಲೆಕ್ಸ್ ಉಗಾರ ಇವರಿಗೆ ಕಳುಹಿಸಬಹುದು ಎಂದು ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಸಿದ್ಧರಾಮ ಮೋಟಗಿ ತಿಳಿಸಿದರು.

ಸಾಧಕರ ಸನ್ಮಾನ:

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿರುವ ಸಾಧಕರನ್ನು ಸನ್ಮಾನಿಸುವ ನಿಧರ್ಾರ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಇದರಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ, ವೈದ್ಯಕಿಯ, ಕೃಷಿ, ಪತ್ರಿಕೋದ್ಯಮ, ರಾಷ್ಟ್ರಸೇವೆ, ಸಮಾಜ ಸೇವೆ, ಕ್ಷೇತ್ರಗಳ ಸಾಧಕರು ತಮ್ಮ ಹೆಸರುಗಳನ್ನು ಕಸಾಪಗೆ ತಲುಪಿಸಲು ಅಹ್ವಾನಿಸಲಾಗಿದೆ.

ಸಭೆಯಲ್ಲಿ ಉಗಾರ ಪುರಸಭೆ ಸದಸ್ಯರಾದ ಮಂಜುನಾಥ ತೇರದಾಳೆ, ಮದನ ದೇಶಿಂಗೆ, ಯೊಗೇಶ ಕುಂಬಾರ, ಶ್ರೀಹರಿ ವಿದ್ಯಾಲಯದ ಮುಖ್ಯಾಧ್ಯಾಪಕ ಆರ್.ಎ.ಮಿಜರ್ೆ, ಡಿ.ಡಿ.ಭೋಸಲೆ, ಕಲ್ಯಾಣಿ ಫಡ್ನಿಸ, ಆರ್.ಎಂ.ಜಾಯಗೊಂಡೆ, ಎಂ.ಡಿ.ಅಲಾಸೆ, ದೀಪಕ ಪಾಟೀಲ, ಎಚ್.ಪಿ.ನಾಯಿಕ, ಸಂಜಯ ಕುಣರ್ೆ, ದಯಾನಂದ ಪಾಟೀಲ, ಸೇರಿದಂತೆ ಅನೇಕರು ಇದ್ದರು.

ಫೋಟೊ ಶಿಷರ್ಿಕೆ: 26 ಕಾಗವಾಡ 2 ಉಗಾರ ವಿಹಾರ ಸಭಾ ಭವನದಲ್ಲಿ ಕಾಗವಾಡ ತಾಲೂಕಾ ಮಟ್ಟದ ಕಸಾಪ ಕಾರ್ಯಕ್ರಮದಲ್ಲಿ ಆಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ, ಮಹಾಂತೇಶ ಉಕಲಿ, ಶಾಲಿನಿತಾಯಿ ದೊಡ್ಮನಿ ಮತ್ತಿತರರು.