ಹಿಟ್ಟಿನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ: ವ್ಯಕ್ತಿತ್ವ ಬೆಳೆಯಲು ಮಾತೃಭಾಷೆ ಅತ್ಯವಶ್ಯಕ: ವಾಲೀಕಾರ

ವಿಜಯಪುರ 04: ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಮಹಾಮಂಡಳಿ  ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಮಾನವತಾ ಪ್ರಶಸ್ತಿ ಪುರಸ್ಕೃತ ಹಾಸಿಂಪೀರ ವಾಲಿಕಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತೃಭಾಷೆ ನಮ್ಮೆಲ್ಲರಿಗೂ ಆನಂದ, ನೆಮ್ಮದಿ ನೀಡುತ್ತದೆ. ವ್ಯಕ್ತಿತ್ವ ಬೆಳೆಸಿಕೊಳ್ಳಲು ಹಾಗೂ ಜ್ಞಾನವೃದ್ಧಿಸಿಕೊಳ್ಳಲು ಮಾತೃಭಾಷೆ ಅತ್ಯವಶ್ಯ. ಕುಟುಂಬದ ಭಾಷೆ ನಮಗೆಲ್ಲರಿಗೂ ಸ್ಪೂತರ್ಿ ನೀಡುತ್ತದೆ. ಕನರ್ಾಟಕ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು ಕನ್ನಡಕ್ಕೆ ಭದ್ರ ಬುನಾದಿ ನೀಡಿದರು. 12ನೇ ಶತಮಾನದಲ್ಲಿ ಕನ್ನಡದ ಭಾಷೆ ಶರಣರಿಂದ ಉಚ್ಚ್ರಾಯ ಸ್ಥಿತಿಗೆ ತಲುಪಿತು. ಕನ್ನಡ ಭಾಷೆ ಎಲ್ಲ ಭಾಷೆಗಳಿಂತ ಹಿರಿದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಗುರು ಬಸವಣ್ಣ, ಮಹಾಶಿವಶರಣೆ ಅಕ್ಕಮಹಾದೇವಿ, ಹೇಮರಡ್ಡಿ ಮಲ್ಲಮ್ಮ, ಅಲ್ಲಮಪ್ರಭು, ಸಿದ್ದರಾಮ ಅನೇಕ ವಚನಕಾರರ ಚಿಂತನೆಗಳು, ಗೋಷ್ಟಿಗಳು ನಡೆಯುತ್ತಿರುವುದು ಕನ್ನಡ ಭಾಷೆಗೆ ಹೆಮ್ಮೆ ತಂದಿದೆ. ಆದರೆ ಇತ್ತೀಚಿಗೆ ಜನರಲ್ಲಿ ಆಂಗ್ಲಭಾಷೆಯ ಬಗ್ಗೆ ವ್ಯಾಮೋಹ ಹೆಚ್ಚುತ್ತಿರುವುದರಿಂದ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಕುಸಿಯುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು. ನಿವೃತ್ತ ಶಿಕ್ಷಕ ದ್ಯಾಮಪ್ಪ ಇಂಡಿ ಮಾತನಾಡಿ, ಕನ್ನಡ ಭಾಷೆ ನಮಗೆಲ್ಲರಿಗೂ ಅನ್ನನೀಡಿ ಸಾಕಿ ಸಲುಹಿದೆ. ಕನ್ನಡ ಭಾಷೆಯಿಂದಲೇ ನಮಗೆ ಗೌರವ ದೊರಕಿದೆ. ಎಲ್ಲರೂ ಸೇರಿ ಕನ್ನಡ ಭಾಷೆಯನ್ನು ಇನ್ನೂ ಬೆಳೆಸಬೇಕಾಗಿದೆ. ಅತಿಯಾದ ಇಂಗ್ಲೀಷ ವ್ಯಾಮೋಹದಿಂದಾಗಿ ಕನ್ನಡಕ್ಕೆ ಧಕ್ಕೆಯಾಗುತ್ತಿದೆ ಎಂದರು.

ಯುವ ಮುಖಂಡ ಶಶಿಧರ ಅಥಗರ್ಾ, ಸೋಮನಾಥ ಕಲ್ಲೂರ, ಜ್ಯೋತಿಬಾ ಚವ್ಹಾಣ, ಮಲ್ಲಪ್ಪ ಭಾವಿಕಟ್ಟಿ, ಗೀತಾ ಚೌಧರಿ, ಲಕ್ಷ್ಮಣ ಬಗಲಿ, ಸವರ್ಾನಂದ ಕುಬರಡ್ಡಿ, ಮಹಮ್ಮದ ವಾಲಿಕಾರ, ದಾನಪ್ಪ ಅವಟಿ, ರೋಹಿತ ಮೆಳ್ಳಿ, ಸುರೇಶ ಜಾಧವ, ಬನ್ನೆಪ್ಪ ಯತ್ನಟ್ಟಿ, ಪ್ರವೀಣ ಬಿರಾದಾರ, ಅವಿನಾಶ ಸಾಲಿ, ಶಿವರಾಜ ಚಿಕ್ಕಲಕಿ, ಶ್ರೀಕಾಂತ ಬಾಗೇವಾಡಿ, ಸಂಗಮೇಶ ಬಾಗೇವಾಡಿ, ಸತೀಶ ಪಡನಾಡ, ವಿಜಯ ಮನಗೂಳಿ, ಆಲಮ ಮೋಮಿನ, ಸುನೀಲ ಮಂಗೋಡ, ಶಿವರಾಜ ಯರನಾಳ, ಶ್ರೀಕಾಂತ ನಾಟೀಕಾರ, ಆಕಾಶ ಗೆಣ್ಣೂರ, ಮಲ್ಲು ತಳವಾರ, ಸದಾಶಿವ ಬಗಲಿ, ಬಸವರಾಜ ಆಲಗೂರ ಉಪಸ್ಥಿತರಿದ್ದರು. 

ನಂತರ ಮಂಜುಳಾ ಹಿಪ್ಪರಗಿ ಮತ್ತು ತಂಡದವರಿಂದ ಕನ್ನಡ ಹಾಡುಗಳ ರಸಮಂಜರಿ ಕಾರ್ಯಕ್ರಮ ಜರುಗಿತು.