ಕನ್ನಡ ಸಾಹಿತ್ಯ ಸಮ್ಮೇಳನ: ಹೆಸರು ಕೈಬಿಟ್ಟು ಸಂಸದ ಜಿಗಜಿಣಗಿಗೆ ಅವಮಾನ

ಕನ್ನಡ ಸಾಹಿತ್ಯ ಸಮ್ಮೇಳನ: ಹೆಸರು ಕೈಬಿಟ್ಟು ಸಂಸದ ಜಿಗಜಿಣಗಿಗೆ ಅವಮಾನ Kannada Literary Conference: MP Jigajinagi Insulted by Omission of Name

ಲೋಕದರ್ಶನ ವರದಿ 

ಸಿಂದಗಿ 20: ನಗರದಲ್ಲಿ ನಡೆಯುತ್ತಿರುವ ವಿಜಯಪುರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಅನುಸರಿಸದೆ ವಿಜಯಪುರ ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಗಿ ಅವರ ಹೆಸರು ಕೈಬಿಟ್ಟು ಅವಮಾನಿಸಲಾಗಿದೆ. ಒಬ್ಬ ಹಿರಿಯ ಮುತ್ಸದ್ದಿ ರಾಜಕಾರಣಿ ಜಿಲ್ಲೆಯ ಸಂಸದರಿಗೆ ಆದ ಅವಮಾನ ಅವರೊಬ್ಬರಿಗೆ ಆದ ಅವಮಾನವಲ್ಲ ಇಡೀ ದಲಿತ ಸಮುದಾಯಕ್ಕೆ ಆದ ಅವಮಾನ ಎಂದು ಕರ್ನಾಟಕ ಆದಿಜಾಂಭವ ಜನಸಂಘ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಯಾವುದೇ ಭಾಗದಲ್ಲಿ ಸಮ್ಮೇಳನ ನಡೆದರು ಆ ಭಾಗದ ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವುದು ಸಂಪ್ರದಾಯವಾಗಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಇದನ್ನು ಗಾಳಿಗೆ ತೂರಿದ್ದಾರೆ. ಸಾಹಿತ್ಯ ಪರಿಷತ್ತು ಅನ್ನುವುದು ಸಾರ್ವಜನಿಕರ ಆಸ್ತಿ ಅದು ಯಾರೊಬ್ಬರ ಸ್ವತ್ತು ಅಲ್ಲ. ಕಸಾಪ ಕರ್ನಾಟಕ ಸರಕಾರದ ಅಂಗಸಂಸ್ಥೆಯಾಗಿದ್ದು ಬೇಕಾಬಿಟ್ಟಿ ಸಮ್ಮೇಳನ ನಡೆಸುತ್ತಿರುವುದು.

ವಿಷಾದಕರ ಕೇವಲ ಕಾಟಾಚಾರಕ್ಕೆ ಸಂಸದರನ್ನು ಹೊಗಳಿ ನೂರು -ಎರಡುನೂರು ಆಮಂತ್ರಣ ಪತ್ರಿಕೆ ಪ್ರಿಂಟ್ ಹಾಕಿ ವೇದಿಕೆ ಮೇಲೆ ಇಟ್ಟರೆ ಸಾಲದು ಬಹಿರಂಗವಾಗಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪಿರ ವಾಲಿಕಾರ ಅವರು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಕ್ಷಮೆ ಕೇಳಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಪ್ರಮಾದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ರಾಜ್ಯ ಸರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.