ಅಕ್ಷರ ಕಲಿಕೆಯ ಕನ್ನಡ ಭಾಷಾ ಮೇಳ

ಲೋಕದರ್ಶನ ವರದಿ

ಬೈಲಹೊಂಗಲ 17:  ವಿದ್ಯಾಥರ್ಿಗಳಲ್ಲಿನ ಬೌದ್ದಿಕ ಸಾಮಥ್ರ್ಯ ಅಭಿವ್ಯಕ್ತಿಗೊಳಿಸಲು ಅಕ್ಷರ ಕಲಿಕೆಯ ಕನ್ನಡ ಭಾಷಾ ಮೇಳ ಪೂರಕವಾಗಿದ್ದು ಇದರಿಂದ ಪ್ರತಿಯೊಂದು ಮಗುವು ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಅನೂಕೂಲವಾಗುತ್ತದೆ ಎಂದು ಎಂ.ಬಿ.ಮುಂಡರಗಿ ಹೇಳಿದರು.

      ಅವರು ತಾಲೂಕಿನ ಇಂಚಲ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆ ಪರಿಪೂರ್ಣವಾಗಿ ಕಲಿತರೇ ಉಳಿದೆಲ್ಲ ವಿದ್ಯೆ ಸಂಪಾದಿಸುವುದು ಸುಲಭವಾಗುತ್ತದೆ. 

ಭಾಷೆಯ ಕಲಿಕೆ ಮತ್ತು ಬೆಳವಣಿಗೆಗೆ ಪೂರಕವಾಗಿರುವ ಚಟುವಟಿಕೆಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ. 

ವಿದ್ಯಾಥರ್ಿಗಳಲ್ಲಿನ ಸುಪ್ತ ಪ್ರತಿಬೆ ಹೊರಹೊಮ್ಮುವುದು ಸೇರಿದಂತೆ ಅವರಲ್ಲಿ ಕಲಿಕೆಯ ಹೊಸ ಬೆಳಕು ಮೂಡಲು ಇಂಥ ಕ್ರೀಯಾತ್ಮಕ ಚಟುವಟಿಕೆಗಳು ಅವಶ್ಯವಾಗಿವೆ ಎಂದರು.

    ಮುಖ್ಯೋಪಾಧ್ಯಾಯ ಎ.ಆರ್.ಗಣಬಸಪ್ಪನವರ ಮಾತನಾಡಿ, ವಿದ್ಯಾಥರ್ಿಗಳಲ್ಲಿನ ಬೌದ್ದಿಕ ಸಾಮಥ್ರ್ಯ ಅಭಿವ್ಯಕ್ತಿಗೊಳಿಸಲು ಅಕ್ಷರ ಕಲಿಕೆಯ ಭಾಷಾ ಮೇಳ ಪೂರಕವಾಗಿದ್ದು ಇದರಿಂದ  ಪ್ರತಿಯೊಂದು ಮಗುವು ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಅನುಕೂಲವಾಗುತ್ತದೆ.  ವಿದ್ಯಾಥರ್ಿಗಳಲ್ಲಿನ  ಸೂಪ್ತ ಪ್ರತಿಬೆ ಹೊರಹುಮ್ಮುವುದು ಸೇರಿದಂತೆ ಅವರಲ್ಲಿ ಕಲಿಕೆಯ ಹೊಸ ಬೆಳಕು ಮೂಡಲು ಇಂಥ ಕ್ರಿಯಾತ್ಮಕ ಚಟುವಟಿಕೆಗಳು ಅವಶ್ಯಕವಾಗಿವೆ ಎಂದರು.

ಈ ಸಂದರ್ಭದಲ್ಲಿ ಆಯ್.ಎಸ್.ಕಲಗೌಡ್ರ, ಎ.ಎನ್.ಅಮ್ಮಿನಬಾವಿ, ಎಂ.ಸಿ.ಖನಗೌಡ್ರ, ಎಂ.ಕೆ.ಪಾಟೀಲ, ಮೋಹನ ಪಾಟೀಲ, ಎಲ್.ಎಂ. ಕುಮಕಾಗೋಳ, ಎಸ್.ಎಫ. ಹೊನ್ನಳ್ಳಿ, ಆರ್.ಎಸ್.ಕಿತ್ತೂರ, ಎಸ್.ಎಸ್. ಮದಿಹಾಳ ಇದ್ದರು.