ದೀಪಿಕಾ ಪಡುಕೋಣೆ ನೆಡೆಗೆ ಕಂಗನಾ ರಾಣಾವತ್ ಅಸಹನೆ

ಮುಂಬೈ, ಜ ೧೭ ,ಬಾಲಿವುಡ್  ನಟಿ  ದೀಪಿಕಾ ಪಡುಕೋಣೆ    ಪ್ರತಿಭಟನಾ ನಿರತ  ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ( ಜೆಎನ್ ಯು)  ವಿದ್ಯಾರ್ಥಿಗಳಿಗೆ    ಬೆಂಬಲ  ವ್ಯಕ್ತಪಡಿಸಿರುವುದಕ್ಕೆ  ಮತ್ತೊಬ್ಬ ಬಾಲಿವುಡ್  ನಟಿ ಕಂಗನಾ ರಾಣಾವತ್. ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಜವಹರಲಾಲ್ ನೆಹರೂ  ವಿಶ್ವ ವಿದ್ಯಾಲಯಕ್ಕೆ  ಹೋಗಿ ಮೌನವಾಗಿ ನಿಲ್ಲುವುದು   ದೀಪಿಕಾ ಪಡುಕೋಣೆ   ಅವರ ವೈಯಕ್ತಿಕ ವಿಷಯ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ.  “ವೆಬ್‌ಸೈಟ್”  ವೊಂದಕ್ಕೆ  ನೀಡಿರುವ  ಸಂದರ್ಶನದಲ್ಲಿ    ಕಂಗನಾ ರಾಣಾವತ್ ಜೆಎನ್‌ಯು ವಿದ್ಯಾರ್ಥಿಗಳನ್ನು    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ   ಶೈಲಿಯಲ್ಲಿ “ತುಕ್ಡೆ ತುಕ್ಡೆ  ಗ್ಯಾಂಗ್” ಎಂದು ಟೀಕಿಸಿದ್ದಾರೆ.  ಜೆಎನ್‌ಯು ವಿದ್ಯಾರ್ಥಿಗಳನ್ನು  ಭೇಟಿ ಮಾಡಿ  ಅವರ ಬೆಂಬಲಕ್ಕೆ ನಿಲ್ಲುವುದು  ದೀಪಿಕಾ ನಿರ್ಧಾರ.   ಆ ರೀತಿ  ಮಾಡುವ  ಹಕ್ಕು  ಅವರು ಹೊಂದಿದ್ದಾರೆ.  ಅದು  ಸರಿಯೋ, ತಪ್ಪೋ ..?  ಎಂದು  ನಾನು ಹೇಳುವುದಿಲ್ಲ.   ಆದರೆ ದೇಶ  ವಿಭಜಿಸಲು ಬಯಸುವವರನ್ನು ನಾನು ಬೆಂಬಲಿಸುವುದಿಲ್ಲ.  ಇಂತಹ ತುಕ್ಡೆ ತುಕ್ಡೆ  ಗ್ಯಾಂಗ್  ಪರವಾಗಿ  ತಾವು  ನಿಲ್ಲುವುದಿಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಕಂಗನಾ ರಾಣಾವತ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.  ಆದರೆ,  ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಚಿತ್ರ ’ಛಪಾಕ್’ ಬಗ್ಗೆ ಕಂಗನಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.