ಅತೀವೃಷ್ಠಿ-ಅನಾವೃಷ್ಠಿಯಿಂದ ಕಂಗಾಲಾದ ರೈತರು

ಲೋಕದರ್ಶನವರದಿ

ರಾಣೇಬೆನ್ನೂರು: ಜೂ.2: ಸಬ್ಸಿಡಿ ದರ ಹೆಚ್ಚಳವಾಗಿದ್ದು, ಕೂಡಲೇ ಅದನ್ನು ಕಡಿಮೆಗೊಳಿಸಬೇಕು. ರೈತರ ಬೇಡಿಕೆಗಳಿಗೆ ತಕ್ಕಂತೆ ಬೀಜಗಳನ್ನು ಪೂರೈಸಲು ಕ್ರಮ ಕೈಗೊಳ್ಳದ ಸಕರ್ಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಅವರ ನೇತೃತ್ವದಲ್ಲಿ ತಾಲೂಕಿನ ಕುಪ್ಪೇಲೂರು ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದು ನ್ಯಾಯ ವದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರೈತ ಮುಖಂಡ ರವೀಂದ್ರಗೌಡ ಪಾಟೀಲ ಅವರು ಬಿತ್ತನೆ ಬೀಜಕ್ಕೆ ನೀಡುವ ಸಬ್ಸಿಡಿ ದರ ಸಕರ್ಾರ ಹೆಚ್ಚಳ ಮಾಡಿದೆ.  ರೈತರ ಬೇಡಿಕೆಗನುಸಾರವಾಗಿ ಬಿತ್ತನೆ ಬೀಜಗಳನ್ನು ವಿತರಿಸುವಲ್ಲಿ ವಿಫಲವಾಗಿದೆ.  ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ವಿತರಿಸಲು ಸಕರ್ಾರ ಕ್ರಮ ಕೈಗೊಳ್ಳಬೇಕು.   ಅಲ್ಲದೇ, ಕೊರೋನಾ ವೈರಸ್ ಸೃಷ್ಟಿಸಿದ ಆತಂಕ ಸತತ ಅತೀವೃಷ್ಠಿ ಅನಾವೃಷ್ಠಿಯಿಂದ ಜಿಲ್ಲೆಯ ಮತ್ತು ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.  ಇಂತಹ ಸಂದರ್ಭದಲ್ಲಿ ಸಕರ್ಾರ ರೈತರ ನೆರವಿಗೆ ಧಾವಿಸಬೇಕು.  ಸಕರ್ಾರ ಸಬ್ಸಿಡಿ ರೂಪದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಸಬ್ಸಿಡಿ ಬಿತ್ತನೆ ಬೀಜಗಳ ವಿತರಣೆಯಿಂದ ರಾಜ್ಯದ ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗಿಲ್ಲ.  ಆದರೆ, ದರ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ.   ಲಾಕ್ಡೌನ್ ಮುನ್ನ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೇ, ಜಮೀನುಗಳಲ್ಲಿಯೇ ಬೆಳೆ ಹಾಳಾಗಿ ಕೊಳೆತುಹೋಗಿವೆ.  ಇದರಿಂದ ರೈತ ಸಮುದಾಯ ಅಪಾರ ನಷ್ಟ ಅನುಭವಿಸಿದೆ.   ನೆಪಮಾತ್ರಕ್ಕೆ ಬೀಜ ವಿತರಿಸುವಂತೆ ಮಾಡಿ ಸಕರ್ಾರ ಕೈತೊಳೆದುಕೊಂಡಿದೆ.  ಇದರಿಂದ ರೈತರ ಸಮಸ್ಯೆ ಪರಿಹಾರ ಕಂಡಿಲ್ಲ.   ಹಾನಿಗೊಂಡಿರುವ ರೈತರಿಗೆ ಬೀಜಗಳನ್ನು ವಿತರಣೆ ಮಾಡಬೇಕು ಮತ್ತು ಎಲ್ಲಾ ಕಂಪನಿಗಳು ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಸಿರುವ ಮನವಿಯಲ್ಲಿ ಪಾಟೀಲ ಉಲ್ಲೇಖಿಸಿದ್ದಾರೆ.   

ಈ ಸಂದರ್ಭದಲ್ಲಿ ಜೆ.ಬಿ. ಮಾಗನೂರ, ಯಲ್ಲಪ್ಪ ಚಿಕ್ಕಣ್ಣನವರ, ಶಿವಾನಂದ ಬುಳ್ಳಮ್ಮನವರ, ಎಸ್.ಎಸ್.ಗರಡಿಮನಿ, ಹರಿಹರಗೌಡ ಪಾಟೀಲ, ಜಯಣ್ಣ ಮಾಗನೂರ, ಕೆಂಚನಗೌಡ ಪಾಟೀಲ, ಅಶೋಕಪ್ಪ ಮಣಕೂರ, ಗದಿಗೆಪ್ಪ ನೇಕಾರ, ನಾಗರಾಜ ಸುವರ್ೆ, ಜಮಾಲಸಾಬ್, ಸುರೇಶ್ ಬಾನುವಳ್ಳಿ, ಮಂಜುನಾಥ ಮೂಲಿಮನಿ ಸೇರಿದಂತೆ ಕುಪ್ಪೇಲೂರ ಪಂಚಾಯ್ತಿ ವ್ಯಾಪ್ತಿಯ ಹಾಗೂ ತಾಲೂಕಿನ ನೂರಾರು ರೈತರು ಪಾಲ್ಗೊಂಡಿದ್ದರು. 

ಮನವಿ ಸ್ವೀಕರಿಸಿದ ಉಪತಹಶೀಲ್ದಾರ ಎಂ.ಎನ್.ಕಡೂರ ಮತ್ತು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೇಶವಮೂತರ್ಿ ಅವರು ಮಾತನಾಡಿ ರೈತರು ತಮ್ಮ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದು, ಸದರಿ ಮನವಿಯ ಪ್ರತಿಯನ್ನು ಯಥಾವತ್ತಾಗಿ ಜಿಲ್ಲಾಡಳಿತದ ಮೂಲಕ ಸಕರ್ಾರಕ್ಕೆ ರವಾನಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು