ಕನಕದಾಸರು ಮನುಕುಲ ಕಂಡ ಮಹಾ ದಾರ್ಶನಿಕ: ಯಲ್ಲನಗೌಡ ಪಾಟೀಲ

ಕನಕದಾಸರು ಮನುಕುಲ ಕಂಡ ಮಹಾ ದಾರ್ಶನಿಕ: ಯಲ್ಲನಗೌಡ ಪಾಟೀಲ Kanakadasa was the greatest seer of mankind: Yallanagowda Patila


ಮಹಾಲಿಂಗಪುರ 08: ಕನಕದಾಸರು ಕುರುಬ ಸಮುದಾಯಕ್ಕೆ ಸೀಮಿತ ಮಾಡಬಾರದು ಮಹಾತ್ಮರಿಗೆ ಜಾತಿ ಇಲ್ಲ ಅವರು ಜಾತಿ ವ್ಯವಸ್ಥೆ ಮೀರಿ ಬೆಳೆದವರು ವಿಶ್ವ ಮಾನವರು ಅವರ ಜಯಂತಿಯನ್ನು ವರ್ಷಕೊಮ್ಮೆ ಮಾಡದೇ ಮಹಾತ್ಮರ ಜಯಂತಿಗಳು ವರ್ಷವಿಡಿ ಆಚರಿಸಬೇಕು ಆಗಲೇ ಆಚರಣೆಗೆ ಒಂದು ಅರ್ಥ ಬರುತ್ತದೆ. ಕನಕದಾಸರು ಮನುಕುಲದ ಮಹಾ ದಾರ್ಶನಿಕರಾಗಿದ್ದರು ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು. ಅವರು ನಗರದ ಪುರಸಭೆಯಲ್ಲಿ ಆಯೋಜಿಸಿದ ಕನಕದಾಸರ 538 ನೇ ಜಯಂತಿ ಅಂಗವಾಗಿ ಕನಕದಾಸರ ಭಾವ ಚಿತ್ರಕ್ಕೆ ಮಾಲಾರೆ​‍್ಣ ಮಾಡಿ ಪೂಜೆ ಸಲ್ಲಿಸಿ ಮಾತನಾಡಿ ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಉಸಿರಾಡುವ ಗಾಳಿ ಯಾವ ಕುಲ, ಕತ್ತಲೆ ಹೋಗಲಾಡಿಸುವ ಬೆಳಕು ಯಾವ ಕುಲ, ಕುಡಿಯುವ ನೀರು ಯಾವ ಕುಲ, ತಿನ್ನುವ ಅನ್ನ ಯಾವ ಕುಲ ಇವುಗಳಿಗೆ ಹೇಗೆ ಜಾತಿ ಇಲ್ಲವೋ ಹಾಗೆ ಭೂಮಿ ಮೇಲೆ ಹುಟ್ಟಿದ ಮನುಷ್ಯರೆಲ್ಲಾ ಒಂದೇ ಕುಲ ಮನುಜ ಕುಲ ಎಂದು ಸಾರಿದರು.  ಮನುಜ ಕುಲದಲ್ಲಿ ಪ್ರತ್ಯಕ್ಷ ದೇವರನ್ನು ಕಂಡವರು ಯಾರಾದರೂ ಇದ್ದರೇ ಅವರು ಒಬ್ಬರೇ ಅವರು ಭಕ್ತ ಕನಕದಾಸರು. 98 ವರ್ಷ ಬದುಕಿದ ಅವರು ಒಟ್ಟು 316 ಕೀರ್ತನೆಗಳನ್ನು ರಚಿಸಿದ್ದಾರೆ. ನಾಲ್ಕು ಕೃತಿಗಳನ್ನು ರಚಿಸಿದ್ದಾರೆ ದಾಸ ಪರಂಪರೆಯಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.  15 -16 ನೆಯ ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ದಾಸ ಪರಂಪರೆಯಲ್ಲಿ ಬರುವ 250 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ ಎಂದರು. ಪುರಸಭೆ ಸದಸ್ಯರಾದ ಶೇಖರ ಅಂಗಡಿ ಮಾತನಾಡಿದರು. ಕನಕದಾಸ ಬ್ಯಾಂಕಿನಲ್ಲಿ ಆಚರಣೆ ಕನಕದಾಸ ಪತ್ತಿನ ಸಹಕಾರಿ ಸಂಘದಲ್ಲಿ ಕನಕದಾಸರ 538 ನೇ ಜಯಂತಿ ಅಂಗವಾಗಿ ಭಕ್ತ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕಣ್ಣವರ ಸಕಲ ಮನು ಕುಲ ಉದ್ಧಾರಕರಾಗಿದ್ದರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನಗಳು, ಸುಳಾದಿಗಳು, ಉಗಭೋಗಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಅರ​‍್ಿಸಿದರು. ಇವರ ಮುಖ್ಯ ಐದು ಕಾವ್ಯ ಕೃತಿಗಳಾದ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಸಾರ, ನೃಸಿಂಹಸ್ತವ. ಅವರ ಒಂದು ಕೃತಿ ಹೀಗಿದೆ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ, ಬರಿದೆ ಮಾತೇಕಿನ್ನೂ, ಅರಿತು ಪೆಳುವೇನಯ್ಯ. ಸಮಾಜದಲ್ಲಿ ಮೂಢನಂಬಿಕೆ, ಜಾತಿ, ಪದ್ಧತಿ, ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಎಲ್ಲರನ್ನು ಸಮಾನತೆ ದೃಷ್ಠಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು. 

ಕನಕನ ಕಿಂಡಿ : ವ್ಯಾಸತೀರ್ಥರ ಶಿಷ್ಯರಾದ ಕನಕದಾಸರು ಪರಮ ಕೃಷ್ಣನ ಭಕ್ತರಾಗಿದರು.ಕೃಷ್ಣನನ ದರ್ಶನಕ್ಕೆ ಉಡುಪಿಗೆ ಬಂದಾಗ ಅವರ ಬಟ್ಟೆಗಳನ್ನು ನೋಡಿ ಇವನು ಕೆಳಜಾತಿಯ  ಮನುಷ್ಯ ಎಂದು ನಿರ್ನಯಿಸಿ ಕನಕನನ್ನು, ಪುರೋಹಿತರು ಮಂದಿರ ಪ್ರವೇಶಿಸಲು ಬಿಡಲಿಲ್ಲ, ಆದರೂ ಬಿಡದೆ ದೇವಸ್ಥಾನದ ಹಿಂಭಾಗಕ್ಕೆ ಹೋಗಿ ಕೃಷ್ಣನ ಧ್ಯಾನ ಮಾಡುತ್ತಾ ಭಕ್ತಿಯಲ್ಲಿ ಮುಳುಗಿದರು (ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ) ಹಾಡತೊಡಗಿದರು ಶಿಷ್ಯನ ಭಕ್ತಿಗೆ ಒಲಿದು ಕೃಷ್ಣ ಗೋಡೆ ಒಡೆದು ಕನಕನ ಕಡೆ ತಿರುಗಿ ದರ್ಶನ ಕೊಟ್ಟು ಶಿಷ್ಯನ ಭಕ್ತಿಗೆ ಒಲಿದ ಇದೆ ಈಗ ಕನಕನ ಕಿಂಡಿಯಾಗಿ ವಿಶ್ವವಿಖ್ಯಾತಿ ಪಡೆದಿದೆ ಎಂದರು. ಪು ಸ ಸದಸ್ಯ ಮುಸ್ತಾಕ ಚಿಕ್ಕೋಡಿ, ಆನಂದ ಬಂಡಿ, ಅರ್ಜುನ ಮೊಪಗಾರ, ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ ಮುಖಂಡರಾದ ಮಲ್ಲಪ್ಪ ಸಿಂಗಾಡಿ, ಭೀಮಶಿ ತಿಮ್ಮಾಪುರ, ಶ್ರೀಶೈಲ ಅವಟಿ, ಮಹಾಲಿಂಗ ಅವಟಿ, ಕರೆಪ್ಪ ಮೇಟಿ, ಗಂಗಾಧರ ಮೇಟಿ, ಅರ್ಜುನ ಮೇಟಿ,  ಚಂದ್ರು ಸಂಶಿ,  ಡಾ. ಆರ್‌. ಎಸ್‌. ಪಾಟೀಲ,  ಪ್ರಭು ಹುಬ್ಬಳ್ಳಿ, ಭೀರ​‍್ಪ ಸಂಶಿ, ಮಹಾಲಿಂಗ ಸನದಿ, ಮಲ್ಲಪ್ಪ ಸಿಂಗಾಡಿ, ಮಹಾಲಿಂಗಪ್ಪ ಬಾಡಗಿ, ಪರಸಪ್ಪ ಕೊಣ್ಣೂರ, ಮಲ್ಲಪ್ಪ ಸೈದಾಪುರ. ಆನಂದ ಬೆಳ್ಳಿಕಟ್ಟಿ, ಪರಸಪ್ಪ ಬಂಡಿ, ಮಾರುತಿ ದಳವಾಯಿ, ಸಂಗಮೇಶ ಹಿಡಕಲ್, ಶ್ರೀಶೈಲ ಕಳ್ಯಾಗೋಳ, ಜೊತೆಪ್ಪ ಕಪರಟ್ಟಿ, ಮಹಾಲಿಂಗ ಮಾಳಿ, ಹಣಮಂತ ಹೂಗಾರ, ದಾನೇಶ ಹೂಗಾರ ಭೀಮಪ್ಪ ಪೂಜೇರಿ ಪರಸಪ್ಪ ಕೊಣ್ಣೂರ, ವಿಠಲ್ ಬನಾಜ, ಪುರಸಭೆ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.  ಬುದ್ನಿ ಪಿ ಡಿ ಸಂಗೊಳ್ಳಿ ರಾಯಣ್ಣ ಸರ್ಕಲನಲ್ಲಿ ಪೂಜೆ ಸಲ್ಲಿಸಲಾಯಿತು.