ಮಹಾಲಿಂಗಪುರ 26: ನಿರ್ಮಲ ಭಕ್ತಿಯಿಂದ ಆ ದೇವರನ್ನು ಒಲಿಸಿಕೊಂಡ ಶ್ರೇಷ್ಠ ಕನಕದಾಸರ ಮಹಿಮೆ ಅಪಾರ ಕನಕದಾಸರನ್ನು ಬರೀ ಕುರುಬ ಸಮುದಾಯಕ್ಕೆ ಸೀಮಿತ ಮಾಡಬಾರದು, ಮಹಾತ್ಮರಿಗೆ ಜಾತಿ ಇಲ್ಲ ಅವರು ಜಾತಿ ವ್ಯವಸ್ಥೆ ಮೀರಿ ಬೆಳೆದು ವಿಶ್ವ ಮಾನವರಾದವರು ಅವರ ಜಯಂತಿಯನ್ನು ವರ್ಷಕೊಮ್ಮೆ ಮಾಡದೇ ಮಹಾತ್ಮರ ಜಯಂತಿಗಳು ನಿತ್ಯ ನೂತನವಾಗಿ ಆಚರಿಸುವಂತಾಗಬೇಕು ಕನಕದಾಸರು ನಿರ್ಮಲ ಭಕ್ತಿಯಿಂದಲೇ ದೇವರನ್ನು ಸಾಕ್ಷಾತಕರಿಸಿದರು. (ಒಲಿಸಿಕೊಂಡರು ) ದೇವ ಮಾನವ ಎಂದು ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು.
ಅವರು ನಗರದ ಕರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕನಕದಾಸ ಸೇವಾ ಸಮಿತಿ ಮಹಾಲಿಂಗಪುರ ವಲಯ ಮತ್ತು ಕನಕದಾಸ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಕನಕದಾಸರ 537 ನೇ ಜಯಂತಿಯನ್ನು ಕನಕದಾಸರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಸಿ ಮಾತನಾಡಿದ ಅವರು ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಉಸಿರಾಡುವ ಗಾಳಿ ಯಾವ ಕುಲ,ಕತ್ತಲೆ ಹೋಗಲಾಡಿಸುವ ಬೆಳಕು ಯಾವ ಕುಲ, ಕುಡಿಯುವ ನೀರು ಯಾವ ಕುಲ, ತಿನ್ನುವ ಅನ್ನ ಯಾವ ಕುಲ ಇವುಗಳಿಗೆ ಹೇಗೆ ಜಾತಿ ಇಲ್ಲವೋ ಹಾಗೆ ಭೂಮಿ ಮೇಲೆ ಹುಟ್ಟಿದ ಮನುಷ್ಯರೆಲ್ಲಾ ಒಂದೇ ಕುಲ ಮನುಜ ಕುಲ ಎಂದು ಸಾರಿದರು ಮನುಜ ಕುಲದಲ್ಲಿ ಹುಟ್ಟಿ ಭಕ್ತಿಯಿಂದಲೇ ಪ್ರತ್ಯಕ್ಷ ದೇವರನ್ನು ಕಂಡವರು ಯಾರಾದರೂ ಇದ್ದರೇ ಅವರೆ ವಿಶ್ವ ಮಾನವ ಭಕ್ತ ಶೇಷ್ಠ ಕನಕದಾಸರು.
ನಂತರ ಮಾತನಾಡಿ ಜಿ ಪ ಬಾಗಲಕೋಟ ಮಾಜಿ ಅಧ್ಯಕ್ಷರಾದ ಮಹಾಂತೇಶ ಹಿಟ್ಟಿನಮಠ ಅವರ ತಂದೆಯ ಮರಣ ನಂತರ ತಿಮ್ಮಪ್ಪ ಬಾಡ ಜಿಲ್ಲೆಗೆ ದೊರೆಯಾದ. ಒಂದು ದಿನ ಅವರು ಭೂಮಿಯನ್ನು ಅಗೆಯುತ್ತಿದ್ದಾಗ ಅವರಿಗೆ ಚಿನ್ನ ತುಂಬಿದ ಏಳು ಕೋಪರಿಗೆಗಳು (ದೊಡ್ಡ ಹಂಡೆ ) ಸಿಕ್ಕಿದವು.ಅವರು ಸಿಕ್ಕ ಎಲ್ಲ ಚಿನ್ನವನ್ನು ದಾನ ಧರ್ಮ ಕಾರ್ಯಗಳಾದ ಕೆರೆ ಕಟ್ಟೆ ನಿರ್ಮಾಣ, ದೇವಸ್ಥಾನ, ಧರ್ಮ ಛತ್ರಗಳ ನಿರ್ಮಾಣ ಮಾಡಿದರು ಇದನ್ನು ನೋಡಿದ ಜನರು ಅವರನ್ನು ಕನಕ ಕನಕ ಎಂದು ಕರೆಯತೋಡಗಿದರು ಮುಂದೆ ಅವರನ್ನೇ ಕನಕದಾಸ (ಕನಕ ಎಂದರೆ ಚಿನ್ನ) ಎಂದು ಕರೆಯತೋಡಗಿದರು.ಚಿನ್ನದ ಆಸೆ ತೊರೆದ ನಿಜವಾದ ಕನಕದಾಸ.ಆದರು ಎಂದರು.
ದಿವ್ಯ ಸಾನಿಧ್ಯ ವಹಿಸಿದ ಶಿರೂರಿನ ಕನಕ ಬ್ರಹ್ಮ ವಿದ್ಯಾಶ್ರಮದ ಪ ಪೂ ಚಿನ್ನಮಯಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಭವ್ಯ ಇತಿಹಾಸವಿದೆ. ಕನಕದಾಸರು ಮತ್ತು ಪುರಂಧರದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು ಕೀಳು ಎಂಬ ಮತ್ತು ಜಾತಿ ಮತಗಳ ಸಿದ್ದಾಂತ ಪಕ್ಕಕ್ಕೆ ಸರಿದವು. ದೈವಸ್ತುತಿಯೇ ಪ್ರಮುಖವೇನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು. ಕನಕದಾಸರು ಆದಿಗುರು ಶ್ರೀ ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿದ ಅದೈತ ತತ್ವಸಾರವನ್ನು ಅನುಸರಿಸಿ ನಾನು ನನ್ನದೆಂಬ ಮೋಹ, ಪರಬ್ರಹ್ಮ ಬದುಕು, ಜೀವನಸಾರವನ್ನು ಬೋಧಿಸಿ ಮನುಜಕುಲ ಒಂದೆಂಬ ತತ್ವ ಸಾರಿದರು.
ಕನಕದಾಸರು ಸಕಲ ಮನುಕುಲ ಉದ್ದಾರಕರಾಗಿದ್ದರು. ಸಮಾನತೆ ಸಾರಿದ ಸಂತ ಜಗತ್ತಿನ ಮಹಾನ ಚೇತನ, ವಿಶ್ವ ಗುರು ದಾಸ ಶ್ರೇಷ್ಠ ದಾಸ ಪರಂಪರೆಯಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಅವರು ರಚಿಸಿದ ಕೃತಿಗಳು ಇಂಗ್ಲೀಷ ಸೇರಿ ಹದಿನಾರು ಭಾಷೆಗಳಿಗೆ ಅನುವಾದವಾಗಿವೆ ಮನುಕುಲದ ಉದ್ದಾರವೇ ಅವರ ಧ್ಯೆಯವಾಗಿತ್ತು ಎಂದು ಹೇಳಿದರು.
ನಂತರ ಮಾತನಾಡಿದ ಜುಂಜರವಾಡದ ಬಸವರಾಜೇಂದ್ರ ಶರಣರು ಕನಕದಾಸರಿಗೆ ಕಲಿಯುಗದ ಶ್ರೀಮಂತ ಭಕ್ತರ ಕಾಮದೇನು ಕಲಿಯುಗದ ಭಗವಂತ ತಿರುಪತಿ ತಿಮ್ಮಪ್ಪನು ಕೂಡಾ ಸಾಕ್ಷಾತ್ ದರ್ಶನ ಕೊಟ್ಟಿದ್ದರು. ಉಡುಪಿಯ, ಶ್ರೀ ಕೃಷ್ಣ ಕಿಂಡಿ ಕಡೆ ಮುಖ ತಿರುಗಿಸಿ ದರ್ಶನ ಕೊಟ್ಟಿದು ಇತಿಹಾಸ,ಅದು ಇಂದು ಕನಕನ ಕಿಂಡಿ ಎಂದೇ ಹೆಸರು ಪಡೆದಿದ್ದು ಇತಿಹಾಸ,ಯಮನ ಕೋಣವನ್ನೇ ದರೇಗಿಸಿದ ಮಹಾ ಭಕ್ತ ಕನಕದಾಸರು ನೂರಾರು ವರ್ಷ ಬದುಕಿದ ಅವರು ಒಟ್ಟು 316 ಕೀರ್ತನೆಗಳನ್ನು ರಚಿಸಿದ್ದಾರೆ, ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನುಕುಲದ ಶ್ರೇಷ್ಠ ಸಂದೇಶಗಳಿವೆ ಎಂದರು.
ನಂತರ ಮಾತನಾಡಿದ ಹಲಿಂಗಳಿ ಪೂಜ್ಯ ಮಹಾವೀರ ಪ್ರಭುಗಳು ಮಾತನಾಡಿ ವರಕವಿಗಳು ಕಿರ್ತನಕಾರರು ಎನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು, ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ನಿರ್ಮೋಹಿಯಾಗಿ ಇಹದಲ್ಲಿ ಇದ್ದು, ಪರವನ್ನು ಗೆದ್ದ ಮಹಾನ ಸಂತ್ ಸರ್ವಕಾಲಿಕ ಸತ್ಯ ಸಾರಿ ವಿಶ್ವದ ಮಹಾತ್ಮ ವಿಶ್ವ ಸಂತ್ ಕನಕದಾಸರ ಕೊಡುಗೆ ಅಪಾರ ಅವರ ನಾಮ ಬಲವೇ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಪುರಸಭೆ ಅಧ್ಯಕ್ಷರಾದ ಯಲ್ಲಣ್ಣಗೌಡ ಪಾಟೀಲ,ಪಿ ಎಸ್ ಅಯ್ ಕಿರಣ ಸತ್ತಿಗೇರಿ,ಮಹಾಲಿಂಗಪ್ಪ ಕಳ್ಯಾಗೋಳ, ಸತ್ಯಪ್ಪ ಹುದ್ದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಪುರಸಭೆ ಸದಸ್ಯರಾದ ಚನ್ನಬಸು ಯರಗಟ್ಟಿ, ಶ್ರೀಮತಿ ಶೈಲಾ ಭಾವಿಕಟ್ಟಿ,ಮುಖಂಡರಾದ ಮುಸ್ತಾಕ ಚಿಕ್ಕೋಡಿ, ಶಂಕರಗೌಡ ಪಾಟೀಲ, ಪ್ರಕಾಶ ಮಮದಾಪುರ,ಶಿವಲಿಂಗ ಟಿರ್ಕಿ, ಮಹಾಲಿಂಗಪ್ಪ ಲಾತುರ ,ಮಹಾಲಿಂಗಪ್ಪ ಜಕ್ಕಣ್ಣವರ,ರಂಗಣ್ಣಗೌಡ ಪಾಟೀಲ, ಸಿದ್ದರಾಮ ಯರಗಟ್ಟಿ, ಮಲ್ಲಪ್ಪ ಸಿಂಗಾಡಿ,ಮಹಾಲಿಂಗ ಸನದಿ,ಬಂದೇನಮಾಜ ಪಕಾಲೀ, ಬಸವರಾಜ ಬಂಡಿವಡ್ಡರ,ಮಹೇಶ ಇಟಕನ್ನವರ, ಚನ್ನಪ್ಪ ಪಟ್ಟಣಶೆಟ್ಟಿ,ಗಂಗಾಧರ ಮೇಟಿ, ಚಂದ್ರ್ಪ ದೋಣಿ , ಶ್ರೀಶೈಲ ಕಾರಜೋಳ,ಜೊತೆಪ್ಪ ಕಪರಟ್ಟಿ ಪರಸಪ್ಪ ಬಂಡಿ, ಆನಂದ ಸನದಿ,ಶ್ರೀಶೈಲ ಕಳ್ಯಾಗೋಳ,ಶ್ರೀಶೈಲ ಅವಟಿ,ಕರೆಪ್ಪ ಮೇಟಿ, ಮಲ್ಲಪ್ಪ ಸೈದಾಪುರ,ಚಂದ್ರು ಸಂಶಿ ,ಯಲ್ಲಪ್ಪ ಪಟ್ಟಣಕೋಡಿ ಪ್ರಭು ಹುಬ್ಬಳ್ಳಿ, , ಮಹಾಲಿಂಗ ಮಾಳಿ, ಸಿದ್ದರಾಮ ಯರಗಟ್ಟಿ, ಸದಾಶಿವ ಕಂಬಳಿ ಶ್ರೀಕಾಂತ ಗುಳಣ್ಣವರ ,ವಿಠಲ ಸಂಶಿ, ಕರೆಪ್ಪ ಹುಣಶೀಕಟ್ಟಿರಾಜೇಂದ್ರ ಮಿರ್ಜಿ , ಪ್ರಭು ಹುಣಶೀಕಟ್ಟಿ ಮಲ್ಲಪ್ಪ ಭಾವಿಕಟ್ಟಿ, ಸಂಜಯ ಜಮಖಂಡಿ, ಶಿವಾನಂದ ಮೇಟಿ, ರಮೇಶ ಮೇಟಿ ಚೇತನ ಹಾದಿಮನಿ,ಸೇರಿದಂತೆ ಹಲವರು ಇದ್ದರು. ಕಾರ್ಯಕ್ರಮವನ್ನು ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು.