ಬದ್ಧತೆಯಿಂದ ಬದುಕಲು ಕನಕರ ಕೀರ್ತನೆಗಳು ಮಾರ್ಗದರ್ಶಿ: ಯಾಕೊಳ್ಳಿ

Kanakadasa's Psalms Guide to Living Committedly: Yakkolli

ಧಾರವಾಡ 10: ಆತ್ಮ ಸಾಕ್ಷಾತ್ಕಾರ ಹಾಗೂ ಆತ್ಮಾಭಿಮಾನ ಬೆಳೆಸಿಕೊಳ್ಳಲು ಕನಕದಾಸರ ಸಾಹಿತ್ಯವನ್ನು  ಪ್ರತಿಯೊಬ್ಬರೂ ಓದುವ ಅಗತ್ಯವಿದೆ. ಏಕೆಂದರೆ ಸಮಾಜದಲ್ಲಿ ಬದ್ಧತೆಯಿಂದ ಬದುಕಲು ಕನಕರ ಕೀರ್ತನೆಗಳು ಮಾರ್ಗದರ್ಶಿಯಾಗಿವೆ. ಎಂದು ಉಪನ್ಯಾಸಕರಾದ ವಾಯ್‌.ಎಂ.ಯಾಕೊಳ್ಳಿ ಅಭಿಪ್ರಾಯಪಟ್ಟರು.                  

ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಬೆಂಗಳೂರು, ಜಗದ್ಗುರು ರೇವಣಸಿದ್ದೇಶ್ವರ ಮಹಾಮಠ ಮನಸೂರು ಹಾಗೂ ಕರ್ನಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘ ಧಾರವಾಡ ಇವುಗಳ  ಸಂಯುಕ್ತ ಆಶ್ರಯದಲ್ಲಿ ಮನ್ಸೂರಿನ ರೇವಣಸಿದ್ದೇಶ್ವರ ಮಹಾಮಠದಲ್ಲಿ ಹಮ್ಮಿಕೊಳ್ಳಲಾದ ಕನಕದಾಸರ ಸಾಹಿತ್ಯದ ಐವತ್ತನೆಯ ಉಪನ್ಯಾಸದ ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ "ಕನಕದಾಸ ಸಾಹಿತ್ಯದ ಅಗತ್ಯತೆ" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.                       

ಕನಕರ ತತ್ವ ಶ್ರೀಮಂತಿಕೆ, ದೃಢ ಭಕ್ತಿ, ಸಾಮಾಜಿಕ ಸಾಮರಸ್ಯ, ಬಂಡಾಯ ದೃಷ್ಟಿಗಳು ಅವರನ್ನು ಐತಿಹಾಸಿಕ ನಾಯಕನನ್ನಾಗಿ ರೂಪಿಸಿದವು.ಅವರ ಸಾಹಿತ್ಯ ಮತ್ತು ಭಾಷಾ ಪಾಂಡಿತ್ಯಗಳು ಅಲಂಕಾರಿಕ ಕಾವ್ಯಗಳಾಗಿ  ಮೂಡಿಬಂದಿವೆ. ಕನಕರ ಕೀರ್ತನೆಗಳ ಮಹತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇಂದಿನ ಸಮಾಜಕ್ಕಿದೆ. ಎಂದು ಅವರು ತಿಳಿಸಿದರು.        

ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ಪರಮ ಪೂಜ್ಯ  ಶ್ರೀ ಸ್ವಾಮಿ ಯೋಗೇಶ್ವರಾನಂದ ಶ್ರೀಗಳುಗಳು ವಹಿಸಿದರೆ , ಪಾವನ ಸಾನಿಧ್ಯವನ್ನು ಪರಮ ಪೂಜ್ಯ ಡಾ. ಬಸವರಾಜ್ ದೇವರು ಮಹಾಸ್ವಾಮಿಗಳು ಜಗದ್ಗುರು ರೇವಣಸಿದ್ದೇಶ್ವರ ಮಹಾ ಮಠ ಮನಸೂರ, ಧಾರವಾಡ, ಇವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕುರುಬ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ನಿಂಗಪ್ಪ ಸವಣೂರ ವಹಿಸಿ ಮಾತನಾಡಿದರು. ಉದ್ಘಾಟಕರಾಗಿ ಬಸವರಾಜ ಗುರಿಕಾರ ರಾಷ್ಟ್ರೀಯ ಅಧ್ಯಕ್ಷರು,ಎ.ಐ.ಪಿ.ಟಿ.ಎಫ್‌.  ನವ ದೆಹಲಿ , ಆಗಮಿಸಿ  ಉದ್ಘಾಟನಾ ನುಡಿಗಳನ್ನು ಹೇಳಿದರು. 

ಇದೇ ಸಂದರ್ಭದಲ್ಲಿ ಸರಸ್ವತಿ. ಕೆ. ರಚಿಸಿದ ಶ್ರೀ ಕನಕದಾಸರು ಎಂಬ ಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ ಬಿಡುಗಡೆಗೊಳಿಸಿ, ಮಾತನಾಡಿದರು. ವಿಶೇಷ ಆವ್ಹಾನಿತರಾಗಿ ಮಂಜುನಾಥ ಮಕ್ಕಳಗೇರಿ , ಮಂಜುನಾಥ ಹೊನ್ನಣ್ಣವರ, ರಮೇಶ ಜೋಗಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮವು ಪ್ರಾರ್ಥನೆಯಿಂದ ಆರಂಭಿಸಿ, ಶಿವು .ಎ.ಖನ್ನೂರ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕ ಸಾಹಿತಿಯಾದ ಬಸವರಾಜ  ಪಾಟೀಲ ನೆರವೇರಿಸಿದರು. ರಮೇಶ. ತಿಮ್ಮಾಪೂರ ವಂದಿಸಿದರು.  ಚಂದ್ರು ಮುತ್ತಗಿ ಹಾಗೂ ಪಿ. ಎಚ್‌. ಹಳ್ಯಾಳ  ಅವರು ಸಾಧಕರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. 

ಇದೇ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ರವಿ ಮಾಳಿಗೇರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಂಯೋಜಕರಾದ  ಡಾ. ಹನುಮಗೌಡ,ಸಿ.ರಾಜ್ಯ ಹಾಲುಮತ ಸಮಾಜದ ಅಧ್ಯಕ್ಷರಾದ ರುದ್ರಣ್ಣ  ಗುಳಗುಳಿ, ಉಪಸ್ಥಿತರಿದ್ದರು.  

ಮಧ್ಯಾಹ್ನದ ನಂತರ ಕನಕ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ಶಿವಲೀಲಾ ಕಳಸಣ್ಣವರ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಪ್ರಕಾಶ್ ಭೂತಾಳೆ ಸಹಾಯ  ಯೋಜನಾ ಅಧಿಕಾರಿ ಡಿ ಡಿ ಟಿ ಐ ಕಚೇರಿ ಧಾರವಾಡ  ಇವರು ಕವಿಗೋಷ್ಠಿಯ ಕುರಿತು  ಮಾತನಾಡಿದರು. ವೇದಿಕೆ ಮೇಲೆ ದೇವರಾಜ್ ಬಾಗೇವಾಡಿ, ಕುಮಾರ್ ಪಡೆಪ್ಪನವರ, ಮತ್ತಿತರರು ಉಪಸ್ಥಿತರಿದ್ದರು. ಕವಿಗೋಷ್ಠಿ ಕಾರ್ಯಕ್ರಮವು ಕುಮಾರಿ ಕವಿತಾ ಬೇವನೂರ್ ಅವರು ವಂದಿಸಿದರು.