ಲೋಕದರ್ಶನ ವರದಿ
ಗದಗ 24: ಸ್ಥಳೀಯ ಗಂಗಾಪೂರ ಪೇಟೆಯಲ್ಲಿ ಭಕ್ತ ಕನಕದಾಸರ 532 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಕುಂಭಮೇಳಕ್ಕೆ ಸರ್ವ ಧಮರ್ಿಯರು ಡೊಳ್ಳು ಭಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಫಕ್ಕಿರಪ್ಪ ಹೆಬಸೂರ, ಹಾಲುಮ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬೆಳದಡಿ, ಮುಸ್ಲಿಂ ಸಮುದಾಯ ಮುಖಂಡರಾದ ಜೀವನಸಾಬ ನಮಾಜಿ, ಅಬ್ದುಲ್ ಮುನಾಪ್ ಮುಲ್ಲಾ, ಸುಲೇಮಾನ ಧಾರವಾಡ, ಎಸ್.ಎಸ್.ಕೆ ಸಮಾಜದ ಮುಖಂಡರಾದ ಗಣಪತಸಾ ಹಬೀಬ, ಸವಿತಾ ಸಮಾಜದ ರಾಮಣ್ಣ ಕೃಷ್ಣ ಹಡಪದ, ಕುಂಬಾರ ಸಮಾಜದ ಮುಖಂಡರಾದ ಉಳವಪ್ಪ ಕುಂಬಾರ ಸೇರಿದಂತೆ ಮುಂತಾದವರು ಡೊಳ್ಳು ಬಾರಿಸುವದರೊಂದಿಗೆ ಕುಂಭಮೇಳಕ್ಕೆ ಚಾಲನೆ ನೀಡಿದರು.
ನಂತರ 101 ಕುಂಭಗಳನ್ನು ಹೊತ್ತ ಮಹಿಳೆಯರು ಗಂಗಾಪೂರಪೇಟೆ, ಚೌಡಿಕೂಟ, ಹುಯಿಲಗೋಳ ನಾರಾಯಣರಾಯ ವೃತ್ತ, ಮಹಾತ್ಮಾಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣನ ವೃತ್ತ, ಕೆ.ಸಿ.ರಾಣಿ ರೋಡ ಮಾರ್ಗವಾಗಿ ಹಾತಲಗೇರಿ ನಾಕಾದಲ್ಲಿರುವ ಕನಕದಾಸರ ವೃತ್ತಕ್ಕೆ ತಲುಪಿತು.
ಇದಕ್ಕೂ ಮುನ್ನ ಹುಯಿಲಗೋಳ ನಾರಾಯಣರಾಯರು, ಮಹಾತ್ಮಾಗಾಂಧಿ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಗೂಂಡ ಸ್ವಾಮೀಜಿ, ನಾಗರಾಜ ಮೆಣಸಗಿ, ಪ್ರಲ್ಹಾದ ಹೊಸಳ್ಳಿ,ಸೋಮನಗೌಡ್ರ ಪಾಟೀಲ, ಹನುಮಂತಪ್ಪ ಮುಂಡರಗಿ, ರುದ್ರಪ್ಪ ಬನ್ನಿಮರದ, ಬಸಪ್ಪ ಮುದಕಟ್ಟಿ, ಬಸಪ್ಪ ಶಿರೂರ, ಮಲ್ಲೇಶಪ್ಪ ಕೊಣ್ಣೂರ, ಬಸವರಾಜ ಅಣ್ಣಿಗೇರಿ, ಹೇಮಂತ ಗಿಡ್ಡಹನುಮಣ್ಣವರ, ಸತೀಶ ಗಿಡ್ಡಹನುಮಣ್ಣವರ, ಆನಂದ ಹಂಡಿ, ರವಿ ಹುಡೇದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.