ಕಣಗಿನಹಾಳ ಗ್ರಾಮ ಸಹಕಾರ ಕ್ಷೇತ್ರದ ಹೆಬ್ಬಾಗಿಲು: ಪ್ರೊ. ಹರ್ಷ ನಿಲೂಗಲ್

ಕಣಗಿನಹಾಳ ಗ್ರಾಮ ಸಹಕಾರ ಕ್ಷೇತ್ರದ ಹೆಬ್ಬಾಗಿಲು: ಪ್ರೊ. ಹರ್ಷ ನಿಲೂಗಲ್ Kanaginahala is the gateway to the village cooperative sector: Prof. Harsha Nilugal

ಲೋಕದರ್ಶನ ವರದಿ 

ಗದಗ 29: ಇಡೀ ಏಷ್ಯಾಖಂಡದಲ್ಲಿ ಮೊದಲಬಾರಿಗೆ ಸಹಕಾರ ಸಂಘ ಸ್ಥಾಪಿಸಿದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಿದ್ದನಗೌಡ ಪಾಟೀಲ ಅವರು ಕರ್ನಾಟಕದ ಸಹಕಾರಿ ಪಿತಾಮಹರಾಗಿದ್ದು, ಕಣಗಿನಹಾಳ ಗ್ರಾಮ ಸಹಕಾರ ಕ್ಷೇತ್ರದ ಹೆಬ್ಬಾಗಿಲು ಎಂದು ಪ್ರೊ. ಹರ್ಷ ನಿಲೂಗಲ್ ತಿಳಿಸಿದರು.  

ನಗರದ ಕೆ.ಎಲ್‌.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಏಷ್ಯಾದ ಮೊಟ್ಟಮೊದಲ ಸಹಕಾರಿ ಸಂಘವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಣಗಿನಹಾಳಕ್ಕೆ ಅಧ್ಯಯನ ಬೇಟಿಯನ್ನು ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.  

ಮುಂದುವರೆದು ಮಾತನಾಡಿದ ಅವರು ‘ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ’ ಎಂಬ ಧ್ಯೇಯದ ಮೂಲಕ  ಉದಯಿಸಿರುವಂತಹ  ಸಹಕಾರಿ ಸಂಘವು ಇಂದು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ. ಇಂತಹ ಪುಟ್ಟ ಗ್ರಾಮದಲ್ಲಿ ಬಿತ್ತಿದ ಸಹಕಾರಿ ತತ್ವದ ಬೀಜ ಇಂದು ಹೆಮ್ಮರವಾಗಿ ದೇಶಾದ್ಯಂತ ಕೋಟ್ಯಂತರ ಜನರ ಬದುಕಿಗೆ ಸಮದ್ಧಿಯ ಫಲ ನೀಡುತ್ತಿದೆ. ಅಂದು ಕೇವಲ 12 ಸದಸ್ಯರಿಂದ ಪ್ರಾರಂಭವಾದ ಒಂದು ಸಹಕಾರಿ ಸಂಘದ ಪ್ರೇರಣೆಯಿಂದಾಗಿ ದೇಶಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳ ಸ್ಥಾಪನೆಗೊಂಡಿದೆ. ಪ್ರಸ್ತುತ 21 ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವುದು ಸಹಕಾರ ಕ್ಷೇತ್ರದ ವೈಶಾಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.  

ಈ ಸಂದರ್ಭದಲ್ಲಿ ಪ್ರೊ. ಶ್ವೇತಾ ರಾಚಯ್ಯನವರ, ಪ್ರೊ. ಗೌರ ಯಳಮಲಿ ಉಪಸ್ಥಿತರಿದ್ದರು.