ಲೋಕದರ್ಶನ ವರದಿ
ಕಂಪ್ಲಿ 30: ಇಲ್ಲಿನ ಐತಿಹಾಸಿಕ ಸೋಮಪ್ಪ ಕೆರೆಯನ್ನು 8.08ಕೋಟಿ ರೂ.ಗಳ ಅನುದಾನದಲ್ಲಿ ಕೆರೆಅಭಿವೃದ್ದಿ ಕಾಮಗಾರಿಗೆ ಬುಧುವಾರ ಭೂಮಿ ಪೂಜೆಯನ್ನು ಶಾಸಕ ಜೆ.ಎನ್.ಗಣೇಶ್ ನೆರವೇರಿಸಿ. ನಂತರ ಮಾತನಾಡಿ, 72ಕೋಟಿ ರೂ.ಅನುದಾನದಲ್ಲಿ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲೆ ಭೂಮಿ ಪೂಜೆ 5ಕೋಟಿ ರೂ.ಗಳ ವೆಚ್ಚದಲ್ಲಿ ಕಂಪ್ಲಿಯಲ್ಲಿ ಮಿನಿ ವಿಧಾನಸೌಧ, ಕುರುಗೋಡಿನಲ್ಲಿ 5ಕೋಟಿ ರೂ.ಗಳ ವೆಚ್ಚದಲ್ಲಿ 100ಹಾಸಿಗೆ ಆಸ್ಪತ್ರೆ ಕಟ್ಟಡ. ಕ್ಷೇತ್ರದಲ್ಲಿನ ಎಲ್ಲ ರಸ್ತೆಗಳ ಅಭಿವೃದ್ದಿಗೆ ಕ್ಷೇತ್ರದ ಅಭಿವೃದ್ದಿಮಾಡಬೇಕು. ಎಂದರು
ಜಿಲ್ಲಾಧಿಕಾರಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುತ್ತಿದ್ದು, ಯುವಜನತೆಯ ಸ್ವ ಉದ್ಯೋಗಕ್ಕಾಗಿ ಜೀನ್ಸ್ ಉದ್ಯಮ. ಮಹಿಳಾ ಹೊಲಿಗೆ ತರಬೇತಿ ಕೇಂದ್ರವನ್ನು ಇನ್ನಷ್ಟು ಮೇಲ್ದಜರ್ೆಗೇರಿಸಿ 2ರಿಂದ3 ಸಾವಿರ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಉದ್ಯೋಗ ಕೊಡಿಸುವಲ್ಲಿ, ಜಿಲ್ಲಾಧಿಕಾರಿ ಸಹಕರಿಸಬೇಕು.ಎಂದು ಹೇಳಿದರು ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್ ವಿ.ಮನೋಹರ ಮಾತನಾಡಿ, ನಾನು ಡಿಸಿಯಾಗಿ ಆದ ಮೇಲೆ ಕಂಪ್ಲಿಗೆ ಮೊದಲ ಭೇಟಿ ಕೆರೆ ಅಭಿವೃದ್ದಿಗಾಗಿ ಶಾಸಕರು ಮತ್ತು ಸಾರ್ವಜನಿಕರ ಮನವಿ ಹೆಚ್ಚಿದ್ದು. ಕುಡಿವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೂ 55ಲಕ್ಷ ರೂ.ಗಳನ್ನು ನೀಡಿದವೇ ಎಂದರು.
ಪುರಸಭಾಧ್ಯಕ್ಷ ಎಂ.ಸುಧೀರ್ ಅಧ್ಯಕ್ಷತೆವಹಿಸಿ ಮಾತನಾಡಿ, ಕಂಪ್ಲಿ ಸೋಮಪ್ಪ ಕೆರೆಯ ಅಭಿವೃದ್ದಿಗೆ 8.08ಕೋಟಿರೂ. ಅನುದಾನ ಬಿಡುಗಡೆಗೊಂಡಿದ್ದು, ಇನ್ನೂ 5ಕೋಟಿ ರೂ. ಅಗತ್ಯವಿದೆ. ಜಿಲ್ಲಾಡಳಿತ ಇನ್ನೂ 5ಕೋಟಿ ರೂ.ಗಳನ್ನು ಒದಗಿಸುವಲ್ಲಿ ಮುತುವಜರ್ಿತೋರಬೇಕು ಎಂದು ಕೋರಿದರು. ಕಂಪ್ಲಿ ಜನತೆಯ ಬಹು ವರ್ಷಗಳ ಆಶಯ ಇದೀಗ ಈಡೇರುತ್ತಿರುವುದು ಸಂತಸ ತಂದಿದೆ ಎಂದರು.
ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿಗಳು, ಬಳ್ಳಾರಿಯ ಕಲ್ಯಾಣಮಹಾಸ್ವಾಮಿಗಳು, ಕಂಪ್ಲಿಯ ಮುಸ್ಲಿಂ ಧರ್ಮಗುರುಗಳಾದ ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ, ಸೈಯ್ಯದ್ ಷಾಹ್ ಮೊಹಿದ್ದೀನ್ ಖಾದ್ರಿ, ಸೈಯ್ಯದ್ ಷಾಹ್ ಮೈಮೂದ್ ಖಾದ್ರಿ ದಿವ್ಯಸಾನಿಧ್ಯ ವಹಿಸಿದ್ದರು
ಉದ್ಘಾಟನಾ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಬಾವಿಕಟ್ಟೆ ಮಂಜುಳಾ ಮತ್ತು ಸರ್ವ ಸದಸ್ಯರು, ತಹಶೀಲ್ದಾರ ಶ್ರೀಶೈಲ ವೈ.ತಳವಾರ, ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಜೆಇ ಗೋಪಾಲ್, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಕೆ.ವೆಂಕೋಬಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಜಿ.ರಾಜಾರಾವ್, ಎಂ.ಸಿ.ಮಾಯಪ್ಪ, ಅಶ್ವತ್ಥನಾರಾಯಣ, ಇಟ್ಗಿ ಬಸವರಾಜ, ಜೆ.ಜಿ.ಬಸವರಾಜ, ಅರವಿ ಬಸವನಗೌಡ, ಅಯ್ಯೋದಿ ವೆಂಕಟೇಶ್, ಪಿ.ವೆಂಕನಗೌಡ, ಅಬ್ದುಲ್ ವಾಹೀದ್ ಸೇರಿ ಜನ ಪ್ರತಿನಿಧಿಗಳು, ಸರ್ವ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ ಸ್ವಾಗತಿಸಿದರು, ಲೆಕ್ಕಿಗ ರಮೇಶ್ ಬೆಳಂಕರ್ ನಿರೂಪಿಸಿದರು.
ಪುರಸಭೆಯಿಂದ ಸೋಮಪ್ಪ ದೇವಸ್ಥಾನತನಕ ಬೃಹತ್ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಕಳಸಧಾರತಿ, ಪೂರ್ಣಕುಂಭ, ಡೊಳ್ಳುಕುಣಿತ, ತಾಷಾರಾಂಡೋಲ್, ಮಂಗಳವಾಧ್ಯಗಳು ಸಾರ್ವಜನಿಕರ ಗಮನ ಸೆಳೆದರು.