ಕಂಪ್ಲಿ: ಜಿಲ್ಲಾಮಟ್ಟದ ಮಹಾಧಿವೇಶನ ಸಂಘ ಉದ್ಘಾಟನಾ ಸಮಾರಂಭ

ಲೋಕದರ್ಶನ ವರದಿ

ಕಂಪ್ಲಿ 16; ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ  ಶಾಮಿಯಾನ ಡೆಕೋರೇಷನ್ರವರಿಗೆ ಗೋದಾಮಿ ನೀಡುವುದರ ಜೊತೆಗೆ ಪ್ರತೈಕ  ಶಾಮಿಯಾ ಸಂಘ ನಿಗಮ ಮಂಡಳಿ ನೀಡಬೇಕೆಂದು ಹುಬ್ಬಳ್ಳಿಯ ಶಾಮಿಯಾನ ಡೆಕೊರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಶಿವಕುಮಾರ್ ಹಿರೇಮಠ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು 

ಗುರುಮಠದಲ್ಲಿ ಬಳ್ಳಾರಿ ಜಿಲ್ಲಾ ಮತ್ತು ಕಂಪ್ಲಿ ತಾಲ್ಲೂಕಿನ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘಗಳ ಸಂಯುಕ್ತಾಶ್ರಯದಲ್ಲಿ, ಮೊದಲನೇ ಜಿಲ್ಲಾಮಟ್ಟದ ಮಹಾಧಿವೇಶನ ಮತ್ತು ಸಂಘದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಾಮಿಯಾನ ಡೆಕೋರೇಟರ್ಸಂಘದಲ್ಲಿ ಎಲ್ಲಾ ಸಮುದಾಯಗಳಿವೆ ಅವರಿಗೆ ಸರಕಾರದಿಂದ ಸಾಲ ಸೌಲಭ್ಯ ನೀಡಿ ಜಿಎಸ್ಟಿಯಲ್ಲಿ  ವಿನಾಯಿತಿ ನೀಡಿ. ಶಾಮಿಯಾನ ಡೆಕೋರೇಟರ್ ಸಂಘಟನೆ ಬಲಪಡಿಸಿ ರಾಜ್ಯಾದ್ಯಂತ  ಹೋರಾಟ ಮಾಡಿದಾಗ ಮಾತ್ರ  ಎಲ್ಲಾ ಬೇಡಿಕೆಗಳ ಈಡೇರಿಸಲು ಸಾಧ್ಯ ಮುಂದಿನ ದಿನಗಳಲ್ಲಿ   ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು

     ಪುರಸಭೆ ಅಧ್ಯಕ್ಷ ಎಂ.ಸುಧೀರ್ ಮಾತನಾಡಿ, ಶಾಸಕ ಜೆ.ಎನ್.ಗಣೇಶ್  ಶಾಮಿಯಾನ ಸಂಘದವರ ಚಟುವಟಿಕಗೆ ಸಮುದಾಯ ಭವನ ನಿಮರ್ಿಸಲು ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು. ಸಂಸ್ಥಾಪಕ ಅಧ್ಯಕ್ಷ ಮೆಹಬೂಬ್ಮುಲ್ಲಾ ಸಿದ್ದಾಪುರ ಪ್ರಾಸ್ತಾವಿಕ ಮಾತನಾಡಿದರು ಕಲ್ಮಠದ ಅಭಿನವ ಪ್ರಭು ಸ್ವಾಮಿಗಳು, ಸೈಯ್ಯದ್ ಷಾಹ್ ಮೆಹಮೂದ್ ಖಾದ್ರಿ ಸಜ್ಜಾದ ನಷೀನ್ ಇವರು ದಿವ್ಯ ಸಾನ್ನಿಧ್ಯವಹಿಸಿದ್ದರು. ಗೊಗ್ಗ ಚನ್ನಬಸವರಾಜ, ಮುಕ್ಕುಂದಿ ಬಸವರಾಜ, ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ಕೃಷ್ಣ ಎಸ್.ಪೋಳ್, ಇಟಗಿ ಬಸವರಾಜಗೌಡ, ಪಿ.ಬ್ರಹ್ಮಯ್ಯ, ಸಿ.ಆರ್.ಹನುಮಂತ, ಎಸ್.ಸುರೇಶ್, ಡಿ.ವಿ.ಸತ್ಯನಾರಾಯಣ, ಬಿ.ನಾರಾಯಣಪ್ಪ, ಶಾಮಿಯಾನ ಸಂಘದ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್, ಉಪಾಧ್ಯಕ್ಷ ಎಚ್.ನಾಗರಾಜ, ಕಂಪ್ಲಿ ತಾ.ಗೌರವಾಧ್ಯಕ್ಷ ಡಿ.ಈರಣ್ಣ, ಡಿ.ವಿರುಪಾಕ್ಷಿ, ಆರ್.ರಾಘವೇಂದ್ರ, ಎಂ.ಮಲ್ಲಿಕಾರ್ಜುನ, ಸೇರಿ ರಾಜ್ಯದ ನಾನಾ ಕಡೆಗಳಿಂದ ಶಾಮಿಯಾನ, ಡೆಕೊರೇಟರ್, ಧ್ವನಿ ಮತ್ತು ಬೆಳಕಿನ ಕಾಮರ್ಿಕರು, ಮಾಲಕರ ಕುಟುಂಬದವರು ಪಾಲ್ಗೊಂಡಿದ್ದರು. 

ಅಂಬೇಡ್ಕರ್ ವೃತ್ತದಿಂದ ಭುವನವೇಶ್ವರಿ ಭಾವಚಿತ್ರ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಮಂಗಳವಾಧ್ಯ, ತಾಷರಾಂಡೋಲ್ ಸೇರಿ ಜನಪದ ಕಲಾಪ್ರಕಾರಗಳು ಪಾಲ್ಗೊಂಡಿದ್ದವು. ವೇದಿಕೆಯಲ್ಲಿ ಭರತ ನಾಟ್ಯ ಕಾರ್ಯಕ್ರಮಗಳು ಜರುಗಿದವು.