ಕಂಪ್ಲಿ: ಯಲ್ಲಮ್ಮ ಕ್ಯಾಂಪ್ ನಲ್ಲಿ ಬಸ್ ನಿಲುಗಡೆಗೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಕಂಪ್ಲಿ 21: ಕಂಪ್ಲಿಯಿಂದ ಹೋಸಪೇಟೆ ಹೋಗುವ ಕೆ.ಎಸ್.ಆರ್.ಟಿ ಸಿ ಬಸ್ ನಂ.10 ಮುದ್ದಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಯಲ್ಲಮ್ಮ ಕ್ಯಾಂಪ್ ನಲ್ಲಿ ಕೆ.ಎಸ್.ಆರ್.ಟಿ ಸಿ ಬಸ್ ನಿಲುಸಬೇಕೆಂದು ಒತ್ತಾಯಿಸಿ ಯಲ್ಲಮ್ಮ ಕ್ಯಾಂಪಿನ ಗ್ರಾಮಸ್ಥರು ಗುರುವಾರ ತಹಶೀಲ್ದಾರ ಕಛೇರಿಯ ಶಿರಸ್ತೆದಾರ ಎಸ್.ಶ್ರೀಧರ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ  ರಕ್ಷಣಾ ವೇದಿಕೆ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ  ಮಾತನಾಡಿ, ಯಲ್ಲಮ್ಮ ಕ್ಯಾಂಪಿನಲ್ಲಿ 260ಮನೆಗಳು 400ಕ್ಕೂ ಹೆಚ್ಚು ಸಂಖ್ಯೆ ಹೊಂದಿದ್ದು, ಪ್ರತಿದಿನ ಕಂಪ್ಲಿಗೆಮತ್ತು ಹೋಸಪೇಟೆ 20ರಿಂದ30 ವಿದ್ಯಾರ್ಥಿಗಳು  ಶಾಲೆ ಕಾಲೇಜುಗಳಿಗೆ ಹೋಗುತ್ತಾರೆ. ಯಲ್ಲಮ್ಮಕ್ಯಾಂಪ್ ಗ್ರಾಮಕ್ಕೆ ಬಸ್ ನಿಲುಗಡೆ ಇಲ್ಲದ ಕಾರಣ ರೈತರು. ವಿದ್ಯಾಥರ್ಿಗಳು, ರೋಗಿಗಳು ಪ್ರಯಾಣಿಕರಿಗೆ ತುಂಬ ತೊಂದರೆಯಾಗಿದೆ. ವಿದ್ಯಾಥರ್ಿಗಳು ಶಾಲೆ ಕಾಲೇಜುಗಳಿಗೆ ಸಕಾಲದಲ್ಲಿ ತೆರಳುವುದು ಆಗುತ್ತಿಲ್ಲ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಂಭಂದಪ್ಪಟ್ಟ ಅಧಿಕಾರಿಗಳು ಯಲ್ಲಮ್ಮಕ್ಯಾಂಪ್ಗೆ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. 15ದಿನದೊಳಗಾಗಿ ಬಸ್ ನಿಲುಗಡೆ ವ್ಯವಸ್ಥೆ ಕೊಡದೆಹೋದರೆ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುಲಾಗುವುದು ಎಂದರು 

ಮನವಿ ಪತ್ರ ಸಲ್ಲಿಸುವಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎ.ಲಕ್ಷ್ಮಿಪತಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿ.ಆರ್.ಹನುಮಂತ, ಗ್ರಾಮಸ್ಥರಾದ ಯಲ್ಲಪ್ಪ, ಪರಶುರಾಮ ಗಿಳಿ, ಉಪ್ಪಾರು ಪಂಪಾಪತಿ, ಬೋವಿ ಕುಮಾರ್, ಕೆ.ಜಡೇಶ್, ಮೆಹಬೂಬ್ ಸೇರಿ ಅನೇಕರು ಉಪಸ್ಥಿತರಿದ್ದರು.