ಕಂಪ್ಲಿ 16: ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಹಿನ್ನಲೆಯಲ್ಲಿ ಕಂಪ್ಲಿಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿನ ಎನ್.ಎಂ.ಪತ್ರೆಯ್ಯಸ್ವಾಮಿ ನಿವಾಸದ ಆವರಣದಲ್ಲಿ ಭಾನುವಾರ ದಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಸೇರ್ಪಡೆಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಕಂಪ್ಲಿ ಉತ್ಸವವನ್ನು ನೆರವೇರಿಸಲಾಗುವುದು ಐ.ಟಿ ಮಾಡಿದ.ಯುವಕರು. ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರಿಗೆ ಉದ್ಯೋಗ ಒದಗಿಸಲಾಗುವುದು ಸ್ವ ಉದ್ಯೋಗ ಪಡೆಯವುದರಿಂದ ಆರ್ಥಿಕವಾಗಿ ಕುಟುಂಬದಲ್ಲಿ ಸಬಲರಾಗಲು ಸಾಧ್ಯ ೆ ಎಂದರು
ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಎನ್.ಎಂ.ಪತ್ರೆಯ್ಯಸ್ವಾಮಿ ಮಾತನಾಡಿ, ಶಾಸಕರು. ಸರಳತೆ, ಬಡವರ ಮತ್ತು ಎಲ್ಲರೊಡನೆ ಉತ್ತಮ ಬಾಂಧವ್ಯ ಅಭಿವೃಧಿಯನ್ನು ಗಮನಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಹೇಳಿದರು.
ಎನ್.ಎಂ.ಪತ್ರೆಯ್ಯಸ್ವಾಮಿ, ಗದ್ಗಿ ವಿರುಪಾಕ್ಷಿ, ದೂಪದ ಮಂಜುನಾಥ, ಗೋರ್ಕಲ್ ಮಂಜುನಾಥ, ಶಂಭುಲಿಂಗ, ಡಿ.ಮಲ್ಲಿಕಾಜರ್ುನ, ಅಂಬರೀಶ ಸೇರಿ ಅನೇಕ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆ.ಎಸ್.ಚಾಂದ್ಭಾಷ, ವೀರಾಂಜನೇಯಲು, ಕರಿಬಸವನಗೌಡ, ಎಲ್.ರಾಮನಾಯ್ಡು, ಸುಧಾಕರ, ಎಲ್.ರಾಜೇಶ್ ಸೇರಿ ಕಾಂಗ್ರೆಸ್ ಕಾರ್ಯಕರ್ತರಿದ್ದರು